ನಥಿಂಗ್ ಫೋನ್ (1) ಖರೀದಿಸುವವರಿಗೆ ಫ್ಲಿಪ್‌ಕಾರ್ಟ್‌ ನೀಡುತ್ತಿದೆ ಬೊಂಬಾಟ್ ಆಫರ್ !

|

ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳ ನಡುವೆ ನಥಿಂಗ್ ಫೋನ್ (1) (Nothing Phone 1 )ತನ್ನದೇ ಆದ ಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ಮಧ್ಯಮ ಶ್ರೇಣಿಯ ಫೋನ್ ಇದಾಗಿದ್ದು, ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ. ಇದರ ನಡುವೆ ಪ್ರಮುಖ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ (1) ಗೆ ಬೊಂಬಾಟ್ ಆಫರ್‌ ಘೋಷಣೆ ಮಾಡಲಾಗಿದೆ.

ನಥಿಂಗ್ ಫೋನ್ (1)

ಹೌದು, ನೀವೇನಾದರೂ ನಥಿಂಗ್ ಫೋನ್ (1) ಅನ್ನು ಖರೀದಿಸಬೇಕು ಎಂದುಕೊಂಡರೆ ಮೊದಲು ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಿ. ಈ ಫೋನ್‌ ಪ್ರಸ್ತುತ 8GB+128GB, 8GB+256GB ಹಾಗೂ 12GB+256GB ನ ಮೂರು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G+ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ ಈ ಫೋನ್‌ನ ಇತರೆ ಫೀಚರ್ಸ್‌ ಏನು, ಪ್ಲಿಫ್‌ಕಾರ್ಟ್‌ನಲ್ಲಿ ಇರುವ ಆಫರ್‌ ಏನು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಫೋನ್‌ ವಿವರ

ಫೋನ್‌ ವಿವರ

ನೀವು ಪ್ಲಿಫ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫಿಚರ್ಸ್‌ ಗಳ ಕಣ್ಣಾಯಿಸುವುದು ಅತೀ ಮುಖ್ಯ. ಅಂತೆಯೇ ಈ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್‌ HD+ OLED ಡಿಸ್‌ಪ್ಲೇ ಹೊಂದಿದ್ದು, ಇದು 60Hz ನಿಂದ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ನೀಡಲಿದೆ. ಜೊತೆಗೆ HDR10+ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಆಯ್ಕೆ ಇರುವುದು ಮತ್ತಷ್ಟು ಆಕರ್ಷಕವಾಗಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G+ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ128GB, ಇಂಟರ್ನಲ್‌ ಸ್ಟೋರೇಜ್‌, 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಮತ್ತು 12GB RAM +256GB ಇಂಟರ್ನಲ್‌ ಸ್ಟೋರೇಜ್‌ನ ಮೂರು ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯ ಇದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮೆರಾ ಆಕರ್ಷಕವಾಗಿದೆ. ಈ ಕ್ಯಾಮೆರಾ ಸೋನಿ IMX766 ಮೂಲಕ ರನ್‌ ಆಗುತ್ತದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಫೋನ್‌ ಅನ್ನು ಒಂದು ಪೂರ್ಣ ಚಾರ್ಜ್‌ನಲ್ಲಿ 18 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಎರಡು ದಿನಗಳ ಸ್ಟ್ಯಾಂಡ್‌ಬೈ ಸಹ ಇದೆ. ಇನ್ನು ಈ ಫೋನ್ ಫಾಸ್ಟ್ ಚಾರ್ಜಿಂಗ್ ಆಯ್ಕೆ ಪಡೆದಿದ್ದು, ಕೇವಲ 30 ನಿಮಿಷಗಳಲ್ಲಿ 0 ರಿಂದ 50% ವರೆಗೆ ಚಾರ್ಜ್‌ ಆಗುತ್ತದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ನಥಿಂಗ್ ಫೋನ್ (1) ಎರಡು ಕಪ್ಪು ಮತ್ತು ಬಿಳಿಯ ಎರಡು ಬಣ್ಣದ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ 900 ಎಲ್ಇಡಿಗಳಿಂದ ಮಾಡಲಾದ ವಿಶಿಷ್ಟ ಬೆಳಕಿನ ವೇರಿಯಂಟ್‌ ಕರೆ ಬಂದಾಗ, ಆಪ್‌ಗಳಲ್ಲಿ ನೋಟಿಫಿಕೇಶನ್‌ ಬಂದಾಗ ಹಾಗೂ ಬ್ಲಿಂಕ್‌ ಆಗುತ್ತದೆ. ಜೊತೆಗೆ ಚಾರ್ಜಿಂಗ್ ಸ್ಥಿತಿ ಸೇರಿದಂತೆ ಇನ್ನಿತರೆ ಮಾಹಿತಿ ಈ ಬ್ಯಾಕ್‌ಪ್ಯಾನಲ್‌ನಲ್ಲಿರುವ ಎಲ್ಇಡಿ ಲೈಟ್ಸ್‌ನಿಂದ ತಿಳಿದುಬರುತ್ತದೆ.

ಈ ಫೋನ್‌ನ ಬೆಲೆ ಎಷ್ಟು?

ಈ ಫೋನ್‌ನ ಬೆಲೆ ಎಷ್ಟು?

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ನ 8 GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ಗೆ 31,999 ರೂ. ಗಳಿದೆ. ಹಾಗೆಯೇ 256 GB ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ಗೆ 34,999 ರೂ. ನಿಗದಿ ಮಾಡಲಾಗಿದೆ. ಜೊತೆಗೆ ನಥಿಂಗ್ ಫೋನ್ 1 ಲೈಟ್‌ನ 6 GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ಗೆ 24,990ರೂ. ಇದ್ದು, 12GB RAM ಹಾಗೂ 256 GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 37,999 ರೂ. ಗಳನ್ನು ನಿಗದಿ ಮಾಡಲಾಗಿದೆ.

ಫ್ಲಿಪ್‌ಕಾರ್ಟ್ ಆಫರ್‌ ಏನು?

ಫ್ಲಿಪ್‌ಕಾರ್ಟ್ ಆಫರ್‌ ಏನು?

ಈ ಫೋನ್‌ನ ಸಾಮಾನ್ಯ ದರ 32,999 ರೂ. ಗಳಿದ್ದು, ಫ್ಲಿಪ್‌ಕಾರ್ಟ್ 1,000 ರಿಯಾಯಿತಿ ನೀಡಲಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಇರುವವರು ಈ ಫೋನ್‌ ಖರೀದಿಯ ಮೇಲೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಇದರೊಂದಿಗೆ ವಿನಿಮಯ ಆಫರ್‌ ಸಹ ಲಭ್ಯವಿದ್ದು, ಈ ಮೂಲಕ ನೀವು 17,500ರೂ. ವರೆಗೂ ರಿಯಾಯಿತಿ ಪಡೆಯಬಹುದು.

ಫ್ಲಿಪ್‌ಕಾರ್ಟ್

ಇದಿಷ್ಟೇ ಅಲ್ಲದೆ, ಖರೀದಿದಾರರು ಫ್ಲಿಪ್‌ಕಾರ್ಟ್ ಪೇ ಲೇಟರ್‌ ಮೂಲಕ 500ರೂ. ಮೌಲ್ಯದ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್ ಅನ್ನು ಪಡೆಯಬಹುದಾಗಿದ್ದು, ಫ್ಲಿಪ್‌ಕಾರ್ಟ್ ಸ್ಟ್ಯಾಂಡರ್ಡ್ ಇಎಮ್‌ಐ ಹಾಗೂ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆಯಲ್ಲಿ ತಿಂಗಳಿಗೆ 2,963ರೂ. ಗಳನ್ನು ಪಾವತಿ ಮಾಡುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ.

Best Mobiles in India

Read more about:
English summary
Flipkart offers big discounts for who Planning to buy Nothing Phone (1)

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X