Subscribe to Gizbot

ಅಬ್ಬಾ ನೂರು ಮಿಲಿಯನ್ ಫೇಕ್ ಖಾತೆ ಫೇಸ್‌ಬುಕ್‌ಗಿದೆಯಂತೆ!

Written By:

ಫೇಸ್‌ಬುಕ್ ಖಾತೆ ಯಾರಿಗಿಲ್ಲ ಹೇಳಿ. ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಹೊಂದಿರುತ್ತಾರೆ. ಟ್ಬಿಟ್ಟರ್, ಫೇಸ್‌ಬುಕ್, ಗೂಗಲ್ ಪ್ಲಸ್ ಹೀಗೆ ಸೋಶಿಯಲ್ ನೆಟ್‌ವರ್ಕ್ ಎಂದು ಕರೆಯಲ್ಪಡುವ ಈ ಸೈಟ್‌ಗಳು ಜನಸಾಮಾನ್ಯರ ಜೀವನಾಡಿಯಾಗಿ ಬದಲಾಗಿದೆ.

ಆದರೆ ಈ ಜೀವನಾಡಿಗಳೂ ಒಮ್ಮೊಮ್ಮೆ ತೊಂದರೆಯಲ್ಲಿ ಸಿಲುಕಿ ಹಾಕುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಫೇಸ್‌ಬುಕ್ ಸುಮಾರು ನೂರು ಮಿಲಿಯನ್ ಸುಳ್ಳು ಖಾತೆಗಳನ್ನು ಜಗತ್ತಿನಾದ್ಯಂತ ಹೊಂದಿರಬಹುದೆಂದು ಇತ್ತೀಚೆಗೆ ನಡೆದ ಒಂದು ಪರಿಶೀಲನೆ ಸ್ಪಷ್ಟಪಡಿಸಿದೆ.

ಅಬ್ಬಾ ನೂರು ಮಿಲಿಯನ್ ಫೇಕ್ ಖಾತೆ ಫೇಸ್‌ಬುಕ್‌ಗಿದೆಯಂತೆ!

ಒಬ್ಬ ಬಳಕೆದಾರರು ತಮ್ಮದೇ ಆದ ಇನ್ನೊಂದು ಖಾತೆಯನ್ನು ಹೊಂದಿರುವುದು ಇಲ್ಲವೇ ಅವರಿಗೆ ತಿಳಿಯದೇ ಬೇರೆ ಯಾರಾದರೂ ಅವರ ಹೆಸರು ಚಿತ್ರವನ್ನು ಬಳಸಿಕೊಂಡು ತಮ್ಮ ಕಾರ್ಯವನ್ನು ನಡೆಸುವುದು ಇವೇ ಮುಂತಾದ ವಿಷಯಗಳು ಈಗ ಅನಾವರಣಗೊಂಡಿದೆ. ಒಂದು ಅಂದಾಜಿನ ಪ್ರಕಾರ ಈ ಸುಳ್ಳು ಖಾತೆಯ ಹಾವಳಿ ಹೆಚ್ಚಾಗಿ ಭಾರತ ಮತ್ತು ಟರ್ಕಿಯಲ್ಲಿ ಕಂಡುಬಂದಿದೆ.

ವೈವಿಧ್ಯಮಯ ಚಿತ್ರಗಳನ್ನು ಇನ್ನಷ್ಟು ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಸುಳ್ಳು ದಾಖಲೆಗಳು ಫೇಸ್‌ಬುಕ್ ಇಮೇಜನ್ನು ಹಾಳು ಮಾಡುವ ತಂತ್ರದಲ್ಲಿದೆ ಇದರ ಬಗ್ಗೆ ಸೂಕ್ತವಾದ ಪರಿಶೀಲನೆಯನ್ನು ಕಂಪೆನಿ ಕೈಗೊಂಡಿದ್ದು ಸುಳ್ಳು ಖಾತೆ ಕಂಡುಬಂದಲ್ಲಿ ಅದನ್ನು ಜಡದಿಂದಲೇ ನಿವಾರಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ ಫೇಕ್ ಖಾತೆಗಳು ಫೇಸ್‌ಬುಕ್‌ನ ನಿಯಮಾವಳಿಗಳನ್ನು ಮುರಿದಿದ್ದು ಸಂಸ್ಥೆಗೆ ಕೆಟ್ಟ ಹೆಸರನ್ನು ತಂದುಕೊಡಬಲ್ಲದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಫೇಸ್‌ಬುಕ್ ಖಾತೆ ಹೊಂದಿರುವರು ಒಂದೊಂದು ರಂಗದಲ್ಲೂ ತಮ್ಮ ಬೇರೆ ಬೇರೆ ಖಾತೆಯನ್ನು ನಿರ್ಮಿಸುತ್ತಿದ್ದಾರೆ. ತಮ್ಮ ವ್ಯವಹಾರ, ಪ್ರಾಣಿಗಳಿಗಾಗಿ, ಸ್ನೇಹಿತರಿಗಾಗಿ, ವೈಯಕ್ತಿ ಬಳಕೆಗಾಗಿ ಹೀಗೆ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇನ್ನಾದರೂ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಯನ್ನು ಈ ತಾಣದ ನಿಯಮಾವಳಿಗನುಸಾರವಾಗಿ ರಚಿಸುವುದು ಉತ್ತಮ.

ಈ ಸುದ್ದಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot