ಪ್ರಸಿದ್ಧ ಟೆಕ್ ಹೆಸರುಗಳ ಹಿಂದಿರುವ ನಿಗೂಢ ರಹಸ್ಯ

By Shwetha
|

ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ ಹೆಚ್ಚು ಸಾಮಾನ್ಯವಾಗಿದ್ದು ಇನ್ನೊಂದನ್ನು ಮೆಟ್ಟಿ ನಿಂತು ಪ್ರಬಲವಾಗುವ ದಾರಿಯತ್ತ ಪ್ರತಿಯೊಂದು ಟೆಕ್ ಸಂಸ್ಥೆ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಜ್ಞಾನವನ್ನು ವಿಸ್ತರಿಸುತ್ತಾ ಮಾರುಕಟ್ಟೆಯಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದೇ ಪ್ರತಿಯೊಂದು ಕಂಪೆನಿಯೂ ಆಲೋಚಿಸುತ್ತಿರುವ ವಿಷಯವಾಗಿದೆ.

ಓದಿರಿ: ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

ಇನ್ನು ಬಳಕೆದಾರರು ಕೂಡ ಬ್ರ್ಯಾಂಡ್‌ಗಳಿಗೆ ಹೆಚ್ಚು ಗಮನವನ್ನು ನೀಡುತ್ತಿದ್ದು ಟಾಪ್ ಸ್ಥಾನದಲ್ಲಿ ಯಾವುದಿದೆ ಎಂಬುದನ್ನು ನೋಡಿಯೇ ತಮ್ಮ ತಂತ್ರಜ್ಞಾನ ಉತ್ಪನ್ನಗಳ ಖರೀದಿಯನ್ನು ಮಾಡುತ್ತಾರೆ. ಬೆಳೆಯುತ್ತಿರುವ ಈ ರೀತಿಯ ಸ್ಪರ್ಧೆ ಸಂಸ್ಥೆಯಲ್ಲಿ ಹೊಸತನದ ಕ್ರೇಜ್ ಅನ್ನು ಹುಟ್ಟುಹಾಕಿದೆ ಎಂದೇ ಹೇಳಬಹುದು.

ಓದಿರಿ: ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಇಂದಿನ ಲೇಖನದಲ್ಲಿ ಪ್ರಸಿದ್ಧಿಯ ತುತ್ತ ತುದಿಯಲ್ಲಿರುವ ಸಂಸ್ಥೆಗಳು ತಮ್ಮ ಹೆಸರುಗಳನ್ನು ಇಷ್ಟೊಂದು ವೈವಿಧ್ಯಮಯವಾಗಿ ಪಡೆದುಕೊಂಡಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಲಿರುವೆವು. ಪ್ರತಿಯೊಂದು ಸಂಸ್ಥೆಗಳ ಬೆನ್ನ ಹಿಂದೆ ಏನಾದರೂ ಸತ್ಯವಿದ್ದು ಇಂದು ಆ ಸತ್ಯವನ್ನು ಅವುಗಳ ಪ್ರಸಿದ್ಧ ಹೆಸರುಗಳ ಮೂಲಕ ತಿಳಿದುಕೊಳ್ಳೋಣ.

ಗೂಗಲ್

ಗೂಗಲ್

ಗೂಗೊಲ್ ಎಂಬ ಹೆಸರಿನಿಂದ ಇಂಟರ್ನೆಟ್ ದೈತ್ಯ ತನ್ನ ಹೆಸರನ್ನು ಪಡೆದುಕೊಂಡಿದೆ. ಸಂಖ್ಯೆ 1 ಮತ್ತು ಅದನ್ನು ಅನುಸರಿಸಿ 100 ಸೊನ್ನೆಗಳು ಗೂಗಲ್ ಹೆಸರಿನ ಹಿಂದೆ ಅಡಗಿರುವ ಸತ್ಯವಾಗಿದೆ.

ಅಮೆಜಾನ್

ಅಮೆಜಾನ್

ಅಮೆಜಾನ್ ಸ್ಥಾಪಕ ಜೆಫ್ ಬಿಸೋಸ್‌ಗೆ ಎ ಯಿಂದ ಪ್ರಾರಂಭವಾಗುವ ಹೆಸರನ್ನೇ ತನ್ನ ಕಂಪೆನಿಗೆ ಇಡುವ ಬಯಕೆಯಾಗಿತ್ತು. ಇಂಗ್ಲೀಷ್ ಅಕ್ಷರಗಳ ಸಾಲಿನಲ್ಲಿ ಎ ಟಾಪ್ ಸ್ಥಾನದಲ್ಲಿದ್ದು ತಮ್ಮ ಕಂಪೆನಿ ಕೂಡ ಟಾಪ್ ಸ್ಥಾನಕ್ಕೇರಬೇಕೆಂಬ ಉತ್ಕಟ ಬಯಕೆಯಿಂದ ಅಮೆಜಾನ್ ಬಂದಿದೆ.

ಸ್ಕೈಪ್

ಸ್ಕೈಪ್

ಮೂಲತಃ ಸ್ಕೈಪ್, ಸ್ಕೈಪರ್ ಎಂಬ ಹೆಸರನ್ನು ಹೊಂದಿತ್ತು. ನಂತರ ಹೆಸರನ್ನು ರಚಿಸುವಾಗ ಆರ್ ಅನ್ನು ಕೈಬಿಡಲಾಗಿತ್ತು.

ಯಾಹೂ

ಯಾಹೂ

'ಯೆಟ್ ಅನದರ್ ಹೈಯರಾರ್ಕಿಯಲ್ ಅಫೀಶಿಯಸ್ ಒರೇಕಲ್' ಈ ಸಂಸ್ಥೆಯ ವಿಸ್ತರಣಾ ರೂಪವಾಗಿದೆ.

ಸೋನಿ

ಸೋನಿ

ಸೋನಸ್‌ನಿಂದ ಈ ಹೆಸರು ವಿಭಾಗಿಸಲ್ಪಟ್ಟಿದೆ. ಇದೊಂದು ಲ್ಯಾಟೀನ್ ಪದವಾಗಿದೆ.

ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

1999 ರಲ್ಲಿ ಸಂಸ್ಥೆಯ ಹೆಸರು ಪ್ರಚಲಿತಕ್ಕೆ ಬಂದಿದ್ದು ಹಣ್ಣಿನ ಹೆಸರನ್ನು ಹೊಂದಿದೆ.

ಒರೇಕಲ್

ಒರೇಕಲ್

ಸಹಸ್ಥಾಪಕರಾದ ಲ್ಯಾರಿ ಎಲಿಸನ್ ಮತ್ತು ಬೋಬ್ ಓಟ್ಸ್ ಕಾರ್ಯನಿರ್ವಹಿಸಿದ ಪ್ರಾಜೆಕ್ಟ್‌ನ ಕೋಡ್ ಈ ಸಂಸ್ಥೆಯ ಹೆಸರಾಗಿದೆ. ಇದೊಂದು ಡೇಟಾಬೇಸ್ ಆಗಿದ್ದು ಯಾವುದೇ ರೀತಿಯ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕ್ಯಾನನ್

ಕ್ಯಾನನ್

ಕ್ವಾನನ್ ಇದರ ಮೂಲ ಉಚ್ಛಾರಣಾ ರೂಪವಾಗಿದ್ದು, ಬೌದ್ಧ ದೇವರುಗಳನ್ನು ಈ ಹೆಸರಿನಿಂದಲೇ ಕರೆಯುತ್ತಿದ್ದರು. ವಿಶ್ವದಾದ್ಯಂತ ಬಳಕೆದಾರರ ಮನ್ನಣೆಗೆ ಓಗೊಟ್ಟು ಕಂಪೆನಿ 1935 ರಲ್ಲಿ ಹೆಸರನ್ನು ಕ್ಯಾನನ್ ಆಗಿ ಬದಲಿಸಿತು.

ಸ್ಪೋಟಿಫೈ

ಸ್ಪೋಟಿಫೈ

ಸ್ಪಾಟ್ ಮತ್ತು ಐಡೆಂಟಿಫೈ ಎಂಬ ಎರಡು ಹೆಸರಿನ ಆಟವನ್ನು ಇಲ್ಲಿ ನಮಗೆ ಕಾಣಬಹುದಾಗಿದೆ.

Best Mobiles in India

English summary
Here's tracking down how some of the world's biggest technology companies got their names and what they mean.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X