ಒಂದೇ ಆಲ್ಬಂನಲ್ಲಿ ಸ್ನೇಹಿತರು ಫೋಟೋ ಅಪ್‌ಲೋಡ್‌ ಮಾಡಬಹುದು!

Posted By:

ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಹೆಚ್ಚಾಗಿ ಅಪ್‌ಲೋಡ್‌ ಮಾಡುವವರಿಗೆ ಒಂದು ಗುಡ್‌ ನ್ಯೂಸ್‌. ಫೇಸ್‌‌ಬುಕ್‌ ಫೋಟೋ ಆಲ್ಬಂನಲ್ಲಿ ಹೊಸ ವಿಶೇಷತೆಯನ್ನು ಪರಿಚಯಿಸಿದೆ. ಇನ್ನೂ ಮುಂದೆ ಆಲ್ಬಂನಲ್ಲಿರುವ ಬೇರೆ ಸ್ನೇಹಿತರು ಸಹ ತಮ್ಮಲ್ಲಿರುವ ಫೋಟೋಗಳನ್ನು ಆ ಆಲ್ಬಂಗೆ ಅಪ್‌ಲೋಡ್‌ ಮಾಡಬಹುದಾಗಿದೆ.

ಈ ವಿಶೇಷತೆಯನ್ನು ಇನ್ನೂ ಫೇಸ್‌ಬುಕ್‌ ಎಲ್ಲಾ ಕಡೆ ಪರಿಚಯಿಸಿಲ್ಲ. ಸದ್ಯ ಈ ವಿಶೇಷತೆ ಬಗ್ಗೆ ಪರೀಕ್ಷೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಶೇಷತೆಯನ್ನು ವಿಶ್ವದ ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ಫೇಸ್‌ಬುಕ್‌ ಹೇಳಿದೆ.

ಒಂದೇ ಆಲ್ಬಂನಲ್ಲಿ ಸ್ನೇಹಿತರು ಫೋಟೋ ಅಪ್‌ಲೋಡ್‌ ಮಾಡಬಹುದು!

ಇಲ್ಲಿಯವರೆಗೆ ಫೇಸ್‌ಬುಕ್‌ನಲ್ಲಿ ಒಬ್ಬರು ಮಾತ್ರ ಆಲ್ಬಂ ಕ್ರಿಯೇಟ್‌ ಮಾಡಬಹುದಿತ್ತು ಮತ್ತು ಆ ಆಲ್ಬಂ ಪ್ರೈವೆಸಿ ಆ ವ್ಯಕ್ತಿಗೆ ಮಾತ್ರ ಲಭ್ಯವಿತ್ತು. ಅಷ್ಟೇ ಅಲ್ಲದೇ ಒಂದು ಅಲ್ಬಂನಲ್ಲಿ ಸಾವಿರ ಫೋಟೋಗಳನ್ನು ಮಾತ್ರ ಆಪ್‌ಲೋಡ್‌ ಮಾಡಬಹುದಾಗಿತ್ತು.

ಈಗ ಫೇಸ್‌ಬುಕ್‌ ಈ ಫೋಟೋ ಆಲ್ಬಂ ಸೆಟ್ಟಿಂಗ್ಸ್‌ ಸ್ವಲ್ಪ ಬದಲಾವಣೆ ಮಾಡಿದ್ದು ಎರಡು ರೀತಿಯಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡಬಹುದಾಗಿದೆ. friends of contributors ಆಯ್ಕೆಯನ್ನು ಆರಿಸಿದ್ದಲ್ಲಿ ಆ ಆಲ್ಬಂನಲ್ಲಿರುವ ಫ್ರೆಂಡ್ಸ್‌ ಅಪ್‌ಲೋಡ್ ಮಾಡಬಹುದಾಗಿದ್ದು ಇನ್ನು contributors only ಆಯ್ಕೆಯನ್ನು ಆರಿಸಿದ್ದಲ್ಲಿ ಬಳಕೆದಾರ ಮಾತ್ರ ಫೋಟೋಗಳನ್ನು ಅಪ್‌ಲೋಡ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ ಮತ್ತು ಬಳಕೆದಾರರಿಗೆ ಏನು ಲಾಭ?

ಸ್ನೇಹಿತರು ತಮ್ಮ ಸಂತೋಷದ ಫೋಟೋಗಳನ್ನು ತಮ್ಮ ವೈಯಕ್ತಿಕ ಖಾತೆಯಲ್ಲಿ ಅಪ್‌ಲೋಡ್‌‌ ಬದಲು ಒಂದೇ ಅಲ್ಬಂನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಸುಲಭವಾಗಿ ಎಲ್ಲಾ ಫೋಟೋಗಳನ್ನು ಒಂದೇ ಕಡೆಯಲ್ಲಿ ವೀಕ್ಷಿಸಬಹುದು.

ಫೇಸ್‌ಬುಕ್‌ ಫೋಟೋಗಳನ್ನು ಎಲ್ಲವೂ ಡೇಟಾ ಸರ್ವರ್‌ನಲ್ಲಿ ಸಂಗ್ರಹವಾಗುತ್ತಿರುತ್ತದೆ. ಹೀಗಾಗಿ ಈ ವಿಶೇಷತೆ ಇರುವುದರಿಂದ ಬಳಕೆದಾರರು ಒಂದೇ ಫೋಟೋವನ್ನು ಒಂದೇ ಆಲ್ಬಂನಲ್ಲಿ ಅಪ್‌ಲೋಡ್‌ ಮಾಡುವುದರಿಂದ ಡೇಟಾ ಸರ್ವರ್‌ನಲ್ಲಿ ಇಲ್ಲಿಯವರಗೆ ಸಂಗ್ರಹವಾಗುತ್ತಿದ್ದ ಫೋಟೋ ಡೇಟಾದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ.


ಫೇಸ್‌ಬುಕ್‌ನ Shared Albums ವಿಶೇಷತೆಯ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: www.facebook.com

ಇದನ್ನೂ ಓದಿ: ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot