ಫೇಸ್‌ಬುಕ್ ಮುಖ್ಯಸ್ಥನಿಗೆ ಭಾರತದಲ್ಲಿ ದೀಪಾವಳಿ

By Shwetha
|

ಇತ್ತೀಚೆಗೆ ತಾನೇ ಭಾರತಕ್ಕೆ ಭೇಟಿ ನೀಡಿದ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ದೀಪಾವಳಿಯ ಶುಭಾಶಯವನ್ನು ಕೋರಿದ್ದಾರೆ. ದೀಪಾವಳಿಯನ್ನು ಭಾರತದಲ್ಲಿ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಕಾಮೆಂಟ್ ಕೂಡ ಮಾಡಿದ್ದಾರೆ.

ಓದಿರಿ: ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

ಗೋವಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಜುಕರ್‌ಬರ್ಗ್ ದಂಪತಿಗಳು ತೆಗೆದ ಛಾಯಾಚಿತ್ರವನ್ನು ಜುಕರ್‌ಬರ್ಗ್ ಪೋಸ್ಟ್ ಮಾಡಿದ್ದಾರೆ.. ಈ ವರ್ಷದ ದೀಪಾವಳಿ ಆಚರಣೆಯನ್ನು ಭಾರತದಲ್ಲಿ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರೆ ಗೋವಾದಲ್ಲಿ ನಡೆದ ಸ್ನೇಹಿತನ ವಿವಾಹ ಕಾರ್ಯಕ್ರಮದಲ್ಲಿ ನಾನು ಪ್ರಿಸಿಲ್ಲಾ ಪಾಲ್ಗೊಂಡಿದ್ದು ಅದರ ಫೋಟೋ ಇಲ್ಲಿದೆ ಎಂಬುದಾಗಿ ಮಾರ್ಕ್ ಬರೆದಿದ್ದಾರೆ.

ಓದಿರಿ: ಬಳಕೆದಾರರ ಟಾಪ್ ಫೇವರೇಟ್ ಟಾಪ್ ಫೇಸ್‌ಬುಕ್ ಫೀಚರ್ಸ್

ದೀಪಾವಳಿಯ ವಿಶೇಷತೆಯನ್ನು ಕುರಿತು ಅವರು ಪೋಸ್ಟ್‌ನಲ್ಲಿ ಬರೆದಿದ್ದು ಬೆಳಕಿನ ಹಬ್ಬವಾದ ದೀಪಾವಳಿಯನ್ನು ಹಣತೆಗಳಿಂದ ಬೆಳಗಿ ಪಟಾಕಿಗಳನ್ನು ಸಿಡಿಸಿ ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವೆಂಬಂತೆ ಆಚರಿಸುತ್ತಾರೆ. ಭಾರತದಲ್ಲಿರುವ ಜನರಿಗೆ ಅಂತೆಯೇ ವಿಶ್ವದ ಸಮುದಾಯಗಳಿಗೆ ದೀಪಾವಳಿ ಸಡಗರದ ಹಬ್ಬವಾಗಿದೆ ಎಂಬುದಾಗಿ ಅವರು ಪೋಸ್ಟ್ ಮಾಡಿದ್ದಾರೆ.

ಮಾರ್ಕ್ ಜುಕರ್‌ಬರ್ಗ್ ವಾಲ್ ನೋಡಬೇಕೇ?

ಮಾರ್ಕ್ ಜುಕರ್‌ಬರ್ಗ್ ವಾಲ್ ನೋಡಬೇಕೇ?

ಫೇಸ್‌ಬುಕ್ ಯುಆರ್‌ಎಲ್‌ ಕೊನೆಯಲ್ಲಿ ಸಂಖ್ಯೆ 4 ಅನ್ನು ಸೇರಿಸುವುದು ನಿಮ್ಮನ್ನು ಜುಕರ್‌ಬರ್ಗ್ ವಾಲ್‌ಗೆ ಕೊಂಡೊಯ್ಯುತ್ತದೆ.

ಫೇಸ್‌ಬುಕ್‌ನಲ್ಲಿ ಭಾಷೆ ಬದಲಾವಣೆ

ಫೇಸ್‌ಬುಕ್‌ನಲ್ಲಿ ಭಾಷೆ ಬದಲಾವಣೆ

ನೀವು ಖಾತೆ/ಲಾಂಗ್ವೇಜಸ್/ಇಂಗ್ಲೀಷ್ ಇಲ್ಲಿ ನಿಮ್ಮ ಮೆಚ್ಚಿನ ಭಾಷೆಯನ್ನು ಆಯ್ಕೆಮಾಡಬಹುದಾಗಿದೆ.

