ಶಿಯೋಮಿ 12 ಪ್ರೊ ಫೋನ್‌ ಈಗ ಜಬರ್ದಸ್ತ್ ಡಿಸ್ಕೌಂಟ್‌ನಲ್ಲಿ ಲಭ್ಯ!..ಸಖತ್ ಉಳಿತಾಯ!

|

ಜನಪ್ರಿಯ ಅಮೆಜಾನ್ ಇ ಕಾಮರ್ಸ್‌ ತಾಣವು ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತ ಮುನ್ನಡೆದಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ಪ್ರೈಮ್‌ ಫೋನ್ಸ್‌ ಪಾರ್ಟಿ (Prime Phones Party) ಮಾರಾಟ ಮೇಳವನ್ನು ಆಯೋಜಿಸಿದ್ದು, ಫೋನ್‌ ಖರೀದಿಸುವ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿದೆ. ಈ ಮಾರಾಟ ಮೇಳದಲ್ಲಿ ಕೆಲವು ಜನಪ್ರಿಯ ಹಾಗೂ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಫೋನ್‌ಗಳಿಗೂ ಬೊಂಬಾಟ್‌ ಕೊಡುಗೆ ಲಭ್ಯ ಮಾಡಿದೆ. ಆ ಪೈಕಿ ಶಿಯೋಮಿ 12 ಪ್ರೊ ಜಬರ್ದಸ್ತ್ ಡಿಸ್ಕೌಂಟ್‌ ಪಡೆದಿದೆ.

ಶಿಯೋಮಿ 12 ಪ್ರೊ ಫೋನ್‌ ಈಗ ಜಬರ್ದಸ್ತ್ ಡಿಸ್ಕೌಂಟ್‌ನಲ್ಲಿ ಲಭ್ಯ!..ಸಖತ್ ಉಳಿತಾಯ!

ಹೌದು, ಅಮೆಜಾನ್ ತಾಣವು ಆಯೋಜಿಸಿರುವ ಪ್ರೈಮ್‌ ಫೋನ್ಸ್‌ ಪಾರ್ಟಿ (Prime Phones Party) ಸೇಲ್‌ನಲ್ಲಿ ಶಿಯೋಮಿ 12 ಪ್ರೊ ಫೋನ್ 1,000ರೂ. ರಿಯಾಯಿತಿ ಪಡೆದಿದ್ದು, 55,999ರೂ. ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಕೆಲವು ಬ್ಯಾಂಕ್‌ ಕಾರ್ಡ್‌ಗಳಿಂದ ಸುಮಾರು 8,000ರೂ. ವರೆಗೂ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ದೊರೆಯುತ್ತದೆ. ಅಂದಹಾಗೆ ಪ್ರೈಮ್‌ ಫೋನ್ಸ್‌ ಪಾರ್ಟಿ ಜ. 8, 2023 ರ ವರೆಗೂ ಚಾಲ್ತಿ ಇರಲಿದೆ. ಹಾಗಾದರೆ ಶಿಯೋಮಿ 12 ಪ್ರೊ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?
ರೆಡ್ಮಿ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ OLED ಪ್ಯಾನೆಲ್ ಆಗಿದ್ದು, 10 ಬಿಟ್ ಡೆಪ್ತ್‌ ಕಲರ್‌ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, HDR10+ ಬೆಂಬಲವನ್ನು ಪಡೆದಿದೆ.

ಶಿಯೋಮಿ 12 ಪ್ರೊ ಫೋನ್‌ ಈಗ ಜಬರ್ದಸ್ತ್ ಡಿಸ್ಕೌಂಟ್‌ನಲ್ಲಿ ಲಭ್ಯ!..ಸಖತ್ ಉಳಿತಾಯ!

ಪ್ರೊಸೆಸರ್‌ ಯಾವುದು?
ರೆಡ್ಮಿ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸರಣಿಯ ರೆಡ್ಮಿ ನೋಟ್‌ 12 ಪ್ರೊ ಪ್ಲಸ್ ಮತ್ತು ಎಕ್ಸ್‌ಪ್ಲೋರರ್ ಆವೃತ್ತಿಯು 3,000mm² VC ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ, ಆದರೆ ಸಾಮಾನ್ಯ ಪ್ರೊ ಆವೃತ್ತಿಯು ಚಿಕ್ಕದಾದ 2,000mm² ಗ್ರ್ಯಾಫೀನ್-ಆಧಾರಿತ ಕೂಲಿಂಗ್ ಸಿಸ್ಟಂ ಅನ್ನು ಹೊಂದಿದೆ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಶಿಯೋಮಿ 12 ಪ್ರೊ ಫೋನ್‌ ಈಗ ಜಬರ್ದಸ್ತ್ ಡಿಸ್ಕೌಂಟ್‌ನಲ್ಲಿ ಲಭ್ಯ!..ಸಖತ್ ಉಳಿತಾಯ!

ಬ್ಯಾಟರಿ ಮತ್ತು ಇತರೆ
ರೆಡ್ಮಿ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈಫೈ 6, GNSS, NFC, ಮತ್ತು USB ಟೈಪ್-ಸಿ ಸೇರಿವೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಐಆರ್ ಬ್ಲಾಸ್ಟರ್, ಎಕ್ಸ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಅನ್ನು ಒಳಗೊಂಡಿವೆ.

Best Mobiles in India

English summary
Amazon Prime Phone sale: Xiaomi 12 Pro available at big discount price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X