ಆಕರ್ಷಕ ಫೇಸ್‌ಬುಕ್ ಪ್ರೊಫೈಲ್‌ನಿಂದ ನಿಮಗೆ ಕೈತುಂಬಾ ಸಂಬಳ

By Shwetha
|

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರ ಸಾಮಾಜಿಕ ತಾಣದಲ್ಲಿ ನಿಮಗೊಂದು ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುವುದರ ಜೊತೆಗೆ ನಿಮ್ಮ ವೃತ್ತಿ ಜೀವನದ ಭಾಗ್ಯದ ಬಾಗಿಲನ್ನು ತೆರೆಯುವ ಕೀಲಿ ಕೈ ಎಂದೇ ಹೆಸರುವಾಸಿಯಾಗಿದೆ. ಏಕೆಂದರೆ ನಿಮ್ಮ ಉದ್ಯೋಗ ಭಡ್ತಿಯನ್ನು ಮಾಡುವ ಕರಕುಶಲತೆಯನ್ನು ಫೇಸ್‌ಬುಕ್ ಪ್ರೊಫೈಲ್ ಚಿತ್ರ ಹೊಂದಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ.

ಓದಿರಿ: ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್

ಬಳಕೆದಾರರ ಫೇಸ್‌ಬುಕ್ ಪ್ರೊಫೈಲ್ ಚಿತ್ರ ಅವರನ್ನು ವೃತ್ತಿರಂಗಕ್ಕೆ ಮರುನೇಮಕಗೊಳಿಸುವ ಅವಕಾಶಗಳು ಹೆಚ್ಚಾಗಿದ್ದು ಅವರ ರೆಸ್ಯೂಮೆಯಲ್ಲಿರುವ ಚಿತ್ರವು ಇದನ್ನು ಬಲವಾಗಿ ಸಾಧಿಸುತ್ತದೆ ಎಂಬುದಾಗಿ ಅಧ್ಯಯನ ಪುಷ್ಟೀಕರಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮತ್ತುಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

ಅಭ್ಯರ್ಥಿಗಳ ಪ್ರಥಮ ಆಯ್ಕೆ

ಅಭ್ಯರ್ಥಿಗಳ ಪ್ರಥಮ ಆಯ್ಕೆ

ತಮ್ಮ ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಪ್ರಥಮ ಆಯ್ಕೆಯನ್ನು ಮಾಡುವಾಗ ಉದ್ಯೋಗಿಗಳು ತಮ್ಮ ಸೀಮಿತ ಮಾಹಿತಿಯನ್ನು ಹೊಂದಿರುತ್ತಾರೆ. ಈ ಮಾಹಿತಿ ಲಭ್ಯವಾಗುವುದು ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳಾದ ಫೇಸ್‌ಬುಕ್‌ನಿಂದಾಗಿದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.

ಪ್ರಥಮ ಸಂದರ್ಶನ

ಪ್ರಥಮ ಸಂದರ್ಶನ

ಪ್ರಥಮ ಸಂದರ್ಶನದ ನಂತರ ಉದ್ಯೋಗಿಗಳು ಫೇಸ್‌ಬುಕ್ ಅನ್ನು ಬಳಸುತ್ತಾರೋ ಇಲ್ಲವೋ ಎಂಬುದಾಗಿ ಅಧ್ಯಯನವು ವಿಷದೀಕರಿಸಿದೆ.

ಆಕರ್ಷಕ ಫೇಸ್‌ಬುಕ್ ಪ್ರೊಫೈಲ್

ಆಕರ್ಷಕ ಫೇಸ್‌ಬುಕ್ ಪ್ರೊಫೈಲ್

ಆಕರ್ಷಕ ಫೇಸ್‌ಬುಕ್ ಪ್ರೊಫೈಲ್ ಅನ್ನು ಹೊಂದಿರುವ ವ್ಯಕ್ತಿ 21 ಶೇಕಡಾದಷ್ಟು ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಉದ್ಯೋಗ ಸಂದರ್ಶನ

ಉದ್ಯೋಗ ಸಂದರ್ಶನ

ಫೇಸ್‌ಬುಕ್ ಪ್ರೊಫೈಲ್ ಅನ್ನು ಆಧರಿಸಿ ಉದ್ಯೋಗ ಸಂದರ್ಶನವನ್ನು ನಡೆಸುವ ಕ್ರಿಯೆ ಈಗ ಆಧುನಿಕಗೊಂಡಿದೆ.

ನೇಮಕಾತಿ

ನೇಮಕಾತಿ

ಬೇರೆ ಬೇರೆ ಕ್ಷೇತ್ರದ ಉದ್ಯೋಗಕ್ಕಾಗಿ ನಡೆದಿರುವ ಈ ಕ್ರಿಯೆ ಫೇಸ್‌ಬುಕ್ ಪ್ರೊಫೈಲ್ ಅನ್ನು ಆಧರಿಸಿದೆ ಮತ್ತು ಆಕರ್ಷಕ ಪ್ರೊಫೈಲ್ ಹೊಂದಿರುವವರು ನೇಮಕಾತಿಯನ್ನು ಪಡೆದುಕೊಂಡಿದ್ದಾರೆ.

ಹೆಚ್ಚು ಮಾಹಿತಿಪೂರ್ಣ

ಹೆಚ್ಚು ಮಾಹಿತಿಪೂರ್ಣ

ನಿಮ್ಮ ಉದ್ಯೋಗ ರೆಸ್ಯೂಮೆಗಿಂತಲೂ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಹೆಚ್ಚು ಮಾಹಿತಿಪೂರ್ಣವಾಗಿದ್ದರೆ ನೀವು ಅರ್ಜಿ ಹಾಕಿದ ಕೆಲಸ ನಿಮಗೆ ದೊರೆಯುವುದು ಖಂಡಿತ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

ಫೇಸ್‌ಬುಕ್ ಪ್ರಸಿದ್ಧಿ

ಫೇಸ್‌ಬುಕ್ ಪ್ರಸಿದ್ಧಿ

ಫೇಸ್‌ಬುಕ್ ಇಂದು ಎಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಎಂದರೆ ಉದ್ಯೋಗ ದೊರಕಿಸಿಕೊಡುವಲ್ಲಿ ಕೂಡ ಈ ತಾಣ ತನ್ನ ಪ್ರಭಾವವನ್ನು ಬೀರಿದೆ.

ಸ್ಕ್ರೀನಿಂಗ್

ಸ್ಕ್ರೀನಿಂಗ್

ಹೆಚ್ಚಿನ ಅಭ್ಯರ್ಥಿಗಳನ್ನು ಫೇಸ್‌ಬುಕ್ ಮುಖಾಂತರವೇ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂಬುದಾಗಿ ಸಂಸ್ಥೆಗಳು ತಿಳಿಸಿವೆ.

Best Mobiles in India

English summary
Do you have an impressive profile picture on Facebook? It might increase your chances of getting hired, a new study suggests.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X