ಬಿಡುಗಡೆ ಆಯ್ತು ಆಂಡ್ರಾಯ್ಡ್ ನ್ಯೂಗಾ...!

Written By:

ಕುತೂಹಲ ಕಾರಣವಾಗಿದ್ದ ಆಂಡ್ರಾಯ್ಡ್ ನ ನೂತನ ಆವೃತ್ತಿ 'ಆಂಡ್ರಾಯ್ಡ್ ನ್ಯೂಗಾ' ಸದ್ಯ ಬಿಡುಗಡೆಯಾಗಿದ್ದು, ಗೂಗಲ್ ಈಗಾಗಲೇ ತನ್ನ ನೂತನ ಪಿಕ್ಸಲ್ ಸ್ಮಾರ್ಟ್‌ಪೋನುಗಳಿಗೆ ಹೊಸ ಆಪ್‌ಡೇಟ್ ನೀಡಿದೆ. ಆದರೆ ಸದ್ಯ ಇದು ಬೀಟಾ ವರ್ಷನ್ ನಲ್ಲಿದ್ದು, ಗೂಗಲ್ ಸದ್ಯ ನ್ಯೂಗಾದ ಪರೀಕ್ಷೆಯನ್ನು ನಡೆಸುತ್ತಿದೆ, ಇದು ಮುಗಿದ ನಂತರದಲ್ಲಿ ಶೀಘ್ರವೇ ಬೇರೆ ಪೋನುಗಳಿಗೆ ಆಪ್‌ಡೇಟ್‌ ದೊರೆಯಲಿದೆ.

ಬಿಡುಗಡೆ ಆಯ್ತು ಆಂಡ್ರಾಯ್ಡ್ ನ್ಯೂಗಾ...!

ಓದಿರಿ: ಐಬಾಲ್ ನಿಂದ ರೂ.8,999ಕ್ಕೆ 4G ಡುಯಲ್ ಸಿಮ್ ಟಾಬ್ಲೆಟ್ ಬಿಡುಗಡೆ

ಆಂಡ್ರಾಯ್ಡ್ ಹೊಸ ಆವೃತ್ತಿಯನ್ನು ಗೂಗಲ್ ತನ್ನ ಸ್ಮಾರ್ಟ್‌ಪೊನುಗಳಿಗೆ ಮಾತ್ರ ಸದ್ಯ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ 7.1.2 ಆವೃತ್ತಿಯನ್ನು ಪಿಕ್ಸಲ್ ಮತ್ತು ಪಿಕ್ಸಲ್ ಎಕ್ಸ್ಎಲ್, ನೆಕ್ಸಸ್ ಪ್ಲೇಯರ್, ಪಿಕ್ಸಲ್ ಸಿ ಮತ್ತು ಎಲ್‌ಜಿ ತಯಾರಿಸಿರುವ ನೆಕ್ಸಸ್ 5ಎಕ್ಸ್ ಪೋನುಗಳಲ್ಲಿ ಬಳಸಬಹುದಾಗಿದೆ. ಈ ಪೋನುಗಳಲ್ಲಿ ನ್ಯೂಗಾ ಟೆಸ್ಟ್ ನಡೆಸಲಿದ್ದು, ಇಲ್ಲಿ ಪರೀಕ್ಷೆ ಯಶಸ್ವಿಯಾದ ನಂತರ ಬೇರೆ ಪೋನುಗಳಿಗೆ ಲಭ್ಯವಾಗಲಿದೆ.

ಸದ್ಯ ಬೀಟಾ ಆವೃತ್ತಿ ಲಭ್ಯವಾಗಲಿದ್ದು, ನಂತರ ಇದೇ ಪೋನುಗಳಿಗೆ ಒಂದು ತಿಂಗಳಲ್ಲಿ ಫೈನಲ್ ವರ್ಷನ್ ಸಿಗಲಿದೆ. ಇದಾದ ನಂತರದಲ್ಲಿ ಬೇರೆ ಪೋನುಗಳಿಗೆ ಆಪ್‌ಡೇಟ್ ನೀಡಲು ಗೂಗಲ್ ಮುಂದಾಗಲಿದೆ ಎನ್ನಲಾಗಿದೆ. ಆಪ್‌ಡೇಟ್‌ಗಳು ಆಂಡ್ರಾಯ್ಡ್.ಕಾಮ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.

ಬಿಡುಗಡೆ ಆಯ್ತು ಆಂಡ್ರಾಯ್ಡ್ ನ್ಯೂಗಾ...!

ಓದಿರಿ: ವಾಟ್ಸ್‌ಆಪ್ ಹೊಸ ಫೀಚರ್‌ನಿಂದ ಇನ್ಮುಂದೆ ಸುಳ್ಳು ಹೇಳುವುದು ಕಷ್ಟ ಆಗಬಹುದು...!

ಆದರೆ ಗೂಗಲ್ ಸ್ಮಾರ್ಟ್‌ಪೋನುಗಳನ್ನು ಬಿಟ್ಟು ಟ್ಯಾಬ್ಲೆಟ್ ಗಳಿಗೆ ಆಪ್‌ಡೇಟ್‌ ಅನ್ನು ನೀಡಲ್ಲ. ಕಾರಣ ಸ್ಮಾರ್ಟ್‌ಪೋನುಗಳಲ್ಲಿ ಮೊದಲು ನ್ಯೂಗಾದ ಪರೀಕ್ಷೆ ನಡೆಸಿ, ಅದರಲ್ಲಿರುವ ಬಗ್‌ಗಳನ್ನು ನಿವಾರಿಸಿದ ನಂತರದಲ್ಲಿ ಬೇರೆ ಪೋನುಗಳಿಗೂ ಆಪ್‌ಡೇಟ್‌ ನೀಡಲಾಗುವುದು ಎನ್ನಲಾಗಿದೆ.

Read more about:
English summary
Google has started rolling out the next incremental update for the latest Android Nougat. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot