ಅಮೆಜಾನ್‌ V/S ಫ್ಲಿಪ್‌ಕಾರ್ಟ್‌: ಎರಡರಲ್ಲೂ ಡಿಸ್ಕೌಂಟ್‌ ಸೇಲ್‌ ಇದೆ, ಆದ್ರೆ ಯಾವುದು ಬೆಸ್ಟ್‌!

|

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಇವೆರಡು ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳಾಗಿ ಗುರುತಿಸಿಕೊಂಡಿವೆ. ಈ ಎರಡು ತಾಣಗಳು ಒಂದಿಲ್ಲೊಂದು ಆಕರ್ಷಕ ಕೊಡುಗೆ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿಯೂ ಹಬ್ಬದ ದಿನಗಳು ಹಾಗೂ ಮಂತ್‌ ಎಂಡ್‌ ದಿನಗಳಲ್ಲಿ ಭರ್ಜರಿ ರಿಯಾಯಿತಿ ಮಾರಾಟ ಮೇಳಗಳನ್ನು ಆಯೋಜಿಸುತ್ತವೆ. ಸೇಲ್‌ ಮೇಳದಲ್ಲಿ ಮುಖ್ಯವಾಗಿ ಎಲೆಕ್ಟ್ರಿಕ್‌ ಉತ್ಪನ್ನಗಳಿಗೆ ಹೆಚ್ಚಿನ ಆಫರ್ ಲಭ್ಯ ಮಾಡುತ್ತವೆ.

ಫ್ಲಿಪ್‌ಕಾರ್ಟ್‌

ಪ್ರಸ್ತುತ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಈ ಎರಡು ತಾಣಗಳು ಮಾರಾಟ ಮೇಳ ಆಯೋಜಿಸಿವೆ. ಅಮೆಜಾನ್ ಪ್ರೈಮ್‌ ಡೇ ಸೇಲ್‌ (Amazon Prime Day Sale) ಪ್ರಾರಂಭಿಸಿದ್ದರೆ, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ 'ಬಿಗ್ ಬಿಲಿಯನ್ ಡೇಸ್‌' (Flipkart Big Billion Day) ಸೇಲ್‌ ಮಾರಾಟ ಮೇಳವನ್ನು ಆಯೋಜಿಸಿದೆ. ಇನ್ನು ಈ ಎರಡು ತಾಣಗಳು ಮಾರಾಟ ಮೇಳ ಆಯೋಜಿಸಿವೆ. ಆದ್ರೆ, ಈ ಎರಡು ಸೇಲ್‌ ಮೇಳಗಳಲ್ಲಿ ಯಾವುದು ಬೆಸ್ಟ್‌?

ವಸ್ತುಗಳಿಗೆ

ಜನಪ್ರಿಯ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ಮೊಬೈಲ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ ಬ್ಯಾಂಡ್‌ ಸೇರಿದಂತೆ ಇತರೆ ಕೆಲವು ಆಯ್ದ ಎಲೆಕ್ಟ್ರಿಕ್‌ ವಸ್ತುಗಳಿಗೆ ವಿಶೇಷ ಕೊಡುಗೆ ಲಭ್ಯ ಮಾಡಿದೆ. ಇನ್ನು ಈ ಎರಡು ಸೇಲ್‌ನಲ್ಲಿ ಗ್ರಾಹಕರಿಗೆ ಬೊಂಬಾಟ್‌ ಕೊಡುಗೆ ಸಿಗುತ್ತವೆ. ಹಾಗಾದರೇ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ಆಯೋಜಿಸಿರುವ ಸೇಲ್‌ ಮೇಳಗಳಲ್ಲಿ ಯಾವುದು ಉತ್ತಮ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸೇಲ್‌ ದಿನಾಂಕಗಳನ್ನು ಗಮನಿಸಿ:

ಸೇಲ್‌ ದಿನಾಂಕಗಳನ್ನು ಗಮನಿಸಿ:

ಅಮೆಜಾನ್ ತಾಣವು ಆಯೋಜಿಸಿರುವ ಅಮೆಜಾನ್ ಪ್ರೈಮ್‌ ಡೇ ಸೇಲ್‌ (Amazon Prime Day Sale) ಎರಡು ದಿನಗಳ ಕಾಲ ಇರಲಿದೆ. ಈ ಸೇಲ್ ಇಂದು (ಜುಲೈ 23) ಪ್ರಾರಂಭವಾಗಿದ್ದು, ಜುಲೈ 24ರ ವರೆಗೂ ಚಾಲ್ತಿ ಇರಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಆಯೋಜಿಸಿರುವ 'ಬಿಗ್ ಬಿಲಿಯನ್ ಡೇಸ್‌' (Flipkart Big Billion Day) ಸೇಲ್‌ ಸಹ ಇಂದಿನಿಂದ (ಜುಲೈ 23 ರಿಂದ) ಶುರುವಾಗಿದ್ದು, ಇದೇ ಜುಲೈ 27 ರ ವರೆಗೂ ಲೈವ್‌ ಆಗಿ ಇರಲಿದೆ.

