ಎಚ್ಚರ: ನಿಮ್ಮ ಫೋನ್ ಚಾರ್ಜ್‌ನಲ್ಲಿರುವಾಗ ದಯವಿಟ್ಟು ಬಳಸದಿರಿ!!!

By Shwetha
|

ಮೈಸೂರಿನಲ್ಲಿ ನಡೆದ ಭೀಕರ ಸ್ಮಾರ್ಟ್‌ಫೋನ್ ಅವಘಡದಲ್ಲಿ ಬಿಹಾರೀ ಮೂಲದ ವ್ಯಕ್ತಿಯೊಬ್ಬನ ಮುಖಕ್ಕೆ ತೀವ್ರವಾದ ಹಾನಿಯುಂಟಾಗಿದ್ದು ಫೋನ್ ಅನ್ನು ಚಾರ್ಜ್‌ಗೆ ಇಟ್ಟಿರುವ ಸಮಯದಲ್ಲಿ ಈತ ಕರೆಯನ್ನು ಸ್ವೀಕರಿಸಿರುವುದು ಅವಘಡಕ್ಕೆ ಮೂಲ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ.

ಓದಿರಿ: ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯುವ 10 ಸಲಹೆಗಳು

18 ರ ಹರೆಯದ ಸೀತಾರಾಮನ್ ಎಂಬ ಈ ವ್ಯಕ್ತಿ ಬಿಹಾರದವನಾಗಿದ್ದಾನೆ ತನ್ನ ಹೆತ್ತವರೊಂದಿಗೆ ಈತ ವಾಸಿಸುತ್ತಿದ್ದಾನೆ. ಫೋನ್ ಚಾರ್ಜ್‌ನಲ್ಲಿರುವಾಗಲೇ ಈತ ಕರೆಗೆ ಉತ್ತರ ಕೊಟ್ಟಿದ್ದರಿಂದಾಗಿ ಸ್ಪೋಟ ಸಂಭವಿಸಿದೆ ಅದೂ ಈತನ ಮುಖದ ಸಮೀಪದಲ್ಲೇ ಸಂಭವಿಸಿರುವುದರಿಂದ ಹುಡುಗನ ಮುಖ ಸಂಪೂರ್ಣವಾಗಿ ರಕ್ತದಿಂದ ತುಂಬಿ ಹೋಗಿದೆ.

ಓದಿರಿ: ಜೇಬಿನಲ್ಲೇ ಒನ್ ಪ್ಲಸ್ ಒನ್ ಫೋನ್ ಸ್ಫೋಟ

ಈತನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದ್ದು ಮುಖಕ್ಕೆ ಸಣ್ಣ ಮಟ್ಟಿಗಿನ ಆಪರೇಶನ್ ಮಾಡುವುದು ಅನಿವಾರ್ಯವಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಫೋನ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿದ್ದು ಇದಕ್ಕೆ ಮುಖ್ಯ ಕಾರಣಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಕಳಪೆ ಬ್ಯಾಟರಿಗಳ ಬಳಕೆ

ಕಳಪೆ ಬ್ಯಾಟರಿಗಳ ಬಳಕೆ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಳಪೆ ಬ್ಯಾಟರಿಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಅಂತಹ ಕೆಲಸವನ್ನು ಈಗಲೇ ನಿಲ್ಲಿಸಿ. ಕಳಪೆ ಗುಣಮಟ್ಟದ ಬ್ಯಾಟರಿಗಳು ನಿಮ್ಮ ಫೋನ್ ಅನ್ನು ಬ್ಲಾಸ್ಟ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಕಳಪೆ ಗುಣಮಟ್ಟದ ಚಾರ್ಜರ್

ಕಳಪೆ ಗುಣಮಟ್ಟದ ಚಾರ್ಜರ್

ನಿಮ್ಮ ಸ್ಮಾರ್ಟ್‌ಫೋನ್‌ಗೆ ಚಾರ್ಜ್ ಮಾಡಲು ಬಳಸುವ ಚಾರ್ಜರ್ ಕಳಪೆ ಮಟ್ಟದ್ದಾಗಿದೆ ಎಂದಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಉಳಿಗಾಲವಿಲ್ಲ ಎಂದೇ ಅರ್ಥ.

ಫೋನ್ ಬ್ರ್ಯಾಂಡ್‌ನದ್ದೇ ಚಾರ್ಜರ್ ಮತ್ತು ಬ್ಯಾಟರಿ ಬಳಸಿ

ಫೋನ್ ಬ್ರ್ಯಾಂಡ್‌ನದ್ದೇ ಚಾರ್ಜರ್ ಮತ್ತು ಬ್ಯಾಟರಿ ಬಳಸಿ

ನಿಮ್ಮ ಮೊಬೈಲ್ ಫೋನ್‌ ಬ್ರ್ಯಾಂಡ್‌ನದ್ದೇ ಚಾರ್ಜರ್ ಹಾಗೂ ಬ್ಯಾಟರಿ ಬಳಸಿ. ಬೆಲೆ ಕಡಿಮೆ ಎಂದು ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಬ್ಯಾಟರಿ ಬಳಸದಿರಿ.

ಚಾರ್ಜಿಂಗ್‌ನಲ್ಲಿರುವಾಗ ಫೋನ್ ಸಂಭಾಷಣೆ ಬೇಡ

ಚಾರ್ಜಿಂಗ್‌ನಲ್ಲಿರುವಾಗ ಫೋನ್ ಸಂಭಾಷಣೆ ಬೇಡ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಸಂಭಾಷಣೆ ಬೇಡ. ಇದು ತುಂಬಾ ಅಪಾಯಕಾರಿಯಾಗಿರುತ್ತದೆ.

ಒದ್ದೆ ಫೋನ್ ಅನ್ನು ಚಾರ್ಜ್ ಮಾಡದಿರಿ

ಒದ್ದೆ ಫೋನ್ ಅನ್ನು ಚಾರ್ಜ್ ಮಾಡದಿರಿ

ನಿಮ್ಮ ಫೋನ್ ಒದ್ದೆಯಾದಲ್ಲಿ ಅದನ್ನು ಚಾರ್ಜ್ ಮಾಡದಿರುವುದೇ ಉತ್ತಮವಾಗಿದೆ. ಇದು ಸಂಪೂರ್ಣ ಒಣಗಿದ ನಂತರವಷ್ಟೇ ಫೋನ್‌ಗೆ ಚಾರ್ಜ್ ಮಾಡಿ.

ಹಾಳಾದ ಬ್ಯಾಟರಿ ಬದಲಾಯಿಸಿ

ಹಾಳಾದ ಬ್ಯಾಟರಿ ಬದಲಾಯಿಸಿ

ನಿಮ್ಮ ಫೋನ್ ಬ್ಯಾಟರಿ ಹಾಳಾಗಿದೆ ಎಂದಲ್ಲಿ ಅದನ್ನು ಕೂಡಲೇ ಬದಲಾಯಿಸಿ. ಬ್ಯಾಟರಿ ಹಾಳಾಗಿದೆ ಎಂದಾದಲ್ಲಿ ಅದು ಶೀಘ್ರವೇ ಬಿಸಿಯಾಗುತ್ತದೆ. ಆದ್ದರಿಂದ ಅದನ್ನು ಕೂಡಲೇ ಬದಲಾಯಿಸಿ.

ಮೊಬೈಲ್ ಪೂರ್ಣವಾಗಿ ಚಾರ್ಜ್ ಆದನಂತರ ಆಫ್ ಮಾಡಿ

ಮೊಬೈಲ್ ಪೂರ್ಣವಾಗಿ ಚಾರ್ಜ್ ಆದನಂತರ ಆಫ್ ಮಾಡಿ

ನಿಮ್ಮ ಫೋನ್ ಪೂರ್ಣವಾಗಿ ಚಾರ್ಜ್ ಆಗಿದೆ ಎಂದಾದಲ್ಲಿ ಅದನ್ನು ಸಾಕೆಟ್‌ನಿಂದ ತೆಗೆದಿರಿಸಿ. ಪೂರ್ಣ ಚಾರ್ಜ್ ಆದ ನಂತರ ಕೂಡ ನಿಮ್ಮ ಫೋನ್ ಸಾಕೆಟ್‌ನಲ್ಲಿದೆ ಎಂದಾದಲ್ಲಿ ಫೋನ್ ಬಿಸಿಯಾಗಿ ಬರ್ನ್ ಆಗಬಹುದು.

ಬ್ಯಾಟರಿ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ

ಬ್ಯಾಟರಿ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ

ಸೂರ್ಯನ ಬಿಸಿಲು, ಒಲೆಯ ಹತ್ತಿರ, ಮೈಕ್ರೋವೋವನ್ ಸಮೀಪ ನಿಮ್ಮ ಫೋನ್ ಅನ್ನು ಇರಿಸದಿರಿ. ಇದರಿಂದ ಫೋನ್ ಬ್ಯಾಟರಿ ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

 ಮೇಲೆ ತಿಳಿಸಿದ ನಿಯಮಗಳನ್ನು ಮುರಿಯದಿರಿ

ಮೇಲೆ ತಿಳಿಸಿದ ನಿಯಮಗಳನ್ನು ಮುರಿಯದಿರಿ

ಮೇಲೆ ತಿಳಿಸಿದ ಎಂಟು ನಿಯಮಗಳನ್ನು ನಿಮ್ಮ ಫೋನ್ ಸುರಕ್ಷತೆಯಲ್ಲಿ ನೀವು ಪಾಲಿಸುತ್ತಿಲ್ಲ ಎಂದಾದಲ್ಲಿ ಫೋನ್‌ನ ಜೀವಿತಾವಧಿ ಕನಿಷ್ಟಗೊಳ್ಳಬಹುದು ಮತ್ತು ಇದಿರಿಂದ ನೀವು ನಷ್ಟವನ್ನು ಅನುಭವಿಸಬಹುದು.

ಮಲಗುವ ವೇಳೆ ದಿಂಬಿನಡಿ ಫೋನ್ ಇರಿಸದಿರಿ

ಮಲಗುವ ವೇಳೆ ದಿಂಬಿನಡಿ ಫೋನ್ ಇರಿಸದಿರಿ

ರಾತ್ರಿ ವೇಳೆ ಮಲಗುವ ಸಮಯದಲ್ಲಿ ನಿಮ್ಮ ಫೋನ್ ಅನ್ನು ತಲೆದಿಂಬಿನ ಅಡಿಯಲ್ಲಿ ಇರಿಸುವುದು ನಿಮಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಹೆಚ್ಚು ಜಾಗರೂಕರಾಗಿರಿ.

Best Mobiles in India

English summary
In a terrible incident, a youth’s face was ripped open in Mysuru, as his mobile phone exploded the moment he answered it while the device was being charged.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X