ಏರ್‌ಟೆಲ್‌ 4G ಸಿಮ್ ಅಪ್‌ಗ್ರೇಡ್ ಮಾಡಿ ಉಚಿತ 2GB 4G ಡಾಟಾ ಪಡೆಯಿರಿ!

By Suneel
|

ದಿಪಾವಳಿ ಹಬ್ಬ ಇನ್ನು ಬೆರಳೆಣಿಕೆ ದಿನಗಳಷ್ಟಿದೆ. ಹಲವು ಫೆಸ್ಟಿವ್ ಸೀಸನ್‌ ಆಫರ್ ಎಲ್ಲಾ ಕ್ಷೇತ್ರದಲ್ಲಿಯೂ ಲಭ್ಯವಾಗುತ್ತಿವೆ. ಎಕ್ಸ್‌ಚೇಂಜ್‌ ಆಫರ್, ಡಿಸ್ಕೌಂಟ್ಸ್ ಮತ್ತು ಇತರೆ ಆಫರ್‌ಗಳು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ಸ್, ಟ್ಯಾಬ್ಲೆಟ್ ಮತ್ತು ಇತರೆ ಗ್ಯಾಜೆಟ್‌ಗಳ ಖರೀದಿಗೆ ಲಭ್ಯವಿದೆ.

ಹಿಂದಿನ ವರ್ಷದ ದಿಪಾವಳಿ ಆಚರಣೆಗೂ ಈ ವರ್ಷದ ದಿಪಾವಳಿ ಹಬ್ಬದ ಸೀಸನ್‌ಗೂ ವ್ಯತ್ಯಾಸವೆಂದರೆ, ದಿಪಾವಳಿ ಆಫರ್‌ ಕೇವಲ ಗ್ಯಾಜೆಟ್‌ಗಳಿಗೆ ಮಾತ್ರವಲ್ಲದೇ, ಟೆಲಿಕಾಂ ಆಪರೇಟರ್‌ಗಳು ಸಹ ಆಫರ್‌ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದ್ದಾರೆ. ಈಗಾಗಲೇ ವೊಡಾಫೋನ್‌ ಉಚಿತ ಇನ್‌ಕಮ್ಮಿಂಗ್ ಕರೆಗಳನ್ನು ರಾಷ್ಟ್ರೀಯ ರೋಮಿಂಗ್ ಕರೆಗಳಿಗೆ ನೀಡಿದೆ. ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್ ಆಫರ್‌ ಅನ್ನು 2017 ಡಿಸೆಂಬರ್‌'ವರೆಗೆ ಆಯ್ಕೆಯ ಸ್ಮಾರ್ಟ್‌ಫೋನ್‌ಗೆ ನೀಡಿದೆ.

ದಿಪಾವಳಿ ಧಮಾಕಾ: ಏರ್‌ಟೆಲ್‌ನಿಂದ 3GB 4G ಡಾಟಾ ಬರೇ ರೂ.348

ಅಂದಹಾಗೆ ಏರ್‌ಟೆಲ್‌ ತನ್ನ ದಿಪಾವಳಿ ಆಫರ್‌ನಲ್ಲಿ 2GB 4G ಡಾಟಾವನ್ನು, ಯಾರು ತಮ್ಮ ಏರ್‌ಟೆಲ್‌ ಸಿಮ್‌ ಅನ್ನು 4G ಗೆ ಆಪ್‌ಗ್ರೇಡ್‌ ಮಾಡಿಕೊಳ್ಳುತ್ತಾರೋ ಅವರಿಗೆ ಉಚಿತವಾಗಿ ನೀಡುತ್ತಿದೆ. ಇದು 4G ಸಿಮ್ ಅಪ್‌ಗ್ರೇಡ್‌ ಪ್ರಮೋಶನಲ್ ಆಫರ್ ಸಹ ಆಗಿದೆ.

ಏರ್‌ಟೆಲ್‌(Airtel) ಸಿಮ್‌ ಬಳಕೆದಾರರು ತಮ್ಮ ಸಿಮ್‌ ಅನ್ನು 4G ಗೆ ಅಪ್‌ಗ್ರೇಡ್‌ ಮಾಡಿಕೊಳ್ಳುವ ಬಗ್ಗೆ ಮತ್ತು 2GB ಉಚಿತ ಡಾಟಾ ಪಡೆಯುವ ಬಗ್ಗೆ ಮಾಹಿತಿ ತಿಳಿಸುತ್ತಿದೆ. ಸಂಪೂರ್ಣ ಪ್ರಕ್ರಿಯೆಗಾಗಿ ಲೇಖನದ ಸ್ಲೈಡರ್‌ ಓದಿರಿ.

ವೊಡಾಫೋನ್ 4G, ಜಿಯೋ 4G ಗಿಂತ ವೇಗ: 'ವೊಡಾಫೋನ್ 4G'ಗೆ ಅಪ್‌ಗ್ರೇಡ್ ಹೇಗೆ?

ಏರ್‌ಟೆಲ್‌ ಸಿಮ್ ಅಪ್‌ಗ್ರೇಡ್

ಏರ್‌ಟೆಲ್‌ ಸಿಮ್ ಅಪ್‌ಗ್ರೇಡ್

ಅಂದಹಾಗೆ ಏರ್‌ಟೆಲ್‌ ಬಳಕೆದಾರರು ಈಗ ಹೊಂದಿರುವ 2G, 3G ಸಿಮ್‌ನಿಂದ 4G ಏರ್‌ಟೆಲ್‌ ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್‌ ಮಾಡಲು www.airtel.in/4g/sim-swap ವೆಬ್‌ಸೈಟ್‌ಗೆ ಭೇಟಿ ನೀಡಿ. ಮೊದಲಿಗೆ ನಿಮ್ಮ ಹೆಸರು, ನಂತರ ಮೊಬೈಲ್‌ ನಂಬರ್, ಇಮೇಲ್‌ ಐಡಿ, ಸಿಮ್ ತಲುಪಿಸಬೇಕಾದ ವಿಳಾಸವನ್ನು ಎಂಟರ್‌ ಮಾಡಿ. ನಂತರ 'Send me a 4G SIM' ಬಟನ್ ಹಿಟ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೆಸೇಜ್‌ ಸೆಂಡ್ ಮಾಡಿ

ಮೆಸೇಜ್‌ ಸೆಂಡ್ ಮಾಡಿ

ಒಮ್ಮೆ ಏರ್‌ಟೆಲ್ 4G ರೆಡಿ ಸಿಮ್ ಸ್ವೀಕರಿಸಿದ ನಂತರ, 20 ಡಿಜಿಟ್‌ನ ಸಿಮ್‌ ನಂಬರ್‌ ಅನ್ನು 121 ಗೆ ಸೆಂಡ್ ಮಾಡಿ. ಈ 20 ಡಿಜಿಟ್‌ನ ಸಿಮ್ ನಂಬರ್ 2G ಅಥವಾ 3G ಸಿಮ್‌ ಕಾರ್ಡ್ ಪ್ಯಾಕ್ ಹಿಂದೆ ಬರೆದಿರುತ್ತದೆ.

ಏರ್‌ಟೆಲ್‌ನಿಂದ ಸ್ವೀಕೃತಿ

ಏರ್‌ಟೆಲ್‌ನಿಂದ ಸ್ವೀಕೃತಿ

ಮೆಸೇಜ್ ಸೆಂಡ್ ಮಾಡಿದ ನಂತರ, ಏರ್‌ಟೆಲ್‌ನಿಂದ ಒಂದು ಮೆಸೇಜ್‌ ಬರುತ್ತದೆ. ಈ ಮೆಸೇಜ್‌ ಏರ್‌ಟೆಲ್ ನಿಮ್ಮ ವಿನಂತಿಯನ್ನು ಸ್ವೀಕರಿಸಿದೆ ಎಂಬುದರ ಬಗ್ಗೆ. ನಂತರ ನೀವು '1' ಪ್ರೆಸ್‌ ಮಾಡಿ ರೀಪ್ಲೇ ಮಾಡಬೇಕು.

ಹಿಂದಿನ ಏರ್‌ಟೆಲ್‌ ಸಿಮ್‌ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತದೆ

ಹಿಂದಿನ ಏರ್‌ಟೆಲ್‌ ಸಿಮ್‌ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತದೆ

ಮೇಲಿನ ಪ್ರಕ್ರಿಯೆಗಳು ಮುಗಿದ ನಂತರ, ನಿಮ್ಮ ಹಿಂದಿನ ಸಿಮ್‌ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತದೆ. ಡಿಸ್‌ಕನೆಕ್ಟ್ ಆದ ನಂತರ ಹೊಸ 4G ಏರ್‌ಟೆಲ್‌ ಸಿಮ್‌ ಅನ್ನು ನಿಮ್ಮ ಫೋನ್‌ಗೆ ಇನ್‌ಸರ್ಟ್ ಮಾಡಿ. ಆದರೆ ನೀವು 4G ಸ್ಮಾರ್ಟ್‌ಫೋನ್‌ ಅನ್ನು ಖಡ್ಡಾಯವಾಗಿ ಹೊಂದಿದ್ದರೇ ಮಾತ್ರ, ಏರ್‌ಟೆಲ್‌ 4G ಸೇವೆಯ ಬೆನಿಫಿಟ್‌ಗಳನ್ನು ಹೊಂದಲು ಸಾಧ್ಯ.

 2GB 4G ಏರ್‌ಟೆಲ್‌ನ ಉಚಿತ ಡಾಟಾ ಪಡೆಯಿರಿ

2GB 4G ಏರ್‌ಟೆಲ್‌ನ ಉಚಿತ ಡಾಟಾ ಪಡೆಯಿರಿ

ಸಿಮ್‌ ಅಪ್‌ಗ್ರೇಡ್‌ ಪ್ರಕ್ರಿಯೆ ಮುಗಿದ ನಂತರ, ನಿಮ್ಮ ಏರ್‌ಟೆಲ್‌ ನಂಬರ್ 2GB 4G ಡಾಟಾವನ್ನು ಉಚಿತವಾಗಿ ಕ್ರೆಡಿಟ್ ಪಡೆಯುತ್ತದೆ. ಅಂದಹಾಗೆ ಸಿಮ್‌ ಅಪ್‌ಗ್ರೇಡ್ ಒಮ್ಮೆ ಮಾತ್ರ. ಉಚಿತ ಡಾಟಾ ಪಡೆಯಲು ಏರ್‌ಟೆಲ್‌ ನಂಬರ್‌ನಿಂದ 52122 ನಂಬರ್‌ಗೆ 5 ದಿನಗಳ ಒಳಗಾಗಿ ಮಿಸ್‌ಕಾಲ್‌ ನೀಡಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Diwali Offers: Upgrade Your Existing SIM to Airtel 4G and Get 2GB 4G Data for FREE. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X