Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 13 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 15 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೋಡಾಫೋನ್ ದರಕಡಿತ; ಗ್ರಾಹಕರಿಗೆ ಶೇ.67 ಹೆಚ್ಚು ಡಾಟಾ ಬೆನಿಫಿಟ್
ಜುಲೈ ತಿಂಗಳಲ್ಲಿ ಭಾರತದ ಅತಿ ದೊಡ್ಡ ನೆಟ್‌ವರ್ಕ್ ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಂಗಳು ಶೇಕಡ 67 ರಷ್ಟು ದರಕಡಿತದೊಂದಿಗೆ ಎರಡು ಸಹ ಉತ್ತಮ ಆಫರ್‌ಗಳನ್ನು ನೀಡಿದ್ದವು. ಈಗ ವೋಡಾಫೋನ್ ಸಹ ತನ್ನ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಶೇಕಡ 67 ಹೆಚ್ಚುವರಿ ಡಾಟಾವನ್ನು ಆಫರ್ ಮಾಡುತ್ತಿದೆ.
ವೋಡಾಫೋನ್ ತನ್ನ ಹೊಸ ಸ್ಕೀಮ್‌ನಲ್ಲಿ ಶೇಕಡ 67 ಹೆಚ್ಚುವರಿ ಡಾಟಾ ನೀಡುವಲ್ಲಿ ಗ್ರಾಹಕರು ಪಡೆಯಬಹುದಾದ ಬೆನಿಫಿಟ್‌ಗಳು ಏನು, ದರ ಎಷ್ಟು ಎಂಬ ಕಂಪ್ಲೀಟ್ ಡೀಟೇಲ್ ನಿಮಗಾಗಿ ಇಲ್ಲಿದೆ. ವೋಡಾಫೋನ್ ಗ್ರಾಹಕರು ಮಾತ್ರ ಮಿಸ್ ಮಾಡದೇ ಓದಿರಿ.
ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್ ಬಳಸುವುದು ಹೇಗೆ?

ವೋಡಾಫೋನ್
ದರ ಕಡಿತ ಮಾಡಿ ಗ್ರಾಹಕರನ್ನು ಸೆಳೆಯುವ ಸಾಲಿಗೆ ಈಗ ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಂಗಳ ಜೊತೆಗೆ ವೋಡಾಫೋನ್ ಸಹ ಸೇರಿಕೊಂಡಿದೆ. ವೋಡಾಫೋನ್ ಸಹ ಡಾಟಾ ಪ್ಯಾಕ್ ದರ ಕಡಿತಗೊಳಿಸಿ ಶೇಕಡ 67 ರಷ್ಟು ಹೊಸ ಬೆನಿಫಿಟ್‌ಗಳನ್ನು ನೀಡುತ್ತಿದೆ.

ಒಂದೇ ಬೆಲೆಗೆ ಡಾಟಾ ಪ್ಯಾಕ್
ವೋಡಾಫೋನ್ ಶೇಕಡ 67 ರಷ್ಟು ಬೆನಿಫಿಟ್‌ನ ಹೊಸ ಸ್ಕೀಮ್ ಆಫರ್ ಮಾಡುತ್ತಿದ್ದು, ಹೆಚ್ಚಿನ ಡಾಟಾ 2G, 3G, 4G ಸೇವೆಗಳು ಒಂದೇ ದರದಲ್ಲಿ ವೋಡಾಫೋನ್ ಗ್ರಾಹಕರಿಗೆ ಸಿಗಲಿವೆ.

ಡಾಟಾ ಬೆನಿಫಿಟ್‌ಗಳು ಯಾವುವು?
ಈ ಹಿಂದೆ ವೋಡಾಫೋನ್‌ನ 3GB 3G/4G ತಿಂಗಳ ರೀಚಾರ್ಜ್ ಪ್ಯಾಕ್ ಬೆಲೆ ರೂ 650 ಇತ್ತು. ಆದರೆ ಈಗ ವೋಡಾಫೋನ್ ಹೊಸ ದರ ಕಡಿತ ಯೋಜನೆಯಿಂದ ಬೆಲೆ ರೂ 650 ಕ್ಕೆ 5GB 3G/4G ಡಾಟಾ ಬೆನಿಫಿಟ್ ದೊರೆಯಲಿದೆ ಎಂದು ವೋಡಾಫೋನ್ ಹೇಳಿದೆ.

ಡಾಟಾ ಬೆನಿಫಿಟ್‌ಗಳು ಯಾವುವು?
ವೋಡಾಫೋನ್‌ನ ಈ ಹಿಂದಿನ ರೂ 449 ರ ಸ್ಕೀಮ್‌ನ 3G/4G ಡಾಟಾದಲ್ಲಿ ಶೇಕಡ 50 ರಷ್ಟು ಹೆಚ್ಚಳ ಮಾಡಿದ್ದು, 2GB ಡಾಟಾದ ಬದಲಾಗಿ ಅದೇ ಬೆಲೆಗೆ 3GB ಡಾಟಾ ಬಳಸಬಹುದಾಗಿದೆ. ಅಲ್ಲದೇ ರೂ 999 3G/4G ಡಾಟಾ ಪ್ಯಾಕ್ 10GB ಡಾಟಾ ನೀಡಲಿದೆ. ಇದು 54 ಶೇಕಡ ಹೆಚ್ಚಿನ ಬೆನಿಫಿಟ್ ಹೊಂದಿದೆ.

ಆನ್‌ಲೈನ್‌ಗೆ ಬರಲು ಪ್ರೇರಣೆ
ಕನಿಷ್ಟ ಮಟ್ಟದಲ್ಲಿ ಇಂಟರ್ನೆಟ್ ಬಳಸುವವರನ್ನು ಕೈಗೆಟಕುವ ಬೆಲೆಗೆ ಡಾಟಾ ಪ್ಯಾಕ್ ನೀಡುವ ಮುಖಾಂತರ ಆನ್‌ಲೈನ್‌ಗೆ ಬರಲು ಪ್ರೇರಣೆ ನೀಡಲಾಗುವುದು ಎಂದು ವೋಡಾಫೋನ್ ಹೇಳಿದೆ. ವೋಡಾಫೋನ್‌ನ ಈ ಬೆಳವಣಿಗೆ ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಂ ಸೇವೆಗಳು ತಮ್ಮ ಡಾಟಾ ಟ್ಯಾರಿಫ್ ಅನ್ನು ಕಡಿತಗೊಳಿಸಿದ 15 ದಿನಗಳ ಒಳಗೆ ಆಗಿದೆ.

ಇತರೆ ಡಾಟಾ ಪ್ಯಾಕ್‌ಗಳ ಹೊಸ ಬೆನಿಫಿಟ್ ಏನು?
ಕಡಿಮೆ ಬೆಲೆಯ 2G ಡಾಟಾ ಪ್ಯಾಕ್ ರೂ 39 ಕ್ಕೆ ಈ ಹಿಂದೆ ವೋಡಾಫೋನ್ 5 ದಿನ ವ್ಯಾಲಿಡಿಟಿಯ 160MB ಡಾಟಾ ನೀಡುತ್ತಿತ್ತು. ಆದರೆ ಈಗ ಅದೇ ಬೆಲೆಗೆ 225MB ಡಾಟಾ ಸಿಗಲಿದೆ. ಇದರಲ್ಲಿ 41 ಶೇಕಡ ಡಾಟಾ ಹೆಚ್ಚಳ ಮಾಡಲಾಗಿದೆ. 12 ರೂ ಬೆಲೆಯ ಒಂದು ದಿನದ 3G/4G 30MB ಬದಲಾಗಿ ಈಗ ವೋಡಾಫೋನ್ 50MB ಡಾಟಾ ನೀಡುತ್ತಿದೆ. ಇದು ಶೇಕಡ 67 ರಷ್ಟು ಹೆಚ್ಚಳವಾಗಿದೆ. ಆದರೆ ಬೆನಿಫಿಟ್‌ಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು ಎಂಬುದನ್ನು ಹೇಳಿದೆ.

ಗ್ರಾಹಕರಿಗೆ ಡಾಟಾ ಪ್ಯಾಕ್‌ಗಳ ದರ ಕಡಿತ ಹಬ್ಬ
ಜುಲೈ ತಿಂಗಳಲ್ಲಿ ಭಾರತದ ಅತಿ ದೊಡ್ಡ ನೆಟ್‌ವರ್ಕ್ ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಂಗಳು ಶೇಕಡ 67 ರಷ್ಟು ದರಕಡಿತದೊಂದಿಗೆ ಎರಡು ಸಹ ಉತ್ತಮ ಆಫರ್‌ಗಳನ್ನು ನೀಡಿದ್ದವು. ಈಗ ವೋಡಾಫೋನ್ ಸಹ ತನ್ನ ಗ್ರಾಹಕರಿಗೆ ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಶೇಕಡ 67 ಹೆಚ್ಚುವರಿ ಡಾಟಾವನ್ನು ಆಫರ್ ಮಾಡುತ್ತಿದೆ. ಇದರಿಂದ ಹೊಸ ಗ್ರಾಹಕರು ಶೀಘ್ರವಾಗಿ ಹುಟ್ಟಿಕೊಳ್ಳುವ ಬರವಸೆಯನ್ನು ವೋಡಾಫೋನ್ ಹೊಂದಿದೆ ಎಂದು ವೋಡಾಫೋನ್ ಇಂಡಿಯಾದ ಉದ್ಯಮ ನಿರ್ದೇಶಕ 'ಸಂದೀಪ್ ಕಟಾರಿಯಾ' ಹೇಳಿದ್ದಾರೆ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470