ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ಉದ್ಯಾನನಗರಿ ಈಗ ನಂ.1 ಡೈನಾಮಿಕ್ ಸಿಟಿ

|

ಟೆಕ್ ಸ್ವರ್ಗದ ಎಂದೆ ಖ್ಯಾತಿ ಪಡೆದಿರುವ ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕಿರುವ ನಮ್ಮ ಹೆಮ್ಮೆಯ ಬೆಂಗಳೂರು ಪ್ರಪಂಚದ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಕರಿಸಿದೆ.

ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ನಂ.1 ಡೈನಾಮಿಕ್ ಸಿಟಿ

ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

ದೇಶ-ವಿದೇಶದ ಟೆಕ್ನಾಲಜಿ ಕಂಪನಿಗಳೇಲ್ಲವೂ ಬೆಂಗಳೂರಿನ ಕಡೆ ಮುಖ ಮಾಡಿರುವ ಸಂದರ್ಭದಲ್ಲಿ ಬೆಂಗಳೂರಿನ ಹಿರಿಮೆಗೆ ಇದು ಮತ್ತೊಂದು ಗರಿ ಸಿಕ್ಕಂತೆ ಆಗಿದೆ.

ಮೊನ್ನೆ ತಾನೆ ಭಾರತಕ್ಕೆ ಬರಲು ಸಿದ್ಧವಾಗಿರುವ ಆಪಲ್ ಭಾರತದಲ್ಲಿ ಹೊಸ ಪ್ಲಾಂಟ್ ಆರಂಭಿಸುವುದಾಗಿ ತಿಳಿಸಿತ್ತು, ಉಬರ್ ಸಹ ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯ ಆರಂಭಿಸಲು ಮುಂದಾಗಿದೆ. ಇದಲ್ಲದೇ ಮೆಕ್ರೋಸಾಫ್ಟ್ ಸಹ ಬೆಂಗಳೂರೇ ಬೆಸ್ಟ್ ಎಂದಿದೆ. ಅನ್‌ಲೈನ್ ಶಾಪಿಂಗ್ ಸೈಟ್‌ ಗಳಾದ ಅಮೆಜಾನ್ ಮತ್ತು ಫಿಪ್ಲಕಾರ್ಟ್‌ ಸಹ ಬೆಂಗಳೂರಿನಲ್ಲೇ ಬೇರುವಿವೆ.

ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ನಂ.1 ಡೈನಾಮಿಕ್ ಸಿಟಿ

ಭಾರತದಲ್ಲಿ ಲಾಂಚ್ ಆಯ್ತು ರೆಡ್‌ಮಿ ನೋಟ್ 4: ಬೆಲೆ ಎಷ್ಟು..? ವೈಶಿಷ್ಟ್ಯಗಳೇನು..?

ಜೆಎಲ್ಎಲ್ ಸಿಟಿ ಮೊಮೆಂಟಂ ಇಂಡೆಕ್ಸ್ ಪ್ರಕಾರ, ವಿಶ್ವದ ಟಾಪ್ 30 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಟೆಕ್‌ ಲೋಕದ ಸ್ವರ್ಗ ಎಂದೇ ಖ್ಯಾತವಾಗಿರುವ ಸಿಲಿಕಾನ್ ವ್ಯಾಲಿಯನ್ನು ಮೀರಿಸಿರುವ ಬೆಂಗಳೂರು ನಂಬರ್ ವನ್ ಸ್ಥಾನ ಪಡೆದುಕೊಂಡಿದೆ.

ಈ ಮೂಲಕ ಬೆಂಗಳೂರು ದೊಡ್ಡಣ್ಣ ಅಮೆರಿಕದ ಸೆಡ್ಡು ಹೊಡೆದಿದೆ. ಇದೇ ಪಟ್ಟಿಯಲ್ಲಿ ಹೈದರಾಬಾದ್ 5ನೇ ಸ್ಥಾನದಲ್ಲಿದ್ದು, ಪುಣೆ 13, ದೆಹಲಿ 23 ಹಾಗೂ ಮುಂಬೈ 25ನೇ ಸ್ಥಾನ ಪಡೆದಿದೆ.

ಸಿಲಿಕಾನ್ ವ್ಯಾಲಿಯನ್ನು ಸೈಡು ಹೊಡೆದ ಬೆಂಗಳೂರು: ನಂ.1 ಡೈನಾಮಿಕ್ ಸಿಟಿ

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ಆರ್ಥಿಕ ಬೆಳವಣಿಗೆಯ ದರ, ನಗರೀಕರಣ, ಮೂಲಸೌಲಭ್ಯ ಸುಧಾರಣೆ, ಕಾರ್ಪೋರೇಟ್ ಕಚೇರಿಗಳಿಗೆ ಸ್ಥಳಾವಕಾಶ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ.

ಈ ಪಟ್ಟಿಯಲ್ಲಿ ವಿಯೆಟ್ನಾಂನ ಹೊ ಚಿ ಮಿನಾ ನಗರ 2ನೇ ಸ್ಥಾನ, ಸಿಲಿಕಾನ್ ವ್ಯಾಲಿಗೆ ಮೂರನೇ ಸ್ಥಾನ ಲಭ್ಯವಾಗಿದೆ. ಚೀನಾದ ಶಾಂಘೈ 4ನೇ ಸ್ಥಾನದಲ್ಲಿದ್ದು, ಹೈದರಾಬಾದ್ 5ನೇ ಸ್ಥಾನದಲ್ಲಿದ್ದು, ಬ್ರಿಟನ್ ನ ಲಂಡನ್ 6ನೇ ಸ್ಥಾನ ಅಲಂಕರಿಸಿದೆ.

Best Mobiles in India

Read more about:
English summary
In a proud new development, Bengaluru has been crowned the most dynamic city in the world. to more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X