ಭಾರತದಲ್ಲಿ ಫೈರ್ ಬೋಲ್ಟ್ ನ ಹೊಸ ಇಯರ್‌ಬಡ್ಸ್‌ ಅನಾವರಣ; ಬೆಲೆ, ಫೀಚರ್ಸ್‌ ತಿಳಿಯಿರಿ!

|

ಪ್ರತಿಯೊಂದು ಫೈರ್‌ಬೋಲ್ಟ್ ಡಿವೈಸ್‌ಗಳೂ ಸಹ ತನ್ನದೇ ಆದ ವಿಶೇಷ ತಂತ್ರಜ್ಞಾನದೊಂದಿಗೆ ಬರಲಿದ್ದು, ಬಳಕೆದಾರರಿಗೆ ವಿಶಿಷ್ಟವಾದ ಅನುಭವ ನೀಡುತ್ತದೆ. ಅದರಂತೆ ಈಗಾಗಲೇ ಹಲವಾರು ವಿವಿಧ ಹಾಗೂ ಅಗತ್ಯ ಫೀಚರ್ಸ್‌ ಉಳ್ಳ ಸ್ಪೀಕರ್ಸ್‌ ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದ್ದು, ಬಹಳ ಆಕರ್ಷಕ ಎನಿಸಿದೆ. ಇದರ ನಡುವೆ ಈಗ ಹೊಸ ಇಯರ್‌ಪಾಡ್ಸ್‌ ಅನ್ನು ಅನಾವರಣ ಮಾಡಲಾಗಿದೆ.

ಭಾರತದಲ್ಲಿ ಫೈರ್ ಬೋಲ್ಟ್ ನ ಹೊಸ ಇಯರ್‌ಬಡ್ಸ್‌ ಅನಾವರಣ;ಬೆಲೆ, ಫೀಚರ್ಸ್‌ ತಿಳಿಯಿರಿ

ಹೌದು, ಆಡಿಯೋ ಮತ್ತು ವೇರಬಲ್ಸ್ ವಿಭಾಗದಲ್ಲಿ ಫೈರ್ ಬೋಲ್ಟ್ ಭಾರತದ ಪ್ರಸಿದ್ಧ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಇದರ ನಡುವೆ ಹೊಚ್ಚಹೊಸ TWS ಇಯರ್‌ಫೋನ್ ಅನ್ನು ಪರಿಚಯಿಸಿದ್ದು, ಇದಕ್ಕೆ ಫೈರ್ ಪಾಡ್ಸ್‌ ನಿಂಜಾ 601 ಎಂದು ಹೆಸರಿಡಲಾಗಿದೆ. ಈ ಡಿವೈಸ್‌ 30 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹೊಂದಿದೆ. ಹಾಗಿದ್ರೆ, ಭಾರತದಲ್ಲಿ ಇದರ ಆಫರ್‌ ಬೆಲೆ ಹಾಗೂ ಇನ್ನಿತರೆ ಪ್ರಮುಖ ಫೀಚರ್ಸ್ ಅನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌
ಹೊಸದಾಗಿ ಪ್ರಾರಂಭಿಸಲಾದ ಈ ಇಯರ್‌ಪಾಡ್ಸ್‌ ಅನ್ನು ಗೇಮರುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಶಿಯೋಮಿ, ರಿಯಲ್‌ಮಿ, ಬೋಟ್‌ ಹಾಗೂ ನಾಯ್ಸ್ ಸಂಸ್ಥೆಯ ಇಯರ್‌ಪಾಡ್ಸ್‌ ಜೊತೆಗೆ ಸ್ಪರ್ಧಿಸಲಿದೆ.

ಇದರ ವಿನ್ಯಾಸದ ವಿಷಯಕ್ಕೆ ಬಂದರೆ ಬಡ್ಸ್‌ಗಳು ಸ್ವಲ್ಪ ಓರೆಯಾದ ಅಥವಾ ಕೊಕ್ಕೆ ಸ್ವರೂಪವನ್ನು ಹೊಂದಿದ್ದು, ಈ ಮೂಲಕ ಪ್ರೀಮಿಯಂ ನೋಡ ಹೊಂದಿವೆ. ಇದರೊಂದಿಗೆ ಈ ಡಿವೈಸ್‌ ವಾಟರ್‌ ರೆಸಿಸ್ಟೆಂಟ್‌ ಫೀಚರ್ಸ್‌ ಹೊಂದಿದ್ದು, ಇದಕ್ಕಾಗಿ IPX6 ಪಡೆದುಕೊಂಡಿದೆ.

ಭಾರತದಲ್ಲಿ ಫೈರ್ ಬೋಲ್ಟ್ ನ ಹೊಸ ಇಯರ್‌ಬಡ್ಸ್‌ ಅನಾವರಣ;ಬೆಲೆ, ಫೀಚರ್ಸ್‌ ತಿಳಿಯಿರಿ

ಈ ಬಡ್ಸ್‌ಗಳ ಟಚ್‌ ಕಂಟ್ರೋಲ್‌ ಫೀಚರ್ಸ್‌ ಹೊಂದಿದ್ದು, ಈ ಮೂಲಕ ಮ್ಯೂಸಿಕ್‌ ಪ್ಲೇ ಮಾಡಬಹುದು ಹಾಗೂ ಕರೆಗಳ ಸಂದರ್ಭದಲ್ಲಿ ಕರೆ ಸ್ವೀಕಾರ ಮಾಡಲು ಅಥವಾ ತಿರಸ್ಕರಿಸಲು ಅನುಕೂಲವಾಗಲಿದೆ.

