Subscribe to Gizbot

6,000mAh ಬ್ಯಾಟರಿಯ ವಿಶ್ವದ ಪ್ರಥಮ ಫೋನ್

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಜಿಯೋನಿ ಎರಡು ಅನನ್ಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಒಂದು 24 ಎಮ್‌ಪಿ ಕ್ಯಾಮೆರಾವನ್ನು ಪ್ರತಿನಿಧಿಸುತ್ತಿದ್ದರೆ ಮತ್ತೊಂದು 6,000mAh ಬ್ಯಾಟರಿಯೊಂದಿಗೆ ಬಂದಿದೆ.

ಓದಿರಿ: ಆಪಲ್ ಕದ್ದಿರುವ ಆಂಡ್ರಾಯ್ಡ್‌ನ ಅತ್ಯುನ್ನತ ಫೀಚರ್‌ಗಳೇನು?

ಹೊಸ ಇಲೈಫ್ ಇ8ನ 24 ಎಮ್‌ಪಿ ಕ್ಯಾಮೆರಾ 100 ಎಮ್‌ಪಿ ರೆಸಲ್ಯೂಶನ್‌ವರೆಗೆ ಚಿತ್ರಗಳನ್ನು ಉತ್ಪಾದಿಸುತ್ತದೆ. 3ಎಕ್ಸ್ ಜೂಮ್‌ನಲ್ಲಿ ನಿಜಕ್ಕೂ ಅದ್ಭುತ ಚಿತ್ರವನ್ನು ಒದಗಿಸುತ್ತಿರುವ ಆಂಡ್ರಾಯ್ಡ್‌ನ ಪ್ರಥಮ ಫೋನ್ ಇದಾಗಿದೆ. ಇದರ ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ.

6,000mAh ಬ್ಯಾಟರಿಯ ವಿಶ್ವದ ಪ್ರಥಮ ಫೋನ್

ಫೋನ್ 6 ಇಂಚಿನ ಅಮೋಲೆಡ್ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು 1440x2540 ಪಿ ರೆಸಲ್ಯೂಶನ್ ಇದರಲ್ಲಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ಓಎಸ್ ಅನ್ನು ಡಿವೈಸ್ ಒಳಗೊಂಡಿದ್ದು ಅಮಿಗೊ 3.1 ಸಾಫ್ಟ್‌ವೇರ್ ಇದರಲ್ಲಿದೆ. 2GHZ ಓಕ್ಟಾ ಕೋರ್ ಮೀಡಿಯಾ ಟೆಕ್ MT6785 ಚಿಪ್‌ಸೆಟ್ ಅನ್ನು ಪಡೆದುಕೊಂಡಿದ್ದು 3 ಜಿಬಿ RAM ಫೋನ್‌ನಲ್ಲಿದೆ. ಆಂತರಿಕ ಸಂಗ್ರಹಣಾ ಸಾಮರ್ಥ್ಯ 64 ಜಿಬಿಯಾಗಿದೆ.

ಓದಿರಿ: ಫೋನ್ ನೀರಲ್ಲಿ ಬಿದ್ದಾಗ ಏನು ಮಾಡಬೇಕು?

ಇನ್ನು ಫೋನ್ ಡ್ಯುಯಲ್ ಸಿಮ್‌ಗಳನ್ನು ಪಡೆದುಕೊಂಡಿದ್ದು 4ಜಿ ಮತ್ತು ಎನ್‌ಎಫ್‌ಸಿಯನ್ನು ಇದು ಬೆಂಬಲಿಸುತ್ತದೆ. ಇನ್ನು ಪ್ರಮಾಣಿತ ಸಂಪರ್ಕ ವಿಶೇಷತೆಗಳು ಇದರಲ್ಲಿವೆ. ಇದು 3,500mAh ಬ್ಯಾಟರಿ ಹೊಂದಿದ್ದು ಬೆರಳಚ್ಚು ತಂತ್ರಜ್ಞಾನ ಮತ್ತು ಡ್ಯುಯಲ್ ಸ್ಪೀಕರ್ ಫೋನ್‌ನಲ್ಲಿದೆ. ಇದು ಗಟ್ಟಿ ಧ್ವನಿಯನ್ನು ಪೂರೈಸುತ್ತದೆ.

6,000mAh ಬ್ಯಾಟರಿಯ ವಿಶ್ವದ ಪ್ರಥಮ ಫೋನ್

ಜಿಯೋನಿ ಮ್ಯಾರಥಾನ್ ಎಮ್5, 6,000mAh ಬ್ಯಾಟರಿಯೊಂದಿಗೆ ಬಂದಿದ್ದು, ನಾಲ್ಕು ದಿನಗಳ ಚಾರ್ಜ್ ಅನ್ನು ಒದಗಿಸಲಿದೆ. ಫೋನ್ 5.5 ಇಂಚಿನ ಅಮೋಲೆಡ್ ಸ್ಕ್ರೀನ್‌ನೊಂದಿಗೆ ಬಂದಿದ್ದು 720x1280 ಪಿ ರೆಸಲ್ಯುಶನ್ ಇದರಲ್ಲಿದೆ. ಆಂಡ್ರಾಯ್ಡ್ ಲಾಲಿಪಪ್ ಓಪರೇಟಿಂಗ್ ಸಿಸ್ಟಮ್, 16 ಜಿಬಿ ಆಂತರಿಕ ಸಂಗ್ರಹಣೆ, 2 ಜಿಬಿ RAM ಇದರಲ್ಲಿದೆ. ಕ್ವಾಡ್ ಕೋರ್ ಮೀಡಿಯಾಟೆಕ್ MT6735 ಚಿಪ್‌ಸೆಟ್, 13 ಎಮ್‌ಪಿ ರಿಯರ್ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಮತ್ತು 4ಜಿ ಬೆಂಬಲವನ್ನು ಇದು ಒದಗಿಸುತ್ತಿದೆ.

English summary
Chinese manufacturer Gionee has unveiled unique two smartphones - one featuring a 24MP camera and the other a 6,000mAh battery - at an event in Beijing.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot