ಎಆರ್ ತಂತ್ರಜ್ಞಾನದ 10 ಕೋಟಿ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಗೂಗಲ್ ಸಜ್ಜು!!

ಮುಂದಿನ ದಿನಗಳಲ್ಲಿ ಎಆರ್ ಕೋರ್‌ ವರ್ಷನ್ 1.0 ಮೂಲಕ ಸುಮಾರು 10 ಕೋಟಿ ಅಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಗೂಗಲ್‌ ಸಿದ್ಧತೆ ನಡೆಸುತ್ತಿದೆ.

|

ಭವಿಷ್ಯದಲ್ಲಿ ಸಾಮಾನ್ಯರಿಗೂ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಎಆರ್ ತಂತ್ರಜ್ಞಾನದ ತಂತ್ರಾಂಶಗಳನ್ನು ಬಳಸಿಕೊಳ್ಳಬಹುದಾದ ಸುಮಾರು 10 ಕೋಟಿ ಅಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಟೆಕ್ ದೈತ್ಯ ಕಂಪೆನಿ ಗೂಗಲ್‌ ಸಿದ್ಧತೆ ನಡೆಸುತ್ತಿದೆ ಎಂಬ ವರದಿ ಬಿಡುಗಡೆಯಾಗಿದೆ.

ಮುಂದಿನ ದಿನಗಳಲ್ಲಿ ಎಆರ್ ಕೋರ್‌ ವರ್ಷನ್ 1.0 ಮೂಲಕ ಸುಮಾರು 10 ಕೋಟಿ ಅಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಗೂಗಲ್‌ ಸಿದ್ಧತೆ ನಡೆಸುತ್ತಿದೆ. ಇದರಿಂದ ಎಆರ್‌ಕೋರ್ ವರ್ಷನ್ 1.0 ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವವರು ತಮ್ಮ ತಂತ್ರಾಂಶಗಳನ್ನು ಪ್ಲೇ ಸ್ಟೋರ್‌ಗೆ ತರಲು ದಾರಿಗಳು ತೆರೆದುಕೊಳ್ಳುತ್ತಿವೆ.

ಎಆರ್ ತಂತ್ರಜ್ಞಾನದ 10 ಕೋಟಿ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಗೂಗಲ್ ಸಜ್ಜು!!

ಈ ಹಿಂದೆ ಮಾರುಕಟ್ಟೆಗೆ ತಂದು ಮೂಲೆಗೆ ಎಸೆದಿದ್ದ 'ಗೂಗಲ್‌ ಗ್ಲಾಸ್' ಅನ್ನು, ಮತ್ತೆ ಹೊಸ ರೂಪದಲ್ಲಿ ಮತ್ತೊಮ್ಮೆ ಮಾರುಕಟ್ಟೆಗೆ ತರಲು ಗೂಗಲ್ ಯೋಜನೆ ರೂಪಿಸುತ್ತಿದೆ. ಕೇವಲ ತಂತ್ರಾಂಶಗಳಲ್ಲದೇ, ವಿಶೇಷ ಸಾಧನಗಳ ಮೂಲಕವೂ ಎಆರ್ ತಂತ್ರಜ್ಞಾನವನ್ನು ಪರಿಚಯಿಸಲು ಗೂಗಲ್ ಮುಂದೆ ಬರುತ್ತಿದೆ.!

ಎಆರ್ ತಂತ್ರಜ್ಞಾನದ 10 ಕೋಟಿ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಗೂಗಲ್ ಸಜ್ಜು!!

ಏನಿದು ಎಆರ್ ತಂತ್ರಜ್ಞಾನ
ಸುತ್ತಮುತ್ತಲಿನ ಭೌತಿಕ ಮತ್ತು ವಾಸ್ತವ ಪ್ರಪಂಚದ ಪರೋಕ್ಷ ವೀಕ್ಷಣೆ ತಂತ್ರಜ್ಞಾನವನ್ನು ಎಆರ್ ತಂತ್ರಜ್ಞಾನ ಎಂದು ಕರೆಯುತ್ತಾರೆ. ಇದರಲ್ಲಿ ಮಾಹಿತಿಯನ್ನು ಧ್ವನಿ, ವಿಡಿಯೋ, ಗ್ರಾಫಿಕ್ಸ್‌ ಅಥವಾ ಜಿಪಿಎಸ್ ಡೇಟಾದಂತಹ ಕಂಪ್ಯೂಟರ್ ಜನರೇಟೆಡ್ ಇನ್‌ಪುಟ್‌ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ನಾವು ನೋಡುವ ದೃಶ್ಯಗಳಲ್ಲಿ ವಸ್ತುಗಳನ್ನು ಸೃಷ್ಟಿಸುವುದು ಮತ್ತು ಇರದ ವಸ್ತುವನ್ನು ಬೇರೆ ಬೇರೆ ಕೋನಗಳಲ್ಲಿ ನೋಡಲು ಸಾಧ್ಯವಾಗುತ್ತದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: 12 ಗಂಟೆಗೆ ಶಿಯೋಮಿ ಸ್ಮಾರ್ಟ್‌ಟಿವಿ ಫ್ಲಾಶ್‌ಸೇಲ್!..ಖರೀದಿಗೆ ಭಾರೀ ಅವಕಾಶ!!

Best Mobiles in India

English summary
Google is set to make a major push to bring augmented reality technology (AR) to Android to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X