ಎಲ್‌ಇಡಿ ಆಯ್ಕೆ
ಇಷ್ಟೆಲ್ಲಾ ಫೀಚರ್ಸ್‌ ನೊಂದಿಗೆ ಬಾಹ್ಯ ನೋಟ ಸಹ ಇನ್ನಷ್ಟು ಹೊಸ ಲುಕ್‌ ನೀಡಲಿದೆ. ಯಾಕೆಂದರೆ ಇಯರ್‌ಬಡ್ಸ್‌ನ ಚಾರ್ಜಿಂಗ್‌ ಹಾಗೂ ಬಡ್ಸ್‌ಗಳಲ್ಲಿ ಎಲ್‌ಇಡಿ ಲೈಟ್ಸ್‌ ಆಯ್ಕೆ ನೀಡಲಾಗಿದ್ದು, ಈ ಡಿವೈಸ್‌ನ ಅಂದವನ್ನು ಶ್ರೀಮಂತಗೊಳಿಸಲಿದೆ.

ಫೈರ್ ಬೋಲ್ಟ್ ಫೈರ್ ಪಾಡ್ಸ್ ನಿಂಜಾ 601 ನಲ್ಲಿ ಸ್ಟ್ರಾಂಗ್ ಬೇಸ್ ಇರಲಿದ್ದು, ಇದಕ್ಕಾಗಿ 10mm ಪೂರ್ಣ-ಶ್ರೇಣಿಯ ಡೈನಾಮಿಕ್ ಡ್ರೈವರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸ್ಪಷ್ಟ ಕರೆ ಗುಣಮಟ್ಟಕ್ಕಾಗಿ, ಆಕ್ಟಿವ್‌ ನಾಯ್ಸ್ ಕ್ಯಾನ್ಸಲಿಂಗ್‌ ಫೀಚರ್ಸ್‌ ಹಾಗೂ ಎನ್ವಿರಾನ್ಮೆಂಟ್‌ ಫೀಚರ್ಸ್‌ ಅನ್ನು ಹೊಂದಿರುವುದು ಮತ್ತಷ್ಟು ವಿಶೇಷ.

ಇದರೊಂದಿಗೆ 38ms ಕಡಿಮೆ ಲೇಟೆನ್ಸಿ ಮೋಡ್ ಅನ್ನು ಇದು ನೀಡಲಿದ್ದು, ಸೂಪರ್ ಸಿಂಕ್ ತಂತ್ರಜ್ಞಾನ ಇರುವ ಹಿನ್ನೆಲೆ ಗ್ರಾಹಕರು ತಮ್ಮ ಸ್ಟೋರೇಜ್ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದ ತಕ್ಷಣವೇ ಸಂಬಂಧಿತ ಡಿವೈಸ್‌ಗಳಿಗೆ ತಕ್ಷಣವೇ ಕನೆಕ್ಟ್‌ ಆಗುತ್ತದೆ. ಇದಕ್ಕಾಗಿ ಈ ಡಿವೈಸ್‌ ಬ್ಲೂಟೂತ್ ಆವೃತ್ತಿ 5.2 ನಲ್ಲಿ ಕೆಲಸ ಮಾಡಲಿದೆ.

ಭಾರತದಲ್ಲಿ ಫೈರ್ ಬೋಲ್ಟ್ ನ ಹೊಸ ಇಯರ್‌ಬಡ್ಸ್‌ ಅನಾವರಣ;ಬೆಲೆ, ಫೀಚರ್ಸ್‌ ತಿಳಿಯಿರಿ

ಬ್ಯಾಟರಿ ಸಾಮರ್ಥ್ಯ
ಈ ಹೊಸ ಫೈರ್ ಬೋಲ್ಟ್ ಫೈರ್ ಪಾಡ್ಸ್ ನಿಂಜಾ ಒಂದು ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗೆಯೇ ಬಡ್ಸ್‌ಗಳು ಒಂದು ಪೂರ್ಣಚಾರ್ಜ್‌ನಲ್ಲಿ ಆರು ಗಂಟೆಗಳ ಪ್ಲೇ ಬ್ಯಾಕ್‌ ನೀಡಲಿದೆ.

ಬೆಲೆ ಹಾಗೂ ಲಭ್ಯತೆ
ಫೈರ್ ಬೋಲ್ಟ್ ಫೈರ್ ಪಾಡ್ಸ್ ನಿಂಜಾ 601 ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಭಾರತದಲ್ಲಿ ನೀವು ಇದನ್ನು 1,299 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದು ಫ್ಲಿಪ್‌ಕಾರ್ಟ್ ಮತ್ತು TWS ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ನಲ್ಲಿ ಲಭ್ಯವಿದೆ.

Best Mobiles in India

English summary
Fire Boltt Fire Pods Ninja 601 Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X