ರೂ 24,999 ಕ್ಕೆ ಜಿಯೋನಿ ಇಲೈಫ್ ಎಸ್7 ಭಾರತಕ್ಕೆ ಲಗ್ಗೆ

Written By:

ಕೊಟ್ಟ ಮಾತಿನಂತೆಯೇ, ಚೈನೀಸ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಜಿಯೋನಿ ಇಲೈಫ್ ಎಸ್7 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಹೈದ್ರಾಬಾದ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಬಿಡುಗಡೆ ಮಾಡಿದೆ.

ರೂ 24,999 ಕ್ಕೆ ಜಿಯೋನಿ ಇಲೈಫ್ ಎಸ್7 ಭಾರತಕ್ಕೆ ಲಗ್ಗೆ

ಎಮ್‌ಡಬ್ಲ್ಯೂಸಿ 2015 ರಲ್ಲಿ ಜಿಯೋನಿ ಇಲೈಫ್ ಎಸ್7 ಅನ್ನು ಘೋಷಿಸಲಾಗಿತ್ತು. ಇಲೈಫ್ ಎಸ್7 ಅಲ್ಯುಮಿನಿಯಮ್ ಮೆಗ್ನೇಸಿಯಮ್ ಕವಚವನ್ನು ಹೊಂದಿದ್ದು ಹಿಂಭಾಗ ಮತ್ತು ಮುಂಭಾಗ ಎರಡೂ ಬದಿಯಲ್ಲಿ ಗೋರಿಲ್ಲಾ ಗ್ಲಾಸ್ ಅನ್ನು ಹೊಂದಿದೆ.

ರೂ 24,999 ಕ್ಕೆ ಜಿಯೋನಿ ಇಲೈಫ್ ಎಸ್7 ಭಾರತಕ್ಕೆ ಲಗ್ಗೆ

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಹೆಚ್ಚುವರಿ ಕಾರ್ಯನಿರ್ವಹಣೆಯೊಂದಿಗೆ ಬಂದಿರುವ ಇಲೈಫ್ ಎಸ್7 ಸ್ಲಿಮ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಸೇರಲಿದ್ದು ಸ್ಲಿಮ್ ಮತ್ತು ಕ್ಷಿಪ್ರ ಕಾರ್ಯನಿರ್ವಹಣೆಯ ಜೋಡಿ ಫೋನ್ ಬಳಕೆದಾರರ ಮೇಲೆ ಹೊಸ ಮೋಡಿಯನ್ನು ಮಾಡಲಿದೆ ಎಂದು ಜಿಯೋನಿ ಅಧ್ಯಕ್ಷರಾದ ವಿಲಿಯಮ ಲೂ ತಿಳಿಸಿದ್ದಾರೆ.

ಇದನ್ನೂ ಓದಿ: ಖರೀದಿಯ ಮಜವನ್ನು ಹೆಚ್ಚಿಸುವ ಟಾಪ್ 10 ಫೋನ್‌ಗಳು

ರೂ 24,999 ಕ್ಕೆ ಜಿಯೋನಿ ಇಲೈಫ್ ಎಸ್7 ಭಾರತಕ್ಕೆ ಲಗ್ಗೆ

ಇಲೈಫ್ ಎಸ್7 ವಿಶೇಷತೆ
5.2 ಇಂಚಿನ ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ 1920 x 1080 ಪಿಕ್ಸೆಲ್‌ಗಳು
ಗೋರಿಲ್ಲಾ ಗ್ಲಾಸ್ 3 ಭದ್ರತೆ
1.7GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ವಿಸ್ತರಣಾ ಸ್ಲಾಟ್ ಇಲ್ಲ
13 ಎಮ್‌ಪಿ ರಿಯರ್ ಕ್ಯಾಮೆರಾ 8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ/3ಜಿ ಎಲ್‌ಟಿಇ
ಬ್ಲ್ಯೂಟೂತ್ 4.0, ಯುಎಸ್‌ಬಿ, ಓಟಿಜಿ, ಜಿಪಿಎಸ್
2750 mAh ಬ್ಯಾಟರಿ

ರೂ 24,999 ಕ್ಕೆ ಜಿಯೋನಿ ಇಲೈಫ್ ಎಸ್7 ಭಾರತಕ್ಕೆ ಲಗ್ಗೆ

ಕಪ್ಪು, ಬಿಳಿ, ನೀಲಿ ಅಂತೆಯೇ ಗುಲಾಬಿ ಬಣ್ಣದಲ್ಲಿ ಜಿಯೋನಿ ಇಲೈಫ್ ಎಸ್7 ಬಂದಿದ್ದು ಇದರ ಬೆಲೆ ರೂ 24,999 ಆಗಿದೆ. ಫೋನ್‌ನ ಕುರಿತು ಇನ್ನೂ ಅಧಿಕೃತ ಮಾಹಿತಿಗಳು ದೊರೆತಿಲ್ಲ ಮುಂಬರುವ ದಿನಗಳಲ್ಲಿ ಡಿವೈಸ್ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

English summary
As promised, the Chinese handset manufacturer Gionee has unveiled the Elife S7 in the Indian market at an event in Hyderabad today. nitially, Gionee Elife S7 was announced earlier in the MWC 2015(Mobile World Congress), which was held in Barcelona, Spain.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot