ಫೇಸ್‌ಬುಕ್ "ಸೇ ಥ್ಯಾಂಕ್ಸ್" ಟೂಲ್ ಸ್ನೇಹ ಬಾಂಧವ್ಯ ಇನ್ನು ಗಟ್ಟಿ

By Shwetha
|

ಫೆಬ್ರವರಿಯಲ್ಲಿ ಜನಪ್ರಿಯ ಲುಕ್ ಬ್ಯಾಕ್ ವೀಡಿಯೊಗಳನ್ನು ಲಾಂಚ್ ಮಾಡಿದ ನಂತರ, ತಮ್ಮ ಸ್ನೇಹಿತರಿಗೆ ಶುಭಾಶಯವನ್ನು ವಿನಿಯೋಗ ಮಾಡುವ ವೀಡಿಯೊ ಪರಿಕರವನ್ನು ಫೇಸ್‌ಬುಕ್ ಪ್ರಸ್ತುತಪಡಿಸಿದೆ.

ಇದನ್ನೂ ಓದಿ: ವೈಫೈ ಪಾಸ್‌ವರ್ಡ್ ಅನ್ನು ಮರುಪಡೆದುಕೊಳ್ಳುವುದು ಹೇಗೆ?

ಸ್ವಲ್ಪ ತಂತ್ರಜ್ಞಾನದ ಸ್ಪರ್ಶವನ್ನು ನೀಡುವ ಮೂಲಕ ಸ್ನೇಹಿತರು ಮತ್ತು ಕುಟುಂಬದ ನಡುವೆ ಫೇಸ್‌ಬುಕ್ ಪರಿಚಿತ ಬಂಧವನ್ನು ಏರ್ಪಡಿಸುತ್ತಿದೆ. ಸಾಮಾಜಿಕ ದಿಗ್ಗಜ ಎಂದೇ ಖ್ಯಾತಿಯನ್ನು ಪಡೆದಿರುವ ಫೇಸ್‌ಬುಕ್ ಬುಧವಾರ "ಸೇ ಥ್ಯಾಂಕ್ಸ್" ವೀಡಿಯೊ ಟೂಲ್ ಅನ್ನು ಪರಿಚಯಿಸಿದ್ದು, ತಮ್ಮ ಸಂಪರ್ಕಗಳ ಮೂಲಕ 'ವೈಯಕ್ತೀಕರಿಸಿದ ವೀಡಿಯೊ ಕಾರ್ಡ್‌ಗಳನ್ನು" ಬಳಕೆದಾರರಿಗೆ ರಚಿಸಲು ಅವಕಾಶವನ್ನು ಒದಗಿಸುತ್ತದೆ. ಇದರಿಂದ ತಮ್ಮ ಮನಸ್ಸಿನ ಭಾವನೆಗಳನ್ನು ಅವರಿಗೆ ಪದಗಳ ಮೂಲಕ ವ್ಯಕ್ತಪಡಿಸಬಹುದಾಗಿದೆ.

ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸುವ

ಮಿಲಿಯಗಟ್ಟಲೆ ಜನರು ತಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಫೇಸ್‌ಬುಕ್ ಅನ್ನು ಬಳಸುತ್ತಿದ್ದು, ಈ ರೀತಿಯ ವಿಧಾನವು ಅವರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ ಎಂದು ಫೇಸ್‌ಬುಕ್ ಡಿಸೈನ್ ನಿರ್ವಾಹಕ ಕ್ಯಾಮರೂನ್ ಈವಿಂಗ್ ತಿಳಿಸಿದ್ದಾರೆ. ನಿಮ್ಮ ಗೆಳೆತನವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ನಾವು ಹೊಸ ಹೊಸ ವಿಧಾನಗಳತ್ತ ಗಮನಹರಿಸುತ್ತಿದ್ದು ಇದು ನಿಜಕ್ಕೂ ಸಹಕಾರಿಯಾಗಲಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ನಿಕ್ (ಇಂಜಿನಿಯರಿಂಗ್ ಮ್ಯಾನೇಜರ್) ತಿಳಿಸಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ನ ಟಾಪ್ ತಂತ್ರಗಳು

ಇನ್ನು ವೀಡಿಯೊಗಳನ್ನು ರಚಿಸಲು Facebook.Com/thanks ಇದಕ್ಕೆ ಬಳಕೆದಾರರು ಹೋಗಬೇಕಾಗಿದೆ. ಇಲ್ಲಿ ಬಳಕೆದಾರರು ತಮಗಾಗಿಯೇ ವೀಡಿಯೊಗಳನ್ನು ರಚಿಸಬಹುದಾಗಿದ್ದು, ಇದಕ್ಕೆ ಸಂದೇಶಗಳನ್ನು ಸೇರಿಸಬಹುದು ಮತ್ತು ಪೋಸ್ಟ್‌ಗಳನ್ನು ಸಂಪಾದಿಸಬಹುದಾಗಿದೆ. ಈ ವೀಡಿಯೊಗಳು ಕಳುಹಿಸುವವರ ಮತ್ತು ಸ್ವೀಕರಿಸುವವರ ಟೈಮ್‌ಲೈನ್‌ನಲ್ಲಿ ಪ್ರಕಟವಾಗಲಿದೆ.

ಫೆಬ್ರವರಿಯಲ್ಲಿ ಲಾಂಚ್ ಆಗಿರುವ "ಎ ಲುಕ್ ಬ್ಯಾಕ್" ವೀಡಿಯೊ ಟೂಲ್‌ನ ಪ್ರಸ್ತುತಿಯನ್ನು "ಸೇ ಥ್ಯಾಂಕ್ಸ್" ಟೂಲ್ ಅನುಸರಿಸುತ್ತದೆ. ಬಳಕೆದಾರರು ತಮ್ಮ ಹೆಚ್ಚು ಮೆಚ್ಚಿನ 15 ಫೋಟೋಗಳನ್ನು ಇಲ್ಲಿ ಸೇರಿಸಬಹುದಾಗಿದ್ದು, ಸಂದೇಶಗಳು ಮತ್ತು ಲೈಫ್ ಈವೆಂಟ್‌ಗಳನ್ನು ಇದರಲ್ಲಿ ಸೇರಿಸಬಹುದಾಗಿದೆ.

Best Mobiles in India

English summary
This article tells about Facebook launches video tool to help friends say 'thanks'.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X