ಅಮೆಜಾನ್‌ ದೀಪಾವಳಿ ಸೇಲ್‌: ಸ್ಮಾರ್ಟ್ ಡೋರ್ ಲಾಕ್‌ಗಳಿಗೆ ಅಧಿಕ ಡಿಸ್ಕೌಂಟ್‌

|

ಪ್ರಮುಖ ಇ-ಕಾಮರ್ಸ್‌ ತಾಣವಾದ ಅಮೆಜಾನ್ ದೀಪಾವಳಿ ಹಬ್ಬದ ಅಂಗವಾಗಿ ಪ್ರಮುಖ ಡಿವೈಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ಘೋಷಣೆ ಮಾಡಿದೆ. ಈಗಾಗಲೇ ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ಗಳು ಭಾರೀ ಡಿಸ್ಕೌಂಟ್‌ ಪಡೆದುಕೊಂಡಿವೆ. ಇದರ ಜೊತೆಗೆ ಈಗ ಫಿಂಗರ್‌ ಪ್ರಿಂಟ್ ಸೆನ್ಸರ್‌ ಇರುವ ಸ್ಮಾರ್ಟ್ ಡೋರ್ ಲಾಕ್‌ಗಳನ್ನು ಮಾರಾಟ ಮಾಡುತ್ತಿದೆ.

ಸ್ಮಾರ್ಟ್‌

ಹೌದು, ಈಗ ಸ್ಮಾರ್ಟ್‌ ಫಿಂಗರ್‌ಪ್ರಿಂಟ್ ಸೆನ್ಸರ್‌ ಡೋರ್ ಲಾಕ್‌ ಮನೆಯನ್ನು ಇನ್ನಷ್ಟು ಸ್ಮಾರ್ಟ್‌ ಮಾಡಲಿವೆ. ಮನೆಯ ಬಾಗಿಲನ್ನು ತೆರೆಯಲು ಹಾಗೂ ಮುಚ್ಚಲು ವಿವಿಧ ಆಯ್ಕೆಗಳನ್ನು ನೀಡುತ್ತದೆ. ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ ಡಿವೈಸ್‌ಗೆ ಹೆಚ್ಚಿನ ರಿಯಾಯಿತಿ ಘೋಷಣೆ ಮಾಡಲಾಗಿದ್ದು, 15,000ರೂ. ಒಳಗೆ ಲಭ್ಯ ಇರುವ ಸ್ಮಾರ್ಟ್ ಡೋರ್ ಲಾಕ್‌ಗಳ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ವಿವರ ನೀಡಿದ್ದೇವೆ ಓದಿರಿ.

L & G ಡಿಜಿಟಲ್ ಸ್ಮಾರ್ಟ್ ಡೋರ್ ಲಾಕ್

L & G ಡಿಜಿಟಲ್ ಸ್ಮಾರ್ಟ್ ಡೋರ್ ಲಾಕ್

ಈ ಸ್ಮಾರ್ಟ್ ಡೋರ್ ಲಾಕ್ ಅಮೆಜಾನ್‌ನಲ್ಲಿ 17,999ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 12,000ರೂ. ಗಳಿಗೆ ಲಭ್ಯವಿದೆ. ಈ ಡಿವೈಸ್‌ ಮರದ ಮತ್ತು ಲೋಹದ ಬಾಗಿಲುಗಳಿಗೆ ಸೂಕ್ತವಾಗಿದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಪಾಸ್‌ಕೋಡ್, RFID ಕಾರ್ಡ್, ಓಟಿವಿ, ಅಪ್ಲಿಕೇಶನ್ ಜೊತೆಗೆ ತುರ್ತು ಕೀಗಳನ್ನು ಬಳಕೆ ಮಾಡಿಕೊಂಡು ನಿಯಂತ್ರಣ ಮಾಡಬಹುದು.

QUBO ಸ್ಮಾರ್ಟ್ ಡೋರ್ ಲಾಕ್

QUBO ಸ್ಮಾರ್ಟ್ ಡೋರ್ ಲಾಕ್

ಈ ಡಿವೈಸ್‌ 16,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 13,990ರೂ. ಗಳಲ್ಲಿ ಅಮೆಜಾನ್‌ನಲ್ಲಿ ಕೊಂಡುಕೊಳ್ಳಬಹುದು. ಈ ಸ್ಮಾರ್ಟ್‌ ಡಿವೈಸ್‌ ಫಿಂಗರ್‌ಪ್ರಿಂಟ್, ಪಾಸ್‌ಕೋಡ್, ಬ್ಲೂಟೂತ್ ಮೊಬೈಲ್ ಅಪ್ಲಿಕೇಶನ್, RFID ಕಾರ್ಡ್ ಹಾಗೂ ತುರ್ತು ಕೀಗಳನ್ನು ಒಳಗೊಂಡಂತೆ 5 ಆಯ್ಕೆಗಳಲ್ಲಿ ನಿರ್ವಹಣೆ ಮಾಡಬಹುದು.

ಲಾವ್ನಾ ವೈ-ಫೈ ಸ್ಮಾರ್ಟ್ ಡೋರ್ ಲಾಕ್

ಲಾವ್ನಾ ವೈ-ಫೈ ಸ್ಮಾರ್ಟ್ ಡೋರ್ ಲಾಕ್

ಈ ಸ್ಮಾರ್ಟ್ ಡೋರ್ ಲಾಕ್ ಅಮೆಜಾನ್‌ನಿಂದ 9,209ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 10,790ರೂ. ಗಳಲ್ಲಿ ಲಭ್ಯ ಇದೆ. ಈ ಡಿವೈಸ್‌ ಫಿಂಗರ್‌ಪ್ರಿಂಟ್, ಪಾಸ್‌ಕೋಡ್ ಸೇರಿದಂತೆ ಏಳು ಮಾರ್ಗದ ಮೂಲಕ ನಿಯಂತ್ರಣ ಮಾಡಬಹುದು. ಇದರಲ್ಲಿ ವೈ-ಫೈ ಅನ್‌ಲಾಕಿಂಗ್ ಆಯ್ಕೆ ಇರುವುದು ವಿಶೇಷ.

ವೇಲೆನ್ಸಿಯಾ ಹೋಲಾ ಸ್ಮಾರ್ಟ್ ಡೋರ್ ಲಾಕ್

ವೇಲೆನ್ಸಿಯಾ ಹೋಲಾ ಸ್ಮಾರ್ಟ್ ಡೋರ್ ಲಾಕ್

ಈ ಡೋರ್ ಲಾಕ್ ಮೂಲ ಬೆಲೆಯಿಂದ 13,500ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 8,499ರೂ. ಗಳಲ್ಲಿ ಲಭ್ಯ ಇದೆ. ಇದರಲ್ಲಿ ಟಚ್ ಕೀಪ್ಯಾಡ್ ತಂತ್ರಜ್ಞಾನ ಇದ್ದು, ವಿವಿಧ ಪಿನ್ ಕೋಡ್‌ಗಳೊಂದಿಗೆ ನಿಯಂತ್ರಣ ಮಾಡಬಹುದು. ಅಲಾರಂ ಆಯ್ಕೆ ಸಹ ಇದರಲ್ಲಿದ್ದು, ಯಾರಾದರೂ ಅಪರಿಚಿತರು ಮನೆಗೆ ಪ್ರವೇಶ ಮಾಡಲು ಮುಂದಾದರೆ ಎಚ್ಚರಿಕೆ ನೀಡಲಿದೆ.

Yale YDME 100 NxT ಸ್ಮಾರ್ಟ್ ಡೋರ್ ಲಾಕ್

Yale YDME 100 NxT ಸ್ಮಾರ್ಟ್ ಡೋರ್ ಲಾಕ್

ಈ ಡಿವೈಸ್ ಸಹ 8,500ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 14,499ರೂ. ಗಳಲ್ಲಿ ಮಾರಾಟವಾಗುತ್ತಿದೆ. ಇದರಲ್ಲಿ ತಪ್ಪಾದ ಪಾಸ್‌ವರ್ಡ್ ನಮೂದು ಮಾಡಿದಾಗ ಅಥವಾ ಅಪರಿಚಿತರು ಬಾಗಿಲು ತೆಗೆಯಲು ಮುಂದಾದಾಗ ಶಬ್ಧ ಮಾಡುತ್ತದೆ.

NIAM ಸ್ಮಾರ್ಟ್ ಡೋರ್ ಲಾಕ್

NIAM ಸ್ಮಾರ್ಟ್ ಡೋರ್ ಲಾಕ್

ಈ ಡೋರ್ ಲಾಕ್‌ 6,439ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 7,499ರೂ. ಗಳಲ್ಲಿ ಲಭ್ಯ ಇದೆ. ಒನ್-ಟಚ್ ಡೈರೆಕ್ಟ್ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್ ಫೀಚರ್‌ ಹೊಂದಿದ್ದು, ಪಿನ್‌ಕೋಡ್‌ ಹಾಗೂ ಇತರೆ ಅನ್‌ಲಾಕ್‌ ವ್ಯವಸ್ಥೆ ಜೊತೆ ನಿಯಂತ್ರಣ ಮಾಡಬಹುದು.

ಡೊರ್ಸೆಟ್ ಸ್ಮಾರ್ಟ್ ಡಿಜಿಟಲ್ ಡೋರ್ ಲಾಕ್

ಡೊರ್ಸೆಟ್ ಸ್ಮಾರ್ಟ್ ಡಿಜಿಟಲ್ ಡೋರ್ ಲಾಕ್

ಈ ಡಿವೈಸ್‌ ಮೂಲ ಬೆಲೆಯಿಂದ 5,202ರೂ. ಗಳ ಡಿಸ್ಕೌಂಟ್‌ ಪಡೆದಿದ್ದು, 11,499ರೂ. ಗಳಲ್ಲಿ ಮಾರಾಟಕ್ಕೆ ಲಭ್ಯ ಇದೆ. ಈ ಡಿವೈಸ್‌ಅನ್ನು ಫಿಂಗರ್‌ಪ್ರಿಂಟ್ ಫೀಚರ್‌ ಮೂಲಕ ನಿಯಂತ್ರಣ ಮಾಡಬಹುದು. ಹೆಚ್ಚುವರಿಯಾಗಿ RFID ಕಾರ್ಡ್‌, ಪಾಸ್‌ವರ್ಡ್‌ ವ್ಯವಸ್ಥೆಯನ್ನೂ ಸಹ ಬಳಕೆ ಮಾಡಿಕೊಳ್ಳಬಹುದು.

ಓಝೋನ್ ಡಿಜಿಟಲ್ ಲಾಕ್

ಓಝೋನ್ ಡಿಜಿಟಲ್ ಲಾಕ್

ಈ ಡಿವೈಸ್‌ 3,891ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 11,099ರೂ. ಗಳಲ್ಲಿ ಖರೀದಿಗೆ ಲಭ್ಯ ಇದೆ. ಈ ಸ್ಮಾರ್ಟ್‌ ಡಿವೈಸ್‌ ಐದು ರೀತಿಯಲ್ಲಿ ನಿಯಂತ್ರಣಕ್ಕೆ ಒಳಪಡುತ್ತದೆ. ಇದರಲ್ಲಿ ಕೀಗಳ ಆಯ್ಕೆ ಇಲ್ಲ. ಸತತ ನಾಲ್ಕು ತಪ್ಪಾದ ಪಿನ್‌ಗಳನ್ನು ಎಂಟ್ರಿ ಮಾಡಿದಾದ ಈ ಬಯೋಮೆಟ್ರಿಕ್ ಡೋರ್ ಲಾಕ್ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.

ಓಝೋನ್ ಸ್ಮಾರ್ಟ್ ಡಿಜಿಟಲ್ ಡೋರ್ ಲಾಕ್

ಓಝೋನ್ ಸ್ಮಾರ್ಟ್ ಡಿಜಿಟಲ್ ಡೋರ್ ಲಾಕ್

ಈ ಡಿಜಿಟಲ್ ಡೋರ್ ಲಾಕ್ 3,641ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 9,999ರೂ. ಗಳಲ್ಲಿ ಲಭ್ಯ ಇದೆ. ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್ ಸೇರಿದಂತೆ ಇತರೆ ಅನ್‌ಲಾಕಿಂಗ್ ಆಯ್ಕೆಗಳನ್ನೂ ಬಳಕೆ ಮಾಡಬಹುದಾಗಿದೆ. OzoLok ಮೊಬೈಲ್ ಅಪ್ಲಿಕೇಶನ್‌ ಅನ್ನು ಸಹ ಬಳಕೆ ಮಾಡಿಕೊಂಡು ನಿಯಂತ್ರಣ ಮಾಡಬಹುದಾಗಿದೆ.

Best Mobiles in India

English summary
e-commerce site Amazon has announced huge discounts on major devices on the occasion of Diwali. Similarly, smart door locks are also heavily discounted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X