ಗೂಗಲ್ ಕ್ರೋಮ್‌ ಉತ್ತಮ ವೇಗ ಪಡೆಯಲಿದೆ, ಹೇಗೆ ಗೊತ್ತಾ?

By Suneel
|

ಯಾವುದೇ ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳಲ್ಲೂ ಸಹ ಸರ್ಚ್‌ ಇಂಜಿನ್‌ ಆಗಿ ಬಳಸುವುದು 'ಗೂಗಲ್ ಕ್ರೋಮ್‌'. ಪ್ರಸ್ತುತದಲ್ಲಿ 'ಗೂಗಲ್‌ ಕ್ರೋಮ್‌' ವೆಬ್‌ ಬ್ರೌಸರ್‌ ಸ್ಪೀಡ್‌ ಆಗಿ ಮಾಹಿತಿ ಬ್ರೌಸ್‌ ಮಾಡುತ್ತೋ ಬಿಡುತ್ತೋ ಆದ್ರೆ ಉತ್ತಮ ವೆಬ್‌ ಬ್ರೌಸರ್‌ ಅಂತ ಪ್ರಖ್ಯಾತಿ ಪಡೆದಿದೆ.

'ಗೂಗಲ್‌ ಕೋಮ್' (Google Chrome) ಉತ್ತಮ ವೆಬ್‌ ಬ್ರೌಸರ್‌ ಅಂತ ಎಷ್ಟು ಪ್ರಖ್ಯಾತಿ ಪಡೆದಿತ್ತೋ ಅಷ್ಟೇ ವೇಗವಾಗಿ ಇತ್ತೀಚೆಗೆ ತನ್ನ ವೇಗದಲ್ಲಿ ಕಳಪೆ ಗುಣಮಟ್ಟ ತೋರಿಸುತ್ತಿದೆ ಎಂದು ಅಸಂಖ್ಯಾತ ಬಳಕೆದಾರರು ಹೇಳುತ್ತಿದ್ದಾರೆ. ಬಳಕೆದಾರರು ಉತ್ತಮ ಅನುಭವ ಪಡೆಯಲು ಗೂಗಲ್‌ ಕ್ರೋಮ್‌ ಬ್ರೌಸರ್‌ ಗುಣಮಟ್ಟ ವೇಗಗೊಳಿಸಬೇಕು ಎಂಬ ಕೂಗು ಎಲ್ಲರಿಂದಲೂ ಕೇಳಿಬರುತ್ತಿತ್ತು. ಈಗಲೂ ಕೇಳಿಬರುತ್ತಿದೆ. ಈ ಬೇಡಿಕೆ ಗೂಗಲ್‌ಗೆ ಬಹುಬೇಗ ತಿಳಿದು ಈಗ ಅಂತಿಮವಾಗಿ ಜುಲೈನಲ್ಲಿ ಗೂಗಲ್ ಹೊಸ ಕ್ರೋಮ್‌ ಅನ್ನು ಬಿಡುಗಡೆ ಮಾಡುತ್ತಿದೆ. ಅದು ಯಾವುದು? ಫೀಚರ್‌ ಏನು? ಬಳಕೆದಾರರಿಗೆ ಯಾವ ರೀತಿ ಬಳಕೆ ಅನುಭವ ನೀಡಲಿದೆ? ಎಂಬುದನ್ನು ಸ್ಲೈಡರ್‌ನಲ್ಲಿ ಓದಿರಿ.

'ಫಾದರ್ಸ್‌ ಡೇ' ಗೂಗಲ್‌ ಆಡ್‌; ನೋಡಿದ್ರೆ ನೀವು ಕಣ್ಣೀರ್‌ ಹಾಕ್ತೀರೀ..

1

1

ಬೃಹತ್‌ ದೊಡ್ಡ ಸರ್ಚ್‌ ಇಂಜಿನ್‌ ಧೈತ್ಯ ಗೂಗಲ್‌ ಅಂತೂ ಇಂತೂ ಬಳಕೆದಾರರ ಮಾಹಿತಿ ಸರ್ಚ್‌ ಅನುಭವ ವೇಗಗೊಳಿಸಲು 'ಕ್ರೋಮ್‌ 53' ಅಭಿವೃದ್ದಿ ಪಡಿಸಿದ್ದು, ಕೆಲವು ಉತ್ತಮ ಬದಲಾವಣೆಯೊಂದಿಗೆ ಸೇವೆ ನೀಡಲಿದೆ.

2

2

'ಕ್ರೋಮ್‌ 52' ವರ್ಸನ್‌ಗೆ ಕೆಲವು ಅತ್ಯುತ್ತಮ ವ್ಯವಸ್ಥೆಯನ್ನು ಅಪ್‌ಡೇಟ್‌ ಮಾಡಿದ್ದು, ಜುಲೈನಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೆ 'ಕ್ರೋಮ್‌ 53' ಬಿಡುಗಡೆಯಾಗುತ್ತಿದೆ. 'ಕ್ರೋಮ್‌ 53' ಬಳಕೆಗೆ ಅಧಿಕೃತವಾಗಿ ಸೆಪ್ಟೆಂಬರ್‌ನಿಂದ ದೊರೆಯಲಿದೆ.

3

3

ಬಳಕೆದಾರರು ಪ್ರಸ್ತುತದಲ್ಲಿ ಕ್ರೋಮ್‌ ಸುಧಾರಣೆ ಪರೀಕ್ಷೆಗಾಗಿ 'ಓಎಸ್‌ ಎಕ್ಸ್‌' ಮತ್ತು 'ವಿಂಡೋಸ್‌'ಗೆ ಗೂಗಲ್‌ ಕ್ರೋಮ್‌ ಬೆಟಾ ಆಪ್‌, 'ಕ್ರೋಮ್‌ ಕೆನರಿ (Chorme Canary version 53.0.2766.0)' ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದಾಗಿದೆ.

4

4

ಅಪ್‌ಡೇಟ್ ನಂತರ ಕೆಲವು ಬಳಕೆದಾರರು ವೆಬ್‌ಕಿಟ್‌ ಬೆಂಚ್‌ಮಾರ್ಕ್‌ನಲ್ಲಿ 'ಕ್ರೋಮ್‌ 51' ಗೆ ಹೋಲಿಸಿ ನೋಡಿದಲ್ಲಿ 'ಕ್ರೋಮ್‌ 53' ವೇಗದ ಚಲನಶೀಲತೆ ಪಡೆದಿದ್ದಾರೆ. 'ಓಎಸ್‌ ಎಕ್ಸ್' ಮತ್ತು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಶೇಕಡ 47 ರಷ್ಟು ವೇಗ ಹೆಚ್ಚಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ. ಇದರಿಂದ HTML ವ್ಯವಸ್ಥೆಯು 600 ಶೇಕಡ ಅಭಿವೃದ್ದಿ ಕಂಡಿದೆ.

5

5

ಗೂಗಲ್‌ ಹಲವು ವೆಬ್‌ಸೈಟ್‌ಗಳಲ್ಲಿ 'ಅಡೋಬ್‌ ಫ್ಲಾಶ್‌' ಸಪೋರ್ಟ್ ಸ್ಥಗಿತ ಗೊಳಿಸಲಿದ್ದು, ಕೆಲವು ಆಯ್ಕೆ ಮಾಡಿದ ವೆಬ್‌ಸೈಟ್‌ಗಳಲ್ಲಿ ಮಾತ್ರ ಅಡೋಬ್‌ ಫ್ಲಾಶ್‌ ಸಪೋರ್ಟ್‌ ನೀಡುವುದಾಗಿ ಪ್ರಕಟಮಾಡಿದೆ. ಅಡೋಬ್‌ ಫ್ಲಾಶ್‌ ಸಪೋರ್ಟ್‌ ಅನ್ನು ಯೂಟ್ಯೂಬ್‌, ಯಾಹೂ, ಫೇಸ್‌ಬುಕ್‌, ಟ್ವಿಚ್ ಮತ್ತು ಅಮೆಜಾನ್‌ಗಳಿಗೆ ನೀಡಲಿದೆಯಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!

ಅಂತು ಇಂತೂ 'ಫ್ರೀಡಂ 251' ಜೂನ್‌ 28 ರಿಂದ ಬುಕ್ ಮಾಡಿದವರ ಕೈ ಸೇರಲಿದೆಅಂತು ಇಂತೂ 'ಫ್ರೀಡಂ 251' ಜೂನ್‌ 28 ರಿಂದ ಬುಕ್ ಮಾಡಿದವರ ಕೈ ಸೇರಲಿದೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Google Chrome is about to get faster and better. Read how in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X