ಉಚಿತ ಕರೆ, ಡೇಟಾ ಹೊಂದಿರುವ ಬಿಎಸ್‌ಎನ್‌ಎಲ್ ಟಾಪ್ ಪ್ಲಾನ್ಸ್

By Shwetha
|

ಬಿಎಸ್‌ಎನ್ಎಲ್ ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಅನ್ನು ದೇಶಾದ್ಯಂತ ಹೆಚ್ಚಿನ ಬಳಕೆದಾರರು ಇದೀಗ ಬಳಸಿಕೊಳ್ಳುತ್ತಿದ್ದಾರೆ. ಅಂತೂ ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಅದ್ಭುತ ಪ್ಯಾಕೇಜ್‌ಗಳನ್ನು ನೀಡುತ್ತಿದೆ ಎಂದಾಯಿತು. ಅನಿಯಮಿತ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ಪ್ರಾಯೋಜಿಸಿದ್ದು ಮನೆಯಲ್ಲಿರುವವರಿಗೆ ಮತ್ತು ವ್ಯವಹಾರಸ್ಥರಿಗೆ ಈ ಪ್ಲಾನ್ ಬಂಪರ್ ಆಫರ್ ಆಗಿದೆ.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

ಹಾಗಿದ್ದರೆ ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್ ಒದಗಿಸುತ್ತಿರುವ ಟಾಪ್ 10 ಯೋಜನೆಗಳ ವಿವರಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು 24ಎಮ್‌ಬಿಪಿಎಸ್‌ವರೆಗಿನ ಸ್ಪೀಡ್ ಅನ್ನು ಬಳಕೆದಾರರಿಗೆ ನೀಡಲಿದೆ.

ಓದಿರಿ: 'ಜಿಯೋ ಸಿಮ್, ಎಲ್‌ವೈಎಫ್ ಫೋನ್ ಕೇವಲ ರೂ 199 ಕ್ಕೆ' ಸಂದೇಶ ಬಂದಲ್ಲಿ ಎಚ್ಚರ

ಬಿಬಿಜಿ ಕೊಂಬೊ ಯುಎಲ್ಎಡಿ 999

ಬಿಬಿಜಿ ಕೊಂಬೊ ಯುಎಲ್ಎಡಿ 999

ರೂ 999 ರ ಮಾಸಿಕ ದರವನ್ನು ಪಾವತಿ ಮಾಡಿ 4 ಎಮ್‌ಬಿಪಿಎಸ್ ಅನ್ನು 10 ಜಿಬಿವರೆಗೆ ಮತ್ತು ಮಿತಿಯನ್ನು ವಿಸ್ತರಿಸುವುದ ಮೂಲಕ 1 ಎಮ್‌ಬಿಪಿಎಸ್ ಸ್ಪೀಡ್ ಅನ್ನು ಪಡೆದುಕೊಳ್ಳಬಹುದಾಗಿದೆ. 400 ಉಚಿತ ಕರೆಗಳನ್ನು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನೊಂದಿಗೆ ಪಡೆದುಕೊಳ್ಳಬಹುದಾಗಿದ್ದು ಉಚಿತ ಮತ್ತು ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಹಾಗೂ ಭಾನುವಾರ ಅನಿಯಮಿತ ಕರೆಗಳನ್ನು ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಮಾಡಬಹುದಾಗಿದೆ.

ಬಿಬಿಜಿ ಯುಎಲ್‌ಡಿ 1275

ಬಿಬಿಜಿ ಯುಎಲ್‌ಡಿ 1275

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಯೋಜನೆಯೊಂದಿಗೆ 4ಎಮ್‌ಬಿಪಿಎಸ್ ವೇಗದಲ್ಲಿ 30 ಜಿಬಿ ಇಂಟರ್ನೆಟ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ರೂ 1,275 ರ ಈ ಯೋಜನೆಯು ರಾತ್ರಿ ಮತ್ತು ಭಾನುವಾರದ ಉಚಿತ ಕರೆಯನ್ನು ಒದಗಿಸಲಿದೆ, ಆದರೆ ಇತರ ಕರೆ ದರಗಳು ನಿಮ್ಮ ಪ್ರಸ್ತುತ ಲ್ಯಾಂಡ್‌ಲೈನ್ ಯೋಜನೆಯಂತೆಯೇ ಇರಲಿದೆ.

