Subscribe to Gizbot

ಭಾರತದಲ್ಲಿ ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಎರಡು ಸಾವು: ಸುರಕ್ಷಿತರಾಗಿರುವುದು ಹೇಗೆ..?

Written By:

ಸದ್ಯದ ಒಂದು ವರದಿ ಪ್ರಕಾರ ಭಾರತದಲ್ಲಿ ವಾಯು ಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಇಬ್ಬರು ಮರಣ ಹೊಂದುತ್ತಿದ್ದಾರೆ ಎನ್ನಲಾಗಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ಒಂದು ಮಿಲಿಯನ್ ಮಂದಿ ಪ್ರತಿ ವರ್ಷ ವಾಯು ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ.

ಭಾರತದಲ್ಲಿ ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಎರಡು ಸಾವು

ಓದಿರಿ: 10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ದೇಶದಲ್ಲಿ ಒಂದು ಕಡೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇನ್ನುಂದು ಕಡೆ ನಗರೀಕರಣ, ಕೈಗಾರಿಕಿಕರಣ ಮತ್ತು ಅತೀಯಾದ ವಾಹನದಟ್ಟನೆಯಿಂದಾಗಿ ನಗರ ಪ್ರದೇಶದಲ್ಲದೇ ಗ್ರಾಮೀಣ ಪ್ರದೇಶದಲ್ಲಿಯೂ ವಾಯು ಮಾಲಿನ್ಯವು ಅತಿಯಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬಿರುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾನ್ಸರ್‌ಗೆ ಕಾರಣ:

ಕ್ಯಾನ್ಸರ್‌ಗೆ ಕಾರಣ:

ಈ ವಾಯು ಮಾಲಿನ್ಯವು ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದು, ಇದರಿಂದ ಪುಟ್ಟ ಮಕ್ಕಳಲ್ಲಿ, ಹಿರಿಯರಲ್ಲಿ ಮತ್ತು ಗರ್ಭಿಣಿ ಮಹಿಳೆಯರ ಆರೋಗ್ಯದ ಹೆಚ್ಚಿನ ದುಷ್ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ವಾಯು ಮಾಲಿನ್ಯ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ನೋಡುವುದಾದರೆ.

ಮಾಸ್ಕ್ ಬಳಕೆ ಮಾಡಿ:

ಮಾಸ್ಕ್ ಬಳಕೆ ಮಾಡಿ:

ಸದ್ಯ ಹೆಚ್ಚಿರುವ ವಾಯು ಮಾಲಿನ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್‌ಗಳನ್ನು ಬಳಸಬಹುದಾಗಿದೆ, ಸದ್ಯ ಮಾರುಕಟ್ಟೆಯಲ್ಲಿ ಇವು ದೊರೆಯಲಿದ್ದು, ಅನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಇವು ಲಭ್ಯವಿದೆ.

ಯಾವ ಬ್ರಾಂಡ್‌ನ ಮಾಸ್ಕ್ ಖರೀದಿಸುವ ಮುನ್ನ PM2.5 filtration ಎಂದು ನಮೂದಿಸಿರುವ ಮಾಸ್ಕ್‌ಗಳನ್ನು ಖರೀದಿಸಿ, ಇದು ಗಾಳಿಯಲ್ಲಿರುವ ಧೂಳು, ಕೆಲ ರಾಸಾಯನಿಕಗಳು ನಿಮ್ಮ ದೇಹವನ್ನು ಸೇರದಂತೆ ತಡೆಯಲಿದೆ.

ಏರ್‌ ಪ್ಯೂರಿಫೈಯರ್‌ಗಳು:

ಏರ್‌ ಪ್ಯೂರಿಫೈಯರ್‌ಗಳು:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ತಂತ್ರಜ್ಞಾನಗಳಲ್ಲಿ ಭವಿಷ್ಯದಲ್ಲಿ ಬಳಸಲೇ ಬೇಕಾದುವಳಗಲ್ಲಿ ಒಂದಾದ ಏರ್‌ ಪ್ಯೂರಿಫೈಯರ್‌ಗಳು ಇಂದು ತಮ್ಮ ಅವಶ್ಯತೆಯನ್ನು ಸಾರಿ ಹೇಳುತ್ತಿವೆ. ಪ್ರಮುಖ ಕಂಪನಿಗಳು ಈ ಸಾಧನದ ತಯಾರಿಕೆಯಲ್ಲಿ ತೊಡಗಿಕೊಂಡಿವೆ.

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಏರ್‌ ಪ್ಯೂರಿಫೈಯರ್ 10,000 ರೂ.ಗಳಿಂದ ಶುರುವಾಗಲಿದ್ದು, ಕಡಿಮೆ ಬೆಲೆಯ ಏರ್‌ ಪ್ಯೂರಿಫೈಯರ್‌ಗಳು ಕೇವಲ ಒಂದು ರೂಮಿನ ವಾತಾವರಣದಲ್ಲಿರುವ ಗಾಳಿಯನ್ನು ಶುದ್ಧಗೊಳಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ಲೂಏರ್‌ ಕಂಪನಿಯ ಏರ್‌ ಪ್ಯೂರಿಫೈಯರ್‌ಗಳು 22,000 ದಿಂದ 55,000 ರೂಗಳ ವರೆಗೂ ಲಭ್ಯವಿದೆ. ಇದಲ್ಲದೇ ಕ್ಸಿಯೋಮಿ ಕಂಪನಿಯೂ ಏರ್‌ ಪ್ಯೂರಿಫೈಯರ್‌ಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ನಿಮ್ಮ ಮನೆಯ ವಾತಾವರಣವನ್ನು ಶುದ್ಧಗೊಳಿಸಗೊಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
A recently published report suggests that an average of two Indians are dying every minute as a direct consequence of air pollution. That’s over a million deaths per year. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot