ಐಫೋನ್‌ 15 ಸರಣಿಯ ಬೆಲೆ ಲೀಕ್‌!..ಬೆಲೆ ತಿಳಿದ್ರೆ, ಅಚ್ಚರಿ ಪಡ್ತೀರಾ!

|

ವಿಶ್ವದ ಮೊಬೈಲ್‌ ಮಾರುಕಟ್ಟೆಯಲ್ಲಿ ಆಪಲ್‌ ಐಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಹಾಗೆಯೇ ಐಫೋನ್‌ಗಳ ಬಗ್ಗೆ ಗ್ರಾಹಕರಲ್ಲಿ ಕುತೂಹಲ ಸಹ ಇದೆ. ಆಪಲ್‌ ಸಂಸ್ಥೆಯ ಬಹುನಿರೀಕ್ಷಿತ ಐಫೋನ್‌ 15 ಸರಣಿಯ ಕೆಲವು ಲೀಕ್ ಮಾಹಿತಿಗಳು ಗ್ರಾಹಕರಲ್ಲಿ ಕುತೂಹಲ ಡಬಲ್‌ ಮಾಡಿದ್ದು, ಕಾತುರದಿಂದ ಎದುರುನೋಡುವಂತೆ ಮಾಡಿದೆ. ಸಂಸ್ಥೆಯ ಇತ್ತೀಚಿನ ಐಫೋನ್‌ 14 ಸರಣಿಯು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಾ ಮುನ್ನಡೆದಿದೆ.

ಐಫೋನ್‌ 15

ಹೌದು, ಆಪಲ್‌ ಸಂಸ್ಥೆಯ ನೂತನ ಐಫೋನ್‌ 15 ಸರಣಿ ಬಿಡುಗಡೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲೇ ಆ ಸರಣಿಯ ಬಗ್ಗೆ ಗ್ರಾಹಕರಲ್ಲಿ ಕೌತುಕಗಳು ಹೆಚ್ಚಾಗಿವೆ. ಮುಖ್ಯವಾಗಿ ಐಫೋನ್‌ 15 ಸರಣಿ ಪ್ರೊಸೆಸರ್‌, ಬ್ಯಾಟರಿ, ಕ್ಯಾಮೆರಾ ಈ ಫೀಚರ್ಸ್‌ಗಳ ಅಪ್‌ಗ್ರೇಡ್‌ ಜೊತೆಗೆ ಮತ್ತೆ ಯಾವ ನೂತನ ಫೀಚರ್ಸ್‌ಗಳು ಸೇರ್ಪಡೆಯಾಗಬಹುದು ಎಂದು ಲೆಕ್ಕಾಚಾರ ಸಹ ಮಾಡುತ್ತಾರೆ. ಮುಖ್ಯವಾಗಿ ಐಫೋನ್‌ 15 ಫೋನ್‌ ಬೆಲೆ ಎಷ್ಟು ಎಂದು ತಿಳಿಯುವ ಕುತೂಹಲ ಇರುತ್ತದೆ.

ಫೋರ್ಬ್ಸ್‌ನ

ಅಂದಹಾಗೆ ಇದೀಗ ಆಪಲ್‌ ಐಫೋನ್‌ 15 (Apple iPhone 15) ಸರಣಿಯ ಬೆಲೆ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಫೋರ್ಬ್ಸ್‌ನ ವರದಿಯ ಪ್ರಕಾರ, ಐಫೋನ್‌ 15 ಮತ್ತು ಐಫೋನ್‌ 15 ಪ್ರೊ ಮಾಡೆಲ್‌ಗಳ ನಡುವೆ ಬೆಲೆಯಲ್ಲಿ ಭಾರೀ ವ್ಯತ್ಯಾಸಗಳನ್ನು ಹೊಂದಿರಬಹುದು ಎಂದು ಹೇಳಲಾಗ್ತಿದೆ. ಹಾಗೆಯೇ ಆಪಲ್ ಈ ವರ್ಷದ ಐಫೋನ್ 15 ಪ್ರೊ ಸರಣಿಯ ಬೆಲೆಯನ್ನು ಹೆಚ್ಚಿಸುವ ಸಾರ್ಧಯತೆ ಇದ್ದು, ಇದು ಐಫೋನ್ 15 ಪ್ಲಸ್‌ನೊಂದಿಗೆ ಅಂತರವನ್ನು ಇನ್ನಷ್ಟು ವಿಸ್ತರಿಸುತ್ತದೆ' ಎಂದು ತಿಳಿದುಬಂದಿದೆ.

ತಿಳಿದುಬಂದಿದೆ

ನೂತನ ಐಫೋನ್ 15 ಫೋನ್‌ $799 ಬೆಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಐಫೋನ್ 15 ಪ್ಲಸ್‌ $899 ಬೆಲೆಯಲ್ಲಿ ಬಿಡುಗಡೆ ಆಗಬಹುದು ಎಂದು ವರದಿಯಿಂದ ತಿಳಿದುಬಂದಿದೆ. ಅದೇ ರೀತಿ ಆಪಲ್ ಐಫೋನ್ 15 ಪ್ರೊ ಮತ್ತು ಐಫೋನ್ 15 ಅಲ್ಟ್ರಾ ಕ್ರಮವಾಗಿ $ 1,099 ಮತ್ತು $ 1,199 ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎನ್ನಲಾಗಿದೆ.

ಕ್ಯಾಮೆರಾ

ಇನ್ನು ಆಪಲ್ ನೂತನ ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳ ಕ್ಯಾಮೆರಾ ಸೆನ್ಸಾರ್‌ ಅನ್ನು ಹೆಚ್ಚಿಸುವ ಸಾಧ್ಯತೆಗಳಿವೆ.ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳು ಮೂರು ಕ್ಯಾಮೆರಾ ಹೊಂದಿರಬಹುದು. ಇವುಗಳ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ವೈಡ್ ಲೆನ್ಸ್‌ ಸೆನ್ಸಾರ್‌ ಹೊಂದಿರಬಹುದು. ಇನ್ನು ಐಫೋನ್ 15 ಮಾದರಿಗಳು ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುವುದಿಲ್ಲ.

ಕಡಿಮೆಗೊಳಿಸಬಹುದು

ಐಫೋನ್ 15 ಸರಣಿಯ ಕುರಿತು ಈಗಾಗಲೇ ಹಲವು ಲೀಕ್ ಮಾಹಿತಿಗಳು ಹೊರಬಂದಿವೆ. ಮುಂಬರುವ ಮಾದರಿಗಳು ಎರಡು ಪ್ರೊ ಆವೃತ್ತಿಗಳಲ್ಲಿ ಬೆಜೆಲ್‌ಗಳನ್ನು ಕಡಿಮೆಗೊಳಿಸಬಹುದು ಮತ್ತು ಆಪಲ್ ವಾಚ್ ತರಹದ ವಿನ್ಯಾಸಕ್ಕಾಗಿ ಎಲ್ಲಾ ನಾಲ್ಕು ಫೋನ್‌ಗಳಲ್ಲಿ ಕರ್ವ್‌ ಮಾದರಿಯ ಅಂಚುಗಳನ್ನು ಹೊಂದಿರಬಹುದು ಎಂದು ಹೇಳುತ್ತದೆ. ಹಾಗೆಯೇ ನಾಲ್ಕು ಐಫೋನ್‌ಗಳ ಡಿಸ್‌ಪ್ಲೇ ಗಾತ್ರಗಳು ಕಳೆದ ವರ್ಷದಂತೆ ಇರಲಿವೆ ಎನ್ನಲಾಗಿದೆ. ಜೊತೆಗೆ ಡೈನಾಮಿಕ್ ಐಲ್ಯಾಂಡ್ ಎಲ್ಲಾ ಮಾದರಿಗಳಲ್ಲಿ ಲಭ್ಯವಿರುತ್ತದೆ.

ಐಫೋನ್‌

ಆಪಲ್‌ ಐಫೋನ್‌ 15 ಪ್ರೊ ಮಾಡೆಲ್‌ ಫೋನ್‌ ಆಪಲ್ A17 ಚಿಪ್‌ಸೆಟ್‌ ಒಳಗೊಂಡಿರಲಿದ್ದು, 8GB RAM ಆಯ್ಕೆ ಪಡೆದಿರಲಿದೆ. ಹಾಗೆಯೇ ಐಫೋನ್‌ 15 ಹಾಗೂ ಐಫೋನ್‌ 15 ಪ್ಲಸ್‌ ಮಾಡೆಲ್‌ಗಳು A16 ಬಯೋನಿಕ್‌ ಚಿಪ್‌ಸೆಟ್‌ ಅನ್ನು ಹೊಂದಿರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.

Best Mobiles in India

English summary
According to the report, iPhone 15 may start at $799, while the iPhone 15 Plus may start at $899. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X