ಗೂಗಲ್ ಪಿಕ್ಸೆಲ್ 7a ಫೀಚರ್ಸ್ ಲೀಕ್!..ಫೀಚರ್ಸ್ ಹೇಗಿವೆ?

|

ಗೂಗಲ್‌ ತನ್ನ ಪಿಕ್ಸೆಲ್‌ ಸರಣಿಯಲ್ಲಿ ಈಗಾಗಲೇ ಪಿಕ್ಸೆಲ್‌ 4a 5G, ಪಿಕ್ಸೆಲ್‌ 6a, ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಇದೇ ಸಾಲಿನ ಆವೃತ್ತಿಯಲ್ಲಿ ಹೊಸ ಪಿಕ್ಸೆಲ್‌ 7a ( Google Pixel 7a) ಫೋನ್ ಅನ್ನು ಅನಾವರಣ ಮಾಡಲಿದ್ದು, ಕೆಲವು ಮಾಹಿತಿ ಲೀಕ್‌ ಆಗಿವೆ. ಈ ಫೋನ್‌ ಇತರೆ ಫೋನ್‌ಗಳಿಂತ ಆಕರ್ಷಕವಾದ ಫೀಚರ್ಸ್‌ ಅನ್ನು ಒಳಗೊಂಡಿರಲಿದ್ದು, ಅದರಲ್ಲಿ ಪ್ರಮುಖವಾಗಿ ವಾಯರ್‌ಲೆಸ್‌ ಚಾರ್ಜಿಂಗ್‌ ಆಯ್ಕೆ ಇರುವುದು ಇದರ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿದೆ.

lynx

ಹೌದು, 'lynx' ಎಂಬ ಕೋಡ್‌ನೇಮ್‌ ಹೊಂದಿರುವ ಪಿಕ್ಸೆಲ್ 7a ಫೋನ್‌ 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿದ್ದು, ಗೂಗಲ್‌ನ A ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 90Hz ರಿಫ್ರೆಶ್ ರೇಟ್ ಪಡೆದ ಮೊದಲ ಫೋನ್ ಇದಾಗಿರಲಿದೆ. ಹಾಗೆಯೇ ಗೂಗಲ್ ಪಿಕ್ಸೆಲ್ 7 ಹಾಗೂ 7 ಪ್ರೊ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲೂ ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಭಾರೀ ಡಿಸ್ಕೌಂಟ್‌ಗೆ‌ ಈ ಫೋನ್‌ಗಳು ಮಾರಾಟ ಆಗುತ್ತಿರುವುದು ಗಮನಾರ್ಹವಾದ ವಿಷಯ. ಇದರ ನಡುವೆ ಈಗ ಪಿಕ್ಸೆಲ್ 7a ಫೋನ್‌ ಮುಂದಿನ ವರ್ಷದ ವೇಳೆಗೆ ಅನಾವರಣಗೊಳ್ಳಲಿದೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಪ್ರಾರ್ಥಮಿಕವಾಗಿ ಲೀಕ್‌ ಆದ ಮಾಹಿತಿಯಂತೆ ಈ ಪಿಕ್ಸೆಲ್ 7a ಸ್ಮಾರ್ಟ್‌ಫೋನ್ 90Hz ರಿಫ್ರೆಶ್‌ ರೇಟ್‌ ಜೊತೆಗೆ ಸ್ಯಾಮ್‌ಸಂಗ್ ನಿರ್ಮಿತ 1080p ಪ್ಯಾನಲ್‌ ಇರಲಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆಯಲ್ಲಿ GN1, IMX787 ಮತ್ತು IMX712 ಲೆನ್ಸ್ ಸೆನ್ಸರ್‌ ಆಯ್ಕೆಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಹೆಡ್‌ಫೋನ್ ಜ್ಯಾಕ್ ಇಲ್ಲ?

ಹೆಡ್‌ಫೋನ್ ಜ್ಯಾಕ್ ಇಲ್ಲ?

ಈ ಹಿಂದಿನ ಸರಣಿ ಸ್ಮಾರ್ಟ್‌ಫೋನ್‌ ಅಗಿರುವ 6a ಸ್ಮಾರ್ಟ್‌ಫೋನ್‌ ಸಹ ಡ್ಯುಯಲ್ ಕ್ಯಾಮೆರಾ ಪಡೆದಿದ್ದದ್ದರೂ ಈ ಫೋನ್‌ ಮಾತ್ರ 6a ಸ್ಮಾರ್ಟ್‌ಫೋನ್‌ ಅನ್ನು ಮೀರಿಸುವ ಕ್ಯಾಮೆರಾ ಕ್ವಾಲಿಟಿ ನೀಡಲಿದೆ ಎಂದು ತಿಳಿದುಬಂದಿದೆ. ಉಳಿದಂತೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಈ ಫೋನ್‌ನಲ್ಲಿ ಇರುವುದಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಯಾಕೆಂದರೆ ಪಿಕ್ಸೆಲ್ 6a ಹೆಡ್‌ಫೋನ್ ಸಹ ಜ್ಯಾಕ್ ಆಯ್ಕೆ ಪಡೆದಿರಲಿಲ್ಲ. ಆದರೆ, ಗೂಗಲ್‌ ನ A ಸರಣಿ ಡಿವೈಸ್‌ಗಳಲ್ಲಿ ಪಿಕ್ಸೆಲ್‌ 5a ಸ್ಮಾರ್ಟ್‌ಫೋನ್‌ ಮಾತ್ರ ಈ ಫೀಚರ್ಸ್‌ ಪಡೆದುಕೊಂಡ ಸ್ಮಾರ್ಟ್‌ಫೋನ್‌ ಆಗಿದೆ.

ಪಿಕ್ಸೆಲ್‌ 8, ಪಿಕ್ಸೆಲ್‌ 8 ಪ್ರೊ ಫೀಚರ್ಸ್‌ ಏನಿರಬಹುದು?

ಪಿಕ್ಸೆಲ್‌ 8, ಪಿಕ್ಸೆಲ್‌ 8 ಪ್ರೊ ಫೀಚರ್ಸ್‌ ಏನಿರಬಹುದು?

ಇನ್ನು ಗೂಗಲ್‌ನ ಪಿಕ್ಸೆಲ್‌ 7a ನಂತರದ ಮುಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖವಾದ ಪಿಕ್ಸೆಲ್‌ 8, ಪಿಕ್ಸೆಲ್‌ 8 ಪ್ರೊ ಬಗ್ಗೆಯೂ ಕೆಲವು ಮಾಹಿತಿ ಹರಿದಾಡುತ್ತಿದೆ. ಅದರಂತೆ ಪಿಕ್ಸೆಲ್‌ 8 ಫೋನ್‌ 2268 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಇರುವ ಡಿಸ್‌ಪ್ಲೇ ಹೊಂದಿದ್ದರೆ, ಪಿಕ್ಸೆಲ್‌ 8 ಪ್ರೊ 2822 x 1344 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿರಲಿದೆ ಎಂದು ಊಹಿಸಲಾಗಿದೆ. ಈ ಎರಡೂ ಫೋನ್‌ಗಳು 12GB RAM ಸ್ಟೋರೇಜ್‌ ಆಯ್ಕೆಯನ್ನು ಪಡೆದಿರಲಿದ್ದು, ಟೆನ್ಸರ್ ಚಿಪ್ G3 ನಿಂದ ಕಾರ್ಯನಿರ್ವಹಿಸಲಿದೆ ಎಂದು ಊಹಿಸಲಾಗಿದೆ.

ಹಿಂದಿನ  ಸರಣಿಯ ಫೋನ್‌ ವಿವರ

ಹಿಂದಿನ ಸರಣಿಯ ಫೋನ್‌ ವಿವರ

ಗೂಗಲ್ ಪಿಕ್ಸೆಲ್ 7 ಪ್ರೊ
ಗೂಗಲ್ ಪಿಕ್ಸೆಲ್ 7 ಪ್ರೊ 6.7 ಇಂಚಿನ ಕ್ವಾಡ್ HD+ ಡಿಸ್‌ಪ್ಲೇ ಹೊಂದಿದ್ದು, 50MP + 48MP +12MP ನ ಟ್ರಿಪಲ್ ರಿಯರ್ ಕ್ಯಾಮರಾ ರಚನೆ ಪಡೆದುಕೊಂಡಿದೆ. ಹಾಗೆಯೇ 10.8MP ನ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. ಗೂಗಲ್‌ ಟೆನ್ಸರ್ G2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 4926 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇನ್ನು ಈ ಫೋನ್‌ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 84,999 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಗೂಗಲ್‌ ಪಿಕ್ಸೆಲ್ 7

ಗೂಗಲ್‌ ಪಿಕ್ಸೆಲ್ 7

ಗೂಗಲ್‌ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ 6.3 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದ್ದು, 50MP + 12MP ನ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗೆಯೇ 10.8MP ನ ಸೆಲ್ಫಿ ಕ್ಯಾಮರಾ ಇದರಲ್ಲಿದೆ. ಇನ್ನು ಗೂಗಲ್‌ ಟೆನ್ಸರ್ G2 ಪ್ರೊಸೆಸರ್‌ನ ಬಲ ಪಡೆದುಕೊಂಡಿದ್ದು, 4270 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಫೋನ್‌ ಅನ್ನು ಸಹ ನೀವು ಫ್ಲಿಪ್‌ಕಾರ್ಟ್‌ನಲ್ಲಿ 59,999 ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ.

Best Mobiles in India

Read more about:
English summary
Google Pixel 7a to offer 90Hz display along with wireless charging

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X