Subscribe to Gizbot

ಡಿವೈಸ್ ಬಗ್ ನಿವಾರಣೆಗೆ ಗೂಗಲ್ ರಣತಂತ್ರ

Written By:

95% ದಷ್ಟು ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಗ್ ಇರುವುದಾಗಿ ಅನ್ವೇಷಣೆ ನಡೆಸಲಾಗಿದ್ದು ಗೂಗಲ್ ಗಂಭೀರವಾಗಿ ಈ ಬಗ್ ಅನ್ನು ನಿವಾರಿಸುವ ಬಗೆಗೆ ಸಮೀಕ್ಷೆಯನ್ನು ನಡೆಸುತ್ತಿದೆ

ಓದಿರಿ: ಬಳಕೆದಾರರ ಭದ್ರತೆ: ಆಂಡ್ರಾಯ್ಡ್ ಹಿನ್ನಡೆ

ಸ್ಟೇಜ್ ಫ್ರೈಟ್ ಹೆಸರಿನ ಬಗ್ ಇದಾಗಿದ್ದು ಜಿಂಪೇರಿಮ್ ಲ್ಯಾಬ್ ಇದನ್ನು ಕಂಡುಹಿಡಿದಿದ್ದಾರೆ. ಹ್ಯಾಕರ್‌ಗಳು ಈ ಬಗ್ ಅನ್ನು ಬಳಸಿಕೊಂಡು ಕಂಪ್ಯೂಟರ್ ಅನ್ನು ಹ್ಯಾಕ್ ಮಾಡುವ ಸಂಭವನೀಯತೆ ಹೆಚ್ಚಿದೆ. ಪಠ್ಯ ಸಂದೇಶವನ್ನು ಬಳಸಿ ದೋಷಪೂರಿತ ಫೈಲ್ ಒಂದಾ ಫೋಟೋ ಅಥವಾ ವೀಡಿಯೊವನ್ನು ಬಳಕೆದಾರರಿಗೆ ಕಳುಹಿಸಬಹುದಾಗಿದೆ.

ಓದಿರಿ: ಪ್ರಸಿದ್ಧ ಟೆಕ್ ಹೆಸರುಗಳ ಹಿಂದಿರುವ ನಿಗೂಢ ರಹಸ್ಯ

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಕುರಿತು ಸಂಪೂರ್ಣ ಮಾಹಿತಿಯನ್ನು ಅರಿತುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚಿನ ಮುತುವರ್ಜಿ
  

ಆಂಡ್ರಾಯ್ಡ್ ಡಿವೈಸ್‌ಗಳ ಸಂರಕ್ಷಣೆಗಾಗಿ ಗೂಗಲ್ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಿದ್ದು ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ ಎಂಬುದಾಗಿ ಆಂಡ್ರಾಯ್ಡ್ ಸೆಕ್ಯುರಿಟಿ ಇಂಜಿನಿಯರ್ ಆಡ್ರಿಯನ್ ಲಡ್‌ವಿಗ್ ತಿಳಿಸಿದ್ದಾರೆ.

ನೆಕ್ಸಸ್ ಡಿವೈಸ್‌
  

ನೆಕ್ಸಸ್ ಡಿವೈಸ್‌ಗಳಿಗಾಗಿ ಕಂಪೆನಿ ಹೊಸ ಭದ್ರತಾ ನಿಯಮಗಳನ್ನು ಬಿಡುಗಡೆ ಮಾಡಲಿದೆ.

ಟಾಪ್ ಭದ್ರತಾ ನಿಯಮಗಳು
  

ನೆಕ್ಸಸ್ ಅಲ್ಲದ ಡಿವೈಸ್‌ಗಳಲ್ಲೂ ಈ ಟಾಪ್ ಭದ್ರತಾ ನಿಯಮಗಳು ಬರುವ ಸಾಧ್ಯತೆ ಇದೆ.

ಆಂಡ್ರಾಯ್ಡ್ ಒನ್ ಡಿವೈಸ್‌
  

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, ಎಸ್6 ಎಡ್ಜ್, ಗ್ಯಾಲಕ್ಸಿ ಎಸ್5, ನೋಟ್ 4 ಮತ್ತು ನೋಟ್ ಎಡ್ಜ್, ಎಚ್‌ಟಿಸಿ ಒನ್ ಎಮ್7, ಒನ್ ಎಮ್8 ಹೀಗೆ ಎಲ್ಲಾ ಆಂಡ್ರಾಯ್ಡ್ ಒನ್ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

ಭದ್ರತಾ ನವೀಕರಣ
  

ಪ್ರತೀ ತಿಂಗಳು ನೆಕ್ಸಸ್ ಡಿವೈಸ್‌ಗಳು ಭದ್ರತಾ ನವೀಕರಣಗಳನ್ನು ಪಡೆದುಕೊಳ್ಳಲಿದೆ.

ಡೀಫಾಲ್ಟ್ ಆಂಡ್ರಾಯ್ಡ್ ಮೆಸೆಂಜರ್ ಅಪ್ಲಿಕೇಶನ್
  

ಡೀಫಾಲ್ಟ್ ಆಂಡ್ರಾಯ್ಡ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ಗೂಗಲ್ ಅಪ್‌ಡೇಟ್ ಮಾಡುತ್ತಿದ್ದು ವೀಡಿಯೊಗಳಲ್ಲಿರುವ ವೈರಸ್‌ಗಳನ್ನು ನಿರ್ಬಂಧಿಸುವಲ್ಲಿ ಸಹಾಯ ಮಾಡಲಿದೆ.

ವೀಡಿಯೊ ಥಂಬ್‌ನೈಲ್
  

ಪಠ್ಯ ಸಂದೇಶವನ್ನು ಹೊಂದಿರುವ ವೀಡಿಯೊವನ್ನು ಬಳಕೆದಾರರು ಸ್ವೀಕರಿಸಿದಾಗ ಮೆಸೆಂಜರ್ ಅಪ್ಲಿಕೇಶನ್ ವೀಡಿಯೊ ಥಂಬ್‌ನೈಲ್ ಅನ್ನು ಪ್ರದರ್ಶಿಸಲಿದೆ.

ತಂತ್ರಜ್ಞಾನ
  

ASLR ಇನ್‌ಸ್ಟಾಲ್ ಆಗಿರುವ ತಂತ್ರಜ್ಞಾನದೊಂದಿಗೆ ಆಂಡ್ರಾಯ್ಡ್ ಡಿವೈಸ್‌ಗಳು ಬರುತ್ತಿದ್ದು ಸ್ಟೇಜ್‌ಫ್ರೈಟ್ ಬಗ್‌ನಿಂದ ಡಿವೈಸ್ ಅನ್ನು ರಕ್ಷಿಸಲಿದೆ.

ಮೆಮೊರಿಯನ್ನು ನಾಶ
  

ನಿಮ್ಮ ಫೋನ್‌ನಲ್ಲಿರುವ ಮೆಮೊರಿಯನ್ನು ನಾಶಗೊಳಿಸಲು ಹ್ಯಾಕರ್‌ಗಳಿಗೆ ಇದು ನಿರ್ಬಂಧನೆಯನ್ನು ಹೇರಲಿದೆ. ಈ ಬಗ್ ನಿಮ್ಮ ಫೋನ್‌ನ ವಿವಿಧ ಭಾಗಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ.

ಹ್ಯಾಕರ್‌ಗಳ ಕೈವಶ
  

ಫೋನ್‌ನ ಕ್ಯಾಮೆರಾ, ಮೈಕ್ರೋಫೋನ್ ಹೀಗೆ ಹ್ಯಾಕರ್‌ಗಳ ಕೈವಶವಾಗಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The bug, which has been called Stagefright and was discovered by Zimperium zLabs' Joshua J. Drake, lives in the media libraries Android uses to read common file formats such as PDFs.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot