ಎಚ್‌ಟಿಸಿ ಫೋನ್‌ಗಳಿಗೆ ಆಂಡ್ರಾಯ್ಡ್ ಎಮ್ ನವೀಕರಣ

By Shwetha
|

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮತ್ತು ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಕಾರಣವಾಗಿರುವ ಪ್ರಥಮ ಫೋನ್ ಎಚ್‌ಟಿಸಿಯಾಗಿದ್ದು ಇದೀಗ ತೈವಾನ್ ಕಂಪೆನಿ ಹೊಸದಾದ ಇನ್ನೊಂದು ಓಎಸ್ ಅನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಮನಕೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿದೆ. ಆಂಡ್ರಾಯ್ಡ್ ಎಮ್ ಅನ್ನು 2015 ರ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಾದ ಎಚ್‌ಟಿಸಿ ಒನ್ ಎಮ್9 ಮತ್ತು ಎಚ್‌ಟಿಸಿ ಒನ್ ಎಮ್9 ಪ್ಲಸ್‌ಗೆ ಬಿಡುಗಡೆ ಮಾಡುತ್ತಿದೆ.

ಎಚ್‌ಟಿಸಿ ಫೋನ್‌ಗಳಿಗೆ ಆಂಡ್ರಾಯ್ಡ್ ಎಮ್ ನವೀಕರಣ

ಇನ್ನು ಕಂಪೆನಿ ಈ ಕುರಿತು ಟ್ವಿಟ್ಟರ್‌ನಲ್ಲಿ ಈಗಾಗಲೇ ಘೋಷಿಸಿದ್ದು ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಎಮ್ ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿದ್ದು ಯಾವಾಗ ಎಂಬುದು ನಿಖರವಾಗಿಲ್ಲ. ಹೆಚ್ಚಿನ ಎಚ್‌ಟಿಸಿ ಡಿವೈಸ್‌ಗಳು ಆಂಡ್ರಾಯ್ಡ್ ಎಮ್ ನವೀಕರಣವನ್ನು ಆದಷ್ಟು ಬೇಗನೇ ಪಡೆದುಕೊಳ್ಳಲಿದೆ.

ಓದಿರಿ: ಆಂಡ್ರಾಯ್ಡ್ ಎಮ್ ಓಎಸ್ ಬಳಕೆದಾರ ಸ್ನೇಹಿ ಹೇಗೆ?

ಎಚ್‌ಟಿಸಿ ಇತ್ತೀಚೆಗೆ ತಾನೇ ದೃಢೀಕರಿಸಿದ್ದು ಆಂಡ್ರಾಯ್ಡ್ 5.1 ಲಾಲಿಪಪ್ ಅಪ್‌ಡೇಟ್ 2014 ಫ್ಲ್ಯಾಗ್‌ಶಿಪ್‌ ಒನ್ (ಎಮ್8) ಗೆ ಆಗಸ್ಟ್‌ನಲ್ಲೇ ಬಿಡುಗಡೆಗೊಳ್ಳಬಹುದಾಗಿದ್ದು ಪೂರ್ಣಗೊಂಡು ಸೆನ್ಸ್ 7 UI ನೊಂದಿಗೆ ಎಚ್‌ಟಿಸಿ ಒನ್ ಎಮ್9 ನೊಂದಿಗೆ ಪ್ರಸ್ತುತಗೊಳ್ಳಲಿದೆ.

ಓದಿರಿ: ಲಾಲಿಪಪ್‌ಗಿಂತ ಆಂಡ್ರಾಯ್ಡ್ ಎಮ್ ಹೆಚ್ಚು ವಿಶೇಷವಾದುದು ಏಕೆ?

ಆಂಡ್ರಾಯ್ಡ್‌ನ ಮುಂದಿನ ಓಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಎಮ್ ಆಗಿದ್ದು ಕೆಲವೊಂದು ನೂತನ ವೈಶಿಷ್ಟ್ಯಗಳೊಂದಿಗೆ ಇದು ಬಳಕೆದಾರರನ್ನು ತಲುಪಲಿದೆ. ಸ್ಪರ್ಶ ಫೀಚರ್‌ನೊಂದಿಗೆ ಗೂಗಲ್ ನೌ; ಹೊಸ ಕ್ರೋಮ್ ವೈಶಿಷ್ಟ್ಯ, ಆಂಡ್ರಾಯ್ಡ್ ಮೊಬೈಲ್ ಪಾವತಿ ಹೀಗೆ ಬೇರೆ ಬೇರೆ ವಿಶೇಷತೆಗಳನ್ನು ಆಂಡ್ರಾಯ್ಡ್ ಎಮ್‌ನಲ್ಲಿ ನಿಮಗೆ ಕಾಣಬಹುದಾಗಿದೆ.

Best Mobiles in India

English summary
Many would already know that HTC was one of the first handset OEMs to announce Android 4.4 KitKat and Android 5.0 Lollipop rollout plans for its smartphones, and the Taiwanese giant has again lived up to its reputation.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X