ನೋ-ಕಾಸ್ಟ್‌ ಇಎಮ್‌ಐ ಕೊಡುಗೆ ಚೆಕ್‌ ಮಾಡಿ

ನೋ-ಕಾಸ್ಟ್‌ ಇಎಮ್‌ಐ ಕೊಡುಗೆ ಚೆಕ್‌ ಮಾಡಿ

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಎರಡು ತಾಣಗಳಲ್ಲಿ ನೋ-ಕಾಸ್ಟ್‌ ಇಎಮ್‌ಐ ಆಯ್ಕೆ ಮತ್ತು ಪೇ ಲೆಟರ್ ಆಯ್ಕೆಗಳು ಲಭ್ಯವಿದ್ದು, ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಹ ನೀಡುತ್ತಿವೆ.

ಬ್ಯಾಂಕ್‌ ಆಫರ್‌ ಒಮ್ಮೆ ಚೆಕ್‌ ಮಾಡಿ

ಬ್ಯಾಂಕ್‌ ಆಫರ್‌ ಒಮ್ಮೆ ಚೆಕ್‌ ಮಾಡಿ

ಅಮೆಜಾನ್‌ನಲ್ಲಿ ಖರೀದಿದಾರರು ICICI ಮತ್ತು SBI ಬ್ಯಾಂಕ್ ಕ್ರೆಡಿಟ್/ ಡೆಬಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಮಾಡಿದ ಖರೀದಿಗಳಲ್ಲಿ ಆಯ್ದ ಡಿವೈಸ್‌ಗಳಲ್ಲಿ 10% ಉಳಿಸಬಹುದು. ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ 2022 ರ ಆಕ್ಸಸ್‌ ಬ್ಯಾಂಕ್‌, ಸಿಟಿ ಬ್ಯಾಂಕ್, ಕೊಡಾಕ್‌ ಬ್ಯಾಂಕ್ ಮತ್ತು ಆರ್‌ಬಿಎಲ್‌ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಸಿ ಆಯ್ದ ಡಿವೈಸ್‌ಗಳಲ್ಲಿ ಶೇ. 10% ರಿಯಾಯಿತಿ ಪಡೆಯಬಹುದು.

ಹೊಸ ಡಿವೈಸ್‌ ಖರೀದಿಗೆ ಸಕಾಲ

ಹೊಸ ಡಿವೈಸ್‌ ಖರೀದಿಗೆ ಸಕಾಲ

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಈ ಎರಡು ತಾಣಗಳು ಆಫರ್ ನೀಡಿದ್ದು, ಹೊಸ ಡಿವೈಸ್‌ ಖರೀದಿಗೆ ಇದು ಸಕಾಲ ಎನ್ನಬಹುದು. ಈ ಕೊಡುಗೆಯ ಸಮಯದಲ್ಲಿ ಬಹುತೇಕ ಗ್ರಾಹಕರು ಹೊಸ ಉತ್ಪನ್ನಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್‌ ಆಫರ್‌ ಇರುವ ಪ್ರಮುಖ ಸ್ಮಾರ್ಟ್‌ಟಿವಿಗಳ ಬಗ್ಗೆ ತಿಳಿಯೋಣ ಬನ್ನಿರಿ.

ಸೋನಿ ಟಿವಿ (Sony 4K Ultra HD 55 ಇಂಚಿನ)

ಸೋನಿ ಟಿವಿ (Sony 4K Ultra HD 55 ಇಂಚಿನ)

ಸೋನಿ ಅಲ್ಟ್ರಾ ಹೆಚ್‌ಡಿ ಗೂಗಲ್‌ ಟಿವಿ (KD-55X74K) (55-ಇಂಚಿನ ಆವೃತ್ತಿ) ಲಾಂಚ್ ಬೆಲೆಯು 68,990 ರೂ. ಆಗಿದ್ದು, ಇದೀಗ 'ಅಮೆಜಾನ್ ಪ್ರೈಮ್‌ ಡೇ' ಸೇಲ್‌ನಲ್ಲಿ 61,990 ರೂ.ಗೆ ಲಭ್ಯ ಇದೆ. ಈ ಸಾಧನದ ಕೆಲವು ಪ್ರಮುಖ ಫೀಚರ್ಸ್‌ಗಳು 4K ಅಲ್ಟ್ರಾ HD ರೆಸಲ್ಯೂಶನ್, X1 4K ಪ್ರೊಸೆಸರ್, 20W ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಗೂಗಲ್‌ ಟಿವಿ ಬೆಂಬಲವನ್ನು ಒಳಗೊಂಡಿವೆ. 55-ಇಂಚಿನ ಆವೃತ್ತಿಯ ಹೊರತಾಗಿ, ಇದು 43-ಇಂಚಿನ ಮತ್ತು 65-ಇಂಚಿನ ರೂಪಾಂತರಗಳಲ್ಲಿ ಲಭ್ಯ.

ಶಿಯೋಮಿ ಮಿ ಟಿವಿ (Xiaomi Mi TV 5A 32-inch)

ಶಿಯೋಮಿ ಮಿ ಟಿವಿ (Xiaomi Mi TV 5A 32-inch)

ಶಿಯೋಮಿ ಮಿ ಟಿವಿ ಸ್ಮಾರ್ಟ್‌ಟಿವಿಯು 15,499 ರೂ. ಬೆಲೆಯೊಂದಿಗೆ ಬಿಡುಗಡೆ ಆಗಿತ್ತು. ಇದೀಗ 1,000 ರೂ. ಗಳ ಬೆಲೆ ಕಡಿತದ ಹೊರತಾಗಿ, ಅಮೆಜಾನ್ ಪಟ್ಟಿಯು 500ರೂ ಕೂಪನ್ ಕೋಡ್ ಅನ್ನು ಸಹ ಉಲ್ಲೇಖಿಸುತ್ತದೆ. ಆದ್ದರಿಂದ, ಗ್ರಾಹಕರು ಈ ಟಿವಿಯನ್ನು 13,999 ರೂ. ಗೆ ಖರೀದಿಸಬಹುದು. ಇನ್ನು ಶಿಯೋಮಿ ಮಿ ಟಿವಿ (Xiaomi Mi TV 5A 32-inch) ಟಿವಿಯು ಹೆಚ್ಚಿನ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಇದನ್ನು 43 ಇಂಚಿನ ಡಿಸ್ಪ್ಲೇ ಆವೃತ್ತಿಯಲ್ಲೂ ಖರೀದಿಸಬಹುದು.

ಮೊಟೊರೊಲಾ (Revou-Q QLED Ultra HD) ಟಿವಿ:

ಮೊಟೊರೊಲಾ (Revou-Q QLED Ultra HD) ಟಿವಿ:

ವೈರ್‌ಲೆಸ್ ಗೇಮ್‌ಪ್ಯಾಡ್‌ನೊಂದಿಗೆ ಬರುವ ಮೊಟೊರೊಲಾ Revou-Q QLED Ultra HD TV (55-ಇಂಚಿನ) ಟಿವಿಯು ಈಗ 42,999 ರೂ.ಗೆ ಪಟ್ಟಿಮಾಡಲಾಗಿದೆ. ಇನ್ನು ಈ ಸ್ಮಾರ್ಟ್ ಟಿವಿ 54,999 ರೂ. ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಈ ಟಿವಿಯು ಸೊಗಸಾದ ವಿನ್ಯಾಸ, ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲ, ಕ್ವಾಂಟಮ್ ಕಲರ್ ಫಿಲ್ಟರ್, ಆಂಡ್ರಾಯ್ಡ್ ಟಿವಿ 11 ಮತ್ತು ಕ್ವಾಡ್ ಸ್ಪೀಕರ್‌ಗಳನ್ನು ಒಳಗೊಂಡಿವೆ.

ನೋಕಿಯಾ ಅಲ್ಟ್ರಾ ಹೆಚ್‌ಡಿ 4K QLED (55-ಇಂಚಿನ)

ನೋಕಿಯಾ ಅಲ್ಟ್ರಾ ಹೆಚ್‌ಡಿ 4K QLED (55-ಇಂಚಿನ)

ನೋಕಿಯಾ ಅಲ್ಟ್ರಾ ಹೆಚ್‌ಡಿ 4K QLED (55-ಇಂಚಿನ) ಸ್ಮಾರ್ಟ್‌ಟಿವಿಯು 54,999 ರೂ. ಗಳಿಗೆ ಘೋಷಿಸಲಾಯಿತು. ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಇದು 43,999 ರೂಗಳ ಭಾರೀ ರಿಯಾಯಿತಿ ಬೆಲೆಯೊಂದಿಗೆ ಲಭ್ಯವಿದೆ. ನೋಕಿಯಾ ಟಿವಿ ಡಾಲ್ಬಿ ವಿಷನ್‌ ಬೆಂಬಲದೊಂದಿಗೆ ಅಲ್ಟ್ರಾ ಹೆಚ್‌ಡಿ 4K ರೆಸಲ್ಯೂಶನ್, ಡಾಲ್ಬಿ ಅಟ್ಮಾಸ್ ಜೊತೆಗೆ JBL ಚಾಲಿತ ಸ್ಪೀಕರ್‌ಗಳು ಮತ್ತು ಆಂಡ್ರಾಯ್ಡ್‌ TV 11 ಅನ್ನು ಬೆಂಬಲಿಸುತ್ತದೆ. TV 50-ಇಂಚಿನ ಆವೃತ್ತಿಯಲ್ಲಿಯೂ ಬರುತ್ತದೆ.

Best Mobiles in India

English summary
Amazon Prime Day VS Flipkart Big Saving Days: Which is Better For Smart Tv buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X