ಫ್ಲಿಪ್‌ಕಾರ್ಟ್‌ನಿಂದ ದೀಪಾವಳಿ ಸೇಲ್‌ ಘೋಷಣೆ: ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌

|

ಪ್ರಮುಖ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ತನ್ನ ದೀಪಾವಳಿ ಸೇಲ್‌ ಅನ್ನು ಅಕ್ಟೋಬರ್‌ 11 ರಿಂದ ಆರಂಭ ಮಾಡಲಿದೆ ಹಾಗೆಯೆ ಈ ಸೇಲ್‌ ಅಕ್ಟೋಬರ್‌ 16ರ ವರೆಗೆ ಇರಲಿದ್ದು, ಈ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ ಪ್ರಮುಖ ಗ್ಯಾಜೆಟ್‌ಗಳ ಮೇಲೆ ಬರೋಬ್ಬರಿ 45% ರಷ್ಟು ರಿಯಾಯಿತಿ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಮುಖ ಗ್ಯಾಜೆಟ್ಸ್‌ಗಳಿಗೆ ದೀಪಾವಳಿ ಹಬ್ಬದ ಹಿನ್ನೆಲೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ. ಈ ಸೇಲ್‌ನಲ್ಲಿ ಹೈ ಎಂಡ್‌ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಲಿವೆ. ಅದರಲ್ಲೂ ಐಫೋನ್‌ 13, ಸ್ಯಾಮ್‌ಸಂಗ್ ಗ್ಯಾಲಕ್ಸಿ S22+ ಸೇರಿದಂತೆ ಇನ್ನಿತರ ಸ್ಮಾರ್ಟ್‌ಫೋನ್‌ಗಳನ್ನು ಡಿಸ್ಕೌಂಟ್‌ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಚೇಂಜ್‌ ಆಫರ್‌

ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಚೇಂಜ್‌ ಆಫರ್‌

ದೀಪಾವಳಿ ಸೇಲ್‌ ಬಗ್ಗೆ ಫ್ಲಿಪ್‌ಕಾರ್ಟ್ ಟೀಸರ್ ಬ್ಯಾನರ್ ಹಂಚಿಕೊಂಡಿದೆ. ಇದರಲ್ಲಿ ರಿಯಲ್‌ಮಿ, ಪೊಕೊ ಮತ್ತು ರೆಡ್ಮಿ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ ಫೋನ್‌ಗಳಿಗೆ ಭಾರೀ ರಿಯಾಯಿತಿ ನೀಡಲಿದೆ ಎನ್ನುವುದು ದೃಢವಾಗಿದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳನ್ನು ಕೊಂಡುಕೊಳ್ಳಲು ಎಕ್ಸ್‌ಚೇಂಜ್‌ ಅಫರ್‌ ಸಹ ಘೋಷಣೆ ಮಾಡಲಾಗಿದ್ದು, ಇದರ ಜೊತೆಗೆ ಇಎಂಐ ಆಯ್ಕೆಯನ್ನೂ ನೀಡಲಾಗಿದೆ. ಇಷ್ಟೆಲ್ಲಾ ಆಫರ್‌ಗಳ ಜೊತೆಗೆ ಫ್ಲಿಪ್‌ಕಾರ್ಟ್‌ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಹಾಗೂ ಫ್ಲಿಪ್‌ಕಾರ್ಟ್ ಪೇ ಲೇಟರ್ ಆಯ್ಕೆಯನ್ನು ಗ್ರಾಹಕರಿಗೆ ನೀಡಲಿದೆ.

ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್

ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್

ಪ್ರಮುಖವಾಗಿ ಈ ಸೇಲ್‌ನಲ್ಲಿ ಆಪಲ್‌ ಐಫೋನ್‌ 13, ಐಫೋನ್‌ 13 ಮಿನಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+, ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ನ ಟೀಸರ್‌ನಿಂದ ತಿಳಿದುಬಂದಿದೆ. ಇದೆಲ್ಲದರ ಜೊತೆಗೆ ಪ್ರತಿದಿನ ಬೆಳಗ್ಗೆ 12 ಗಂಟೆ 8 ಗಂಟೆ ಮತ್ತು ಸಂಜೆ 4 ಗಂಟೆಯ ಸಮಯದಲ್ಲಿ ಪ್ರಮುಖ ಗ್ಯಾಜೆಟ್ಸ್‌ಗಳ ಮೇಲೆ ತ್ವರಿತ ವಿಶೇಷ ಕೊಡುಗೆಗಳನ್ನೂ ನೀಡಲಿದೆ.

ಐಫೋನ್‌ಗೆ ಡಿಸ್ಕೌಂಟ್‌

ಐಫೋನ್‌ಗೆ ಡಿಸ್ಕೌಂಟ್‌

ಮತ್ತೊಂದು ಇ-ಕಾಮರ್ಸ್‌ ತಾಣವಾದ ಅಮೆಜಾನ್ ಎಕ್ಸ್ಟ್ರಾ ಹ್ಯಾಪಿನೆಸ್‌ ಸೇಲ್‌ ಅನ್ನು ಅಕ್ಟೋಬರ್ 16 ರ ವರೆಗೆ ಮುಂದುವರಿಸಿದೆ. ಈ ಸೈಟ್‌ನಲ್ಲೂ ಸಹ ಗ್ರಾಹಕರು 64GB ವೇರಿಯಂಟ್‌ನ ಐಫೋನ್‌ 12ಕ್ಕೆ 47,999ರೂ. ಗಳನ್ನು ನೀಡಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದರಲ್ಲಿ ಎಕ್ಸ್‌ಚೇಂಜ್‌ ಆಫರ್‌ ಸಹ ಇದ್ದು, 13,000ರೂ. ಗಳ ರಿಯಾಯಿತಿ ನೀಡಲಾಗಿದೆ. ಹೀಗಾಗಿ ನೀವು ಕೇವಲ 34,999ರೂ. ಗಳಿಗೆ ಐ ಫೋನ್‌ ಖರೀದಿ ಮಾಡಬಹುದಾಗಿದೆ.

ಬ್ಯಾಂಕ್‌ ಆಫರ್‌

ಬ್ಯಾಂಕ್‌ ಆಫರ್‌

ಅಮೆಜಾನ್‌ನ ಈ ಎಕ್ಸ್ಟ್ರಾ ಹ್ಯಾಪಿನೆಸ್‌ ಸೇಲ್‌ನಲ್ಲಿ ಸಿಟಿಬ್ಯಾಂಕ್‌, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಇಎಂಐ ನಲ್ಲಿ ಖರೀದಿ ಮಾಡಿದರೆ 10 % ರಿಯಾಯಿತಿ ಸಹ ದೊರೆಯಲಿದೆ. ಇದರ ನಡುವೆ ಅಮೆಜಾನ್ ಪೇ ಮತ್ತು ಬಜಾಜ್ ಫಿನ್ಸರ್ ಮೂಲಕ ನೋ ಕಾಸ್ಟ್‌ ಇಎಂಐನಲ್ಲಿ ಗ್ಯಾಜೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ.

ವಿಜಯ್‌ ಸೆಲ್ಸ್‌ನಲ್ಲೂ ಡಿಸ್ಕೌಂಟ್‌

ವಿಜಯ್‌ ಸೆಲ್ಸ್‌ನಲ್ಲೂ ಡಿಸ್ಕೌಂಟ್‌

ವಿಜಯ್ ಸೇಲ್ಸ್ ತನ್ನ ಎಲ್ಲಾ ರೀಟೇಲರ್ ಮಳಿಗೆಗಳು ಹಾಗೂ ಆನ್‌ಲೈನ್‌ನಲ್ಲಿ ದಸರಾ ಸೇಲ್‌ನ್ನು ಘೋಷಣೆ ಮಾಡಿತ್ತು. ಇದರಲ್ಲಿ ಈಗಲೂ ಗ್ಯಾಜೆಟ್‌ಗಳ ಮೇಲೆ ಆಫರ್‌ ಇದ್ದು, ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಹೋಮ್ ಎಲೆಕ್ಟ್ರಾನಿಕ್ಸ್, ಮನರಂಜನಾ ಗ್ಯಾಜೆಟ್‌ಗಳ ಜೊತೆಗೆ ಐಫೋನ್‌ 14 ಮತ್ತು ಐಫೋನ್‌ 14 ಪ್ರೊ ಫೋನ್‌ಗಳನ್ನು ಖರೀದಿ ಮಾಡಬಹುದು. ಅದೂ ಸಹ ತ್ವರಿತ ರಿಯಾಯಿತಿ ಆಯ್ಕೆಯಲ್ಲಿ. ಐಫೋನ್ 14 ಫೋನ್‌ಅನ್ನು ಈ ಸೇಲ್‌ನಲ್ಲಿ ಆರಂಭಿಕ ಬೆಲೆ 74,900ರೂ. ಗಳಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Leading e-commerce site Flipkart has started Diwali sale. In this offer, high end smartphones are getting huge discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X