ಬಿಬಿಜಿ ಕೊಂಬೊ ಯುಎಲ್‌ಡಿ 1441

ಬಿಬಿಜಿ ಕೊಂಬೊ ಯುಎಲ್‌ಡಿ 1441

ಬಿಬಿಜಿ ಕೊಂಬೊ ಯುಎಲ್‌ಡಿ 1441 8 ಎಮ್‌ಬಿಪಿಎಸ್ ವೇಗವನ್ನು ನೀಡಲಿದ್ದು ಸರ್ವೀಸ್ ಪ್ರೊವೈಡರ್‌ನಿಂದ 25 ಜಿಬಿ ಇಂಟರ್ನೆಟ್ ಅನ್ನು ಮುಗಿಸುವವರೆಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ನೆಟ್‌ವರ್ಕ್‌ನೊಳಗೆಯೇ ಬಳಕೆದಾರರು 500 ನಿಮಿಷಗಳ ಉಚಿತ ಕರೆಗಳನ್ನು ಚಂದಾದಾರರು ಪಡೆದುಕೊಳ್ಳಬಹುದಾಗಿದೆ.

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 1745

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 1745

ಈ ಪ್ಲಾನ್ ಪ್ರಕಾರವಾಗಿ, ರೂ 1745 ರಲ್ಲಿ ನಿಮಗೆ 40 ಜಿಬಿ ಡೇಟಾವನ್ನು 8 ಎಮ್‌ಬಿಪಿಎಸ್ ವೇಗದಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಅನಿಯಮಿತ ಪ್ಲಾನ್‌ನಲ್ಲಿ 1,000 ಉಚಿತ ಕರೆಗಳನ್ನು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನೊಂದಿಗೆ ಪಡೆದುಕೊಳ್ಳಬಹುದಾಗಿದೆ.

ಬಿಬಿಜಿ ಸ್ಪೀಡ್ ಕೊಂಬೊ ಯುಎಲ್‌ಡಿ 2295

ಬಿಬಿಜಿ ಸ್ಪೀಡ್ ಕೊಂಬೊ ಯುಎಲ್‌ಡಿ 2295

ಬಿಎಸ್‌ಎನ್‌ಎಲ್ ಈ ಯೋಜನೆಯಿಂದ, 8 ಎಮ್‌ಬಿಪಿಎಸ್ ವೇಗದಲ್ಲಿ 80 ಜಿಬಿ ಇಂಟರ್ನೆಟ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ರೂ 2,295 ರ ಯೋಜನೆಯು ರಾತ್ರಿ ಕರೆ ಮತ್ತು ಭಾನುವಾರದ ಉಚಿತ ಕರೆಮಾಡುವಿಕೆ ಸೌಲಭ್ಯವನ್ನು ನೆಟ್‌ವರ್ಕ್‌ನಾದ್ಯಂತ ಒದಗಿಸಲಿದ್ದು ನೆಟ್‌ವರ್ಕ್‌ನೊಳಗೆಯೇ 1000 ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಬಿಬಿಜಿ ಯುಎಲ್‌ಡಿ 2645

ಬಿಬಿಜಿ ಯುಎಲ್‌ಡಿ 2645

8 ಎಮ್‌ಬಿಪಿಎಸ್ ವೇಗದಲ್ಲಿ 175 ಜಿಬಿ ಇಂಟರ್ನೆಟ್ ಅನ್ನು ಬಳಕೆದಾರರು ಈ ಯೋಜನೆಯ ಅನುಸಾರ ಪಡೆಯಬಹುದಾಗಿದೆ. ಮಿತಿಯನ್ನು ದಾಟಿದ ನಂತರ 1 ಎಮ್‌ಬಿಪಿಎಸ್ ವೇಗದಲ್ಲಿ ಅನಿಯಮಿತ ಸೇವೆಯನ್ನು ಬಳಕೆದಾರರು ಆನಂದಿಸಬಹುದಾಗಿದೆ. ಇದು ಯಾವುದೇ ವಿಶೇಷ ಟಾರಿಫ್ ಪ್ಲಾನ್‌ಗಳನ್ನು ಹೊಂದಿರುವುದಿಲ್ಲ.

ಬಿಬಿಜಿ ಕೊಂಬೊ ಯುಎಲ್‌ಡಿ 2799

ಬಿಬಿಜಿ ಕೊಂಬೊ ಯುಎಲ್‌ಡಿ 2799

ಯೋಜನೆಯ ಅನುಸಾರವಾಗಿ, 4 ಎಮ್‌ಬಿಪಿಎಸ್ ವೇಗದಲ್ಲಿ 80 ಜಿಬಿ ಡೇಟಾವನ್ನು ಬಳಕೆದಾರರಿಗೆ ಆನಂದಿಬಹುದಾಗಿದೆ. ಅನಿಯಮಿತ ಪ್ಲಾನ್‌ನಲ್ಲಿ 250 ಉಚಿತ ಕರೆಗಳಿದ್ದು ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನೊಳಗೆಯೇ ನೀವು ಇದನ್ನು ಮಾಡಬಹುದಾಗಿದೆ. ಯಾವುದೇ ನೆಟ್‌ವರ್ಕ್‌ಗೆ ಆದಿತ್ಯವಾರದಂದು ಅನಿಯಮಿತ ಕರೆ ಮಾಡುವ ಸೌಲಭ್ಯ ಈ ಯೋಜನೆಯಲ್ಲಿದೆ.

ಬಿಬಿಜಿ ಸ್ಪೀಡ್ ಕೊಂಬಿ ಯುಎಲ್‌ಡಿ 2841

ಬಿಬಿಜಿ ಸ್ಪೀಡ್ ಕೊಂಬಿ ಯುಎಲ್‌ಡಿ 2841

8 ಎಮ್‌ಬಿಪಿಎಸ್ ವೇಗದಲ್ಲಿ 175 ಜಿಬಿ ಇಂಟರ್ನೆಟ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ರೂ 2,841 ರ ಈ ಪ್ಲಾನ್‌ನಲ್ಲಿ 1000 ಉಚಿತ ಕರೆಗಳನ್ನು ಬಿಎಸ್‌ಎನ್‌ಎಲ್‌ನೊಳಗೆಯೇ ಪಡೆದುಕೊಳ್ಳಬಹುದಾಗಿದೆ ಮತ್ತು ಉಚಿತ ಅನಿಯಮಿತ ಕರೆಗಳನ್ನು ಯಾವುದೇ ನೆಟ್‌ವರ್ಕ್‌ಗೆ ರಾತ್ರಿ ಮತ್ತು ಆದಿತ್ಯವಾರಗಳಂದು ಮಾಡಬಹುದಾಗಿದೆ.

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 2845 ವಿಡಿಎಸ್‌ಎಲ್

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 2845 ವಿಡಿಎಸ್‌ಎಲ್

16 ಎಮ್‌ಬಿಪಿಎಸ್ ಸ್ಪೀಡ್‌ನಲ್ಲಿ 80 ಜಿಬಿ ಡೇಟಾವನ್ನು ಈ ಯೋಜನೆ ಒದಗಿಸಲಿದ್ದು 1000 ಉಚಿತ ಕರೆಗಳನ್ನು ನೆಟ್‌ವರ್ಕ್‌ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ ಮತ್ತು ಯಾವುದೇ ನೆಟ್‌ವರ್ಕ್‌ಗೆ ಆದಿತ್ಯವಾರ ಮತ್ತು ರಾತ್ರಿ ವೇಳೆಯಲ್ಲಿ ಉಚಿತ ಕರೆಗಳನ್ನು ಮಾಡಬಹುದಾಗಿದೆ.

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 3445 ವಿಡಿಎಸ್‌ಎಲ್

ಬಿಬಿಜಿ ಸೂಪರ್ ಸ್ಪೀಡ್ ಕೊಂಬೊ 3445 ವಿಡಿಎಸ್‌ಎಲ್

ಗರಿಷ್ಟ 24 ಎಮ್‌ಬಿಪಿಎಸ್ ವೇಗದಲ್ಲಿ 80 ಜಿಬಿ ಡೇಟಾವನ್ನು ಬಳಕೆದಾರರಿಗೆ ಪಡೆದುಕೊಳ್ಳಬಹುದಾಗಿದೆ. ಈ ಮಿತಿಯನ್ನು ಅನುಸರಿಸಿ, ವೇಗವು 1 ಎಮ್‌ಬಿಪಿಎಸ್‌ಗೆ ಇಳಿಯಲಿದೆ. ಈ ಪ್ಲಾನ್‌ನಲ್ಲಿ ನಿಮಗೆ 1000 ಉಚಿತ ಕರೆಗಳನ್ನು ಬಿಎಸ್‌ಎನ್‌ಎಲ್‌ ಸಂಖ್ಯೆಗೆ ಪಡೆದುಕೊಳ್ಳಬಹುದಾಗಿದೆ ಅಂತೆಯೇ ರಾತ್ರಿ ಮತ್ತು ಆದಿತ್ಯವಾರಗಳಂದು ಯಾವುದೇ ಸಂಖ್ಯೆಗೆ ಕರೆಮಾಡುವ ಸೌಲಭ್ಯ ಕೂಡ ಇದೆ.

Best Mobiles in India

English summary
Take a look at 10 best and unlimited BSNL broadband plans with up to 24 Mbps speed that you can subscribe to right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X