ಫೇಸ್‌ಬುಕ್ ಅಭಿಮಾನ

ಫೇಸ್‌ಬುಕ್ ಅಭಿಮಾನ

ಚೀನಾದಲ್ಲಿ ಫೇಸ್‌ಬುಕ್ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದು ವಿಶ್ವದಲ್ಲೇ ಅತಿ ಹೆಚ್ಚು ಫೇಸ್‌ಬುಕ್ ಬಳಸುವವರು ಚೀನೀಯರಾಗಿದ್ದಾರೆ.

ಫೇಸ್‌ಬುಕ್ ಹಿರಿಮೆ

ಫೇಸ್‌ಬುಕ್ ಹಿರಿಮೆ

ಫೇಸ್‌ಬುಕ್ ವಾಟ್ಸಾಪ್, ಟ್ವಿಟ್ಟರ್, ಮತ್ತು ಇನ್‌ಸ್ಟಾಗ್ರಾಮ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸಾಮಾಜಿಕ ತಾಣ ದೈತ್ಯ $20 ಬಿಲಿಯನ್ ಅನ್ನು ಕಳೆದ ಎರಡು ವರ್ಷಗಳಲ್ಲಿ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೇಲೆ ಖರ್ಚು ಮಾಡಿದೆ.

ಮೊಬೈಲ್‌ನಲ್ಲಿ ಫೇಸ್‌ಬುಕ್

ಮೊಬೈಲ್‌ನಲ್ಲಿ ಫೇಸ್‌ಬುಕ್

ತಿಂಗಳ ಲೆಕ್ಕದಲ್ಲಿ 1.1 ಬಿಲಿಯನ್‌ಗಿಂತಲೂ ಹೆಚ್ಚಿನ ಜನರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಅನ್ನು ಬಳಸುತ್ತಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಮಾರ್ಕ್ ಜುಕರ್‌ಬರ್ಗ್ ತಮ್ಮ ಮೊಬೈಲ್‌ನಲ್ಲಿ ಏನು ಹೊಂದಿದ್ದಾರೆ

ಮಾರ್ಕ್ ಜುಕರ್‌ಬರ್ಗ್ ತಮ್ಮ ಮೊಬೈಲ್‌ನಲ್ಲಿ ಏನು ಹೊಂದಿದ್ದಾರೆ

ಮಾರ್ಕ್ ತಮ್ಮ ಮೊಬೈಲ್‌ನಲ್ಲಿ ಹತ್ತು ಅಪ್ಲಿಕೇಶನ್‌ಗಳನ್ನು ಹೊಂದಿದ್ದಾರೆ ಅಂದರೆ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್, ಫೇಸ್‌ಬುಕ್ ಪೇಜಸ್ ಮ್ಯಾನೇಜರ್, ಪೇಪರ್, ಸ್ಲಿಂಗ್‌ಶಾಟ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಬೋಲ್ಟ್, ರೂಮ್ಸ್ ಮತ್ತು ಮೂವ್ಸ್ ಎಂದಾಗಿದೆ.

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ ಹಿರಿದು

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ ಹಿರಿದು

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ 1 ಬಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.

ಫೇಸ್‌ಬುಕ್ ಖ್ಯಾತಿ

ಫೇಸ್‌ಬುಕ್ ಖ್ಯಾತಿ

ಆಪಲ್ ಬಳಿ $155 ಬಿಲಿಯನ್ ದುಡ್ಡಿದ್ದು ಇದು ಏಳು ವಾಟ್ಸಾಪ್‌ಗಳನ್ನು ಖರೀದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೆ ಫೇಸ್‌ಬುಕ್ ತನ್ನ ಹಿರಿಮೆಯಿಂದ ಈ ಸಂದೇಶ ಅಪ್ಲಿಕೇಶನ್ ಅನ್ನು $22 ಬಿಲಿಯನ್‌ಗೆ ಖರೀದಿಸಿದೆ.

ಜಾಹೀರಾತು ಖ್ಯಾತಿ

ಜಾಹೀರಾತು ಖ್ಯಾತಿ

ಫೇಸ್‌ಬುಕ್ 1.5 ಮಿಲಿಯನ್ ಸಕ್ರಿಯ ಜಾಹೀರಾತುದಾರರನ್ನು ಹೊಂದಿದೆ.

ಫೇಸ್‌ಬುಕ್ ಪೋಸ್ಟ್

ಫೇಸ್‌ಬುಕ್ ಪೋಸ್ಟ್

ಒಂದು ಟ್ರಿಲಿಯನ್‌ಗಿಂತಲೂ ಅಧಿಕ ಫೇಸ್‌ಬುಕ್ ಪೋಸ್ಟ್‌ಗಳಿವೆ ಎಂಬುದು ನಿಮಗೆ ಗೊತ್ತೇ?

Best Mobiles in India

English summary
Facebook CEO Mark Zuckerberg, who visited India recently, has penned down a post wishing everyone for Diwali. He also revealed that he missed being in India for Diwali.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X