Subscribe to Gizbot

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ!

Written By:

ಮಾಹಿತಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕೇವಲ ಸರ್ಚ್ ಇಂಜಿನ್ ಮಾತ್ರವಲ್ಲದೇ, ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ರವೇಶಿಸುತ್ತಿದೆ. ಅಂತೂ ಐಫೋನ್ ವಿರುದ್ಧವೇ ಸ್ಪರ್ಧೆಗೆ ಸಿದ್ಧವಾಗಿದೆ ಎನ್ನಲಾಗಿದೆ.

ಹೌದು 'ಗೂಗಲ್‌', ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ತನ್ನದೇ ಆದ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುತ್ತಿದೆ. ಸದ್ಯದಲ್ಲೇ ಗೂಗಲ್ ತನ್ನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮೊಬೈಲ್‌ ಆಪರೇಟರ್‌ಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ಸಾಫ್ಟ್‌ವೇರ್‌ ಜೊತೆಗೆ ಹಾರ್ಡ್‌ವೇರ್‌ನಲ್ಲೂ ಸಹ ತನ್ನ ಬೆಳವಣಿಗೆ ಕಾಣಲಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿರಿ.

ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಮ್‌'

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ಈಗಾಗಲೇ ಅಭಿವೃದ್ದಿಪಡಿಸಿರುವ 'ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಮ್‌' 5 ಸ್ಮಾರ್ಟ್‌ಫೋನ್‌ಗಳಲ್ಲಿ ರನ್‌ ಆಗುತ್ತಿದ್ದು ಪ್ರಪಂಚದಾದ್ಯಂತ ಮಾರಾಟವಾಗುತ್ತಿವೆ. ಎಲ್‌ಜಿ ಮತ್ತು ಹುವಾವೆ ಪಾಲುದಾರರೊಂದಿಗೆ ಗೂಗಲ್‌ ನೆಕ್ಸಸ್‌ ಬ್ರ್ಯಾಂಡ್‌ ಅಡಿಯಲ್ಲಿ ಈ ಹಿಂದೆ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಆದರೆ ಆಪಲ್‌ನಂತೆ ಫೋನ್‌ ತಯಾರಿಸುವ ಕಾರ್ಯವನ್ನು ಇತರೆ ಕಂಪನಿಗಳಿಗೆ ಬಿಟ್ಟುಕೊಟ್ಟಿತ್ತು.

ಗೂಗಲ್‌ ಹೊಸ ಡಿವೈಸ್‌

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ನ ಹೊಸ ಡಿವೈಸ್‌ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ವಿನ್ಯಾಸ, ತಯಾರಿಕೆ ಮತ್ತು ಸಾಫ್ಟ್‌ವೇರ್‌ಗಳ ಮೇಲೆ ಗೂಗಲ್‌ ಸ್ವತಃ ನಿಯಂತ್ರಣ ಹೊಂದಲಿದೆ.

 ಗೂಗಲ್‌ನಿಂದ ಸಾಫ್ಟ್‌ವೇರ್‌ ನಿಯಂತ್ರಣ

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ನ ಹೊಸ ಡಿವೈಸ್‌ ಗೂಗಲ್‌ನಿಂದ ಸಾಫ್ಟ್‌ವೇರ್‌ ನಿಯಂತ್ರಿಸುವ ಫೀಚರ್‌ ಪಡೆಯಲಿದ್ದು, ಭವಿಷ್ಯದ ಸೇವೆಯನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಗೂಗಲ್‌ ಪ್ಲೇ ಆಪ್‌ ಮತ್ತು ಗೂಗಲ್ ಸರ್ಚ್‌ ಇಂಜಿನ್.

ಆಪಲ್‌ನಂತೆ ನಿಯಂತ್ರಣ

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಐಫೋನ್ ಹೇಗೆ ಆಪಲ್‌ ಪ್ರಾಡಕ್ಟ್‌ ನಿಯಂತ್ರಣ ಹೊಂದಿದೆಯೊ ಅದೇ ರೀತಿಯಲ್ಲಿ ಗೂಗಲ್‌ ಆಂಡ್ರಾಯ್ಡ್‌ ವೇದಿಕೆಯಿಂದ ನಿಯಂತ್ರಣ ಹೊಂದುವ ನಿರೀಕ್ಷೆ ಇದೆ ಎಂದು ಸಿಸಿಎಸ್‌ ಇನ್‌ಸೈಟ್‌ನ ವಿಶ್ಲೇಷಣೆಕಾರರಾದ 'ಬೆನ್‌ ವುಡ್‌' ಹೇಳಿದ್ದಾರೆ.

ಟ್ಯಾಬ್ಲೆಟ್‌ ಕಂಪ್ಯೂಟರ್‌

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ಇಂಟರ್ನೆಟ್‌ ಮತ್ತು ಸಾಫ್ಟ್‌ವೇರ್‌ಗೆ ಪ್ರಖ್ಯಾತವಾಗಿದೆ. ಆದರೆ ಗೂಗಲ್‌ ತನ್ನದೇ ಟ್ಯಾಬ್ಲೆಟ್‌ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಇತರೆ ಗ್ಯಾಜೆಟ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಹೆಜ್ಜೆಗಳನ್ನು ಇಡುತ್ತಿದೆ.

ರಿಕ್‌ ಓಸ್ಟರ್‌ಲೊಹ್‌

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್ ಈ ವರ್ಷದ ಆರಂಭದಲ್ಲಿ ಹಾರ್ಡ್‌ವೇರ್‌ ಡಿವಿಷನ್‌ ಮುಂದಾಳತ್ವ ವಹಿಸಲು ಮೊಟೊರೊಲಾದ ಮಾಜಿ ಅಧ್ಯಕ್ಷ 'ರಿಕ್‌ ಓಸ್ಟರ್‌ಲೊಹ್‌'ರನ್ನು ನೇಮಕ ಮಾಡಿಕೊಂಡಿದೆ.

ಸುಂದರ್‌ ಪಿಚೈ

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಳೆದ ತಿಂಗಳು ಸಿಇಓ 'ಸುಂದರ್‌ ಪಿಚೈ', "ಗೂಗಲ್‌ ಫೋನ್‌ ತಯಾರಿಕೆಗಾಗಿ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಹಿಂದಿನ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಅನ್ನು ಮುಂದುವರೆಸುವುದುದಾಗಿ" ಹೇಳಿದ್ದರು.

ತೈವಾನ್‌ 'ಎಚ್‌ಟಿಸಿ'

ಐಫೋನ್ ಪ್ರತಿಸ್ಪರ್ಧಿಯಾಗಿ ಗೂಗಲ್‌ನ ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ಈ ವರ್ಷ ತೈವಾನ್‌ನ 'ಎಚ್‌ಟಿಸಿ' ಕಂಪನಿ ಜೊತೆ ಹ್ಯಾಂಡ್‌ಸೆಟ್‌ ತಯಾರಿಸಲಿದ್ದು, ಇತರೆ ಫೋನ್‌ ತಯಾರಕ ಕಂಪನಿಗಳ ಜೊತೆ ಸಹ ಉತ್ಪಾದನೆಗೆ ಯೋಜನೆ ರೂಪಿಸಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಭಾರತದಲ್ಲಿನ 16 ಐಟಿ ಕಂಪನಿಗಳು

ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google to step up smartphone wars with release of own handset. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot