ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್‌: ಶುರುವಾಯ್ತು ಡಿಸ್ಕೌಂಟ್‌ಗಳ ಅಬ್ಬರ!

|

ಅಮೆಜಾನ್ ಇ ಕಾಮರ್ಸ್‌ ತಾಣವು ತನನ್ ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ (Amazon Great Republic Day 2023) ಸೇಲ್‌ ದಿನಾಂಕ ಈಗಾಗಲೇ ಪ್ರಕಟಿಸಿದೆ. ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಇದೇ ಜನವರಿ 14 ರಂದು ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ತೆರೆಯುತ್ತದೆ. ಹಾಗೆಯೇ ಇನ್ನುಳಿದ ಎಲ್ಲ ಗ್ರಾಹಕರಿಗೆ ಜನವರಿ 15 ರಂದು ಗ್ರೇಟ್ ರಿಪಬ್ಲಿಕ್ ಡೇ ರಿಯಾಯಿತಿ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್‌: ಶುರುವಾಯ್ತು ಡಿಸ್ಕೌಂಟ್‌ಗಳ ಅಬ್ಬರ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟ ಮೇಳದಲ್ಲಿ ಕೆಲವು ಜನಪ್ರಿಯ ಹಾಗೂ ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿಯಲ್ಲಿ ಖರೀದಿಗೆ ಲಭ್ಯವಾಗಲಿವೆ. ಇದರೊಂದಿಗೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ನಿಂದ ಹೆಚ್ಚುವರಿ ರಿಯಾಯಿತಿಗಳು ಲಭ್ಯವಾಗಲಿವೆ. ಅಂದಹಾಗೆ ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿರುವ ಈ ಮಾರಾಟವು ಇದೇ ಜನವರಿ 20 ರವರೆಗೆ ಚಾಲ್ತಿ ಇರಲಿದೆ.

ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ವೇಳೆ ಆಪಲ್‌, ಒನ್‌ಪ್ಲಸ್‌, ರೆಡ್ಮಿ, ಪೊಕೊ, ಸ್ಯಾಮ್‌ಸಂಗ್‌ ಸಂಸ್ಥೆಯ ಕೆಲವು ಫೋನ್‌ಗಳಿಗೆ ದೊಡ್ಡ ಡಿಸ್ಕೌಂಟ್‌ ಲಭ್ಯ ಮಾಡಲಿದೆ. ಜೊತೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಹಾಗಾದರೆ ಅತ್ಯುತ್ತಮ ರಿಯಾಯಿತಿ ಪಡೆಯುವ ಕೆಲವು ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್‌: ಶುರುವಾಯ್ತು ಡಿಸ್ಕೌಂಟ್‌ಗಳ ಅಬ್ಬರ!

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಫೀಚರ್ಸ್‌
ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಇದಲ್ಲದೆ, 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಐಫೋನ್ 14 ಫೋನ್ ಫೀಚರ್ಸ್‌
ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್‌: ಶುರುವಾಯ್ತು ಡಿಸ್ಕೌಂಟ್‌ಗಳ ಅಬ್ಬರ!

ಐಫೋನ್ 13 ಫೋನ್ ಫೀಚರ್ಸ್‌
ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ರೆಡ್ಮಿ ನೋಟ್ 11 ಫೀಚರ್ಸ್‌
ರೆಡ್ಮಿ ನೋಟ್ 11 ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, 90 Hz 1080p LCD ಡಿಸ್ಪ್ಲೇಯನ್ನು ಪಡೆದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Amazon Great Republic Day sale 2023: Best Deals on iPhone 13, OnePlus 10T and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X