ಐಫೋನ್ 5ಎಸ್ ಅನ್ನು ರೂ 68 ಕ್ಕೆ ಖರೀದಿಸಿ ಬಂಪರ್ ಹೊಡೆದ ವಿದ್ಯಾರ್ಥಿ

Written By:

ವಿಶ್ವದ ಫೋನ್‌ಗಳಲ್ಲೇ ಐಫೋನ್ ಹೆಚ್ಚು ದುಬಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ. ಐಷಾರಾಮಿತ ಸಂಕೇತವಾಗಿರುವ ಐಫೋನ್ ಅನ್ನು ಜೀವನದಲ್ಲಿ ಒಮ್ಮೆಯಾದರೂ ಖರೀದಿ ಮಾಡಿ ಬಳಸಬೇಕು ಎಂಬುದು ಎಲ್ಲಾ ಮೊಬೈಲ್ ಪ್ರಿಯರ ಆಸೆಯಾಗಿರುತ್ತದೆ. ಅದಕ್ಕಾಗಿ ಎಷ್ಟೋ ಜನ ತಮ್ಮ ಕಿಡ್ನಿಯನ್ನು ಮಾರಿ ಈ ದುಬಾರಿ ಫೋನ್ ಅನ್ನು ಖರೀದಿಸಿದ್ದೂ ಇದೆ.

ಓದಿರಿ: ನಿಮ್ಮದೇ ಫೋನ್ ಸಂಖ್ಯೆಗೆ ಜಿಯೋ ಕನೆಕ್ಷನ್ ಪಡೆದುಕೊಳ್ಳುವುದು ಹೇಗೆ?

ಬಳಕೆದಾರರು ಐಫೋನ್ ಮೇಲೆ ಇಷ್ಟೊಂದು ಹುಚ್ಚುತನವನ್ನು ಇಟ್ಟುಕೊಂಡಿದ್ದರೆ ಇನ್ನು ರೀಟೈಲ್ ತಾಣಗಳು ಇನ್ನಷ್ಟು ಇವರುಗಳನ್ನು ಹುಚ್ಚರನ್ನಾಗಿಸುವ ಕಾರ್ಯವನ್ನು ಕೂಡ ಮಾಡುತ್ತಿವೆ. ಸ್ನ್ಯಾಪ್‌ಡೀಲ್ ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಐಫೋನ್ 5ಎಸ್ ಮೇಲೆ 99.7% ದಷ್ಟು ವಿನಾಯಿತಿ ಆಫರ್ ಅನ್ನು ನೀಡಿತ್ತು ಮತ್ತು ಇದನ್ನು ಕಂಡು ವಿದ್ಯಾರ್ಥಿಯೊಬ್ಬ ಅದಕ್ಕಾಗಿ ಬೇಡಿಕೆ ಸಲ್ಲಿಸಿದ್ದು ನ್ಯಾಯಾಲಯದ ಮೊರೆ ಹೋಗಿ ಕೊನೆಗೂ ಸ್ನ್ಯಾಪ್‌ಡೀಲ್ ಐಫೋನ್ ಅನ್ನು ಆ ಹುಡುಗನಿಗೆ ರೂ 68 ಕ್ಕೆ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಸ್ತುತ ಬೆಲೆ ರೂ 28,999

ಪ್ರಸ್ತುತ ಬೆಲೆ ರೂ 28,999

ಐಫೋನ್ 5ಎಸ್ ಪ್ರಸ್ತುತ ಬೆಲೆ ರೂ 28,999 ಆಗಿದೆ. ಅದೂ ಸ್ನ್ಯಾಪ್‌ಡೀಲ್‌ನಲ್ಲಿ ಈ ಬೆಲೆಯಲ್ಲೇ ಐಫೋನ್ ಲಭಿಸುತ್ತಿದೆ. ಕಾಲೇಜು ವಿದ್ಯಾರ್ಥಿಯೊಬ್ಬ ತಾಣದಲ್ಲಿ ಬಂದಂತಹ ಡೀಲ್ ಅನ್ನು ನೋಡಿ ಈಗ ದುಬಾರಿ 5 ಎಸ್ ಅನ್ನು ರೂ 68 ಕ್ಕೆ ಖರೀದಿಸಿ ಹರ್ಷದಿಂದ ಬೀಗುತ್ತಿದ್ದಾನೆ.

99.7% ಆಫರ್

99.7% ಆಫರ್

ಪಂಜಾಬ್ ಯೂನಿವರ್ಸಿಟಿಯ ಬಿ ಟೆಕ್ ವಿದ್ಯಾರ್ಥಿ ನಿಕಿಲ್ ಬನ್ಸಾಲ್ ತಾಣದಲ್ಲಿ ಐಫೋನ್‌ಗಾಗಿ ವಿನಾಯಿತಿ 99.7% ಆಫರ್ ಅನ್ನು ಕಂಡಿದ್ದಾನೆ ಮತ್ತು ತಡಮಾಡದೇ ಆತ ಅದನ್ನು ಖರೀದಿಸಿದ್ದಾನೆ.

ತಾಂತ್ರಿಕ ದೋಷ

ತಾಂತ್ರಿಕ ದೋಷ

ಫೆಬ್ರವರಿ 12 ರಂದು ಐಫೋನ್ 5ಎಸ್ ಅನ್ನು ಆತ ರೂ 68 ಕ್ಕೆ ಆರ್ಡರ್ ಮಾಡಿದ್ದಾನೆ. ನಂತರ ಐಫೋನ್ ಬರುತ್ತದೆ ಎಂಬುದಾಗಿ ಕಾದಿದ್ದಾನೆ. ಐಫೋನ್ ಬಂದೇ ಇಲ್ಲ, ಏಕೆಂದರೆ ಸ್ನ್ಯಾಪ್‌ಡೀಲ್ ತಾಂತ್ರಿಕ ದೋಷದಿಂದಾಗಿ ಇದು ತಪ್ಪಾಗಿ ಬಂದಿರುವಂತಹದ್ದು ಎಂಬುದಾಗಿ ಕಾಗೆ ಹಾರಿಸಿತ್ತು.

ಗ್ರಾಹಕ ನ್ಯಾಯಾಲಯದಲ್ಲಿ ದೂರು

ಗ್ರಾಹಕ ನ್ಯಾಯಾಲಯದಲ್ಲಿ ದೂರು

ಈತ ಪಂಜಾಬ್‌ನ ಸಂಗ್ನೂರ್ ಜಿಲ್ಲೆಯಲ್ಲಿರುವ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ, ಸ್ನ್ಯಾಪ್‌ಡೀಲ್ ಕೊಡುಗೆಯನ್ನು ನನಗೆ ನೀಡುವುದಕ್ಕೆ ತಿರಸ್ಕರಿಸುತ್ತಿದೆ ಎಂಬುದಾಗಿ ವಿದ್ಯಾರ್ಥಿ ಆಪಾದಿಸಿದ್ದಾನೆ.

ರೂ 2000 ದಂಡ

ರೂ 2000 ದಂಡ

ಈ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ ಸ್ನ್ಯಾಪ್‌ಡೀಲ್ ಐಫೋನ್ 5ಎಸ್ ಅನ್ನು ರೂ 68 ಕ್ಕೆ ನೀಡಿದ್ದು ಮಾತ್ರವಲ್ಲದೆ, ರೂ 2000 ದಂಡವನ್ನು ಕಟ್ಟಿದೆ.

ಮತ್ತೊಮ್ಮೆ ಕೇಸು

ಮತ್ತೊಮ್ಮೆ ಕೇಸು

ನ್ಯಾಯಾಲಯದಲ್ಲಿ ಮತ್ತೊಮ್ಮೆ ಕೇಸು ದಾಖಲಿಸಿದ ಸ್ನ್ಯಾಪ್‌ಡೀಲ್ ಕೇಸ್ ಅನ್ನು ಮುಚ್ಚಲು ಪುನಃ ರೂ 10,000 ವನ್ನು ಕಟ್ಟಿದೆ. ಇದರಿಂದ ರೀಟೈಲ್ ತಾಣಗಳಿಗೆ ಉತ್ತಮ ಗ್ರಾಹಕ ಪಾಠ ದೊರೆತಂತೆ ಆಗಿದೆ. ಗ್ರಾಹಕರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಇ ತಾಣಗಳಿಗೆ ಇದೊಂದು ಮರೆಯಲಾಗದ ಘಟನೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The iPhone 5S currently retails for Rs. 28,999 Rupees on Snapdeal. A college kid got it for Rs 68. No, there're no 'lifehacks' or cashbacks involved - it's just a customer who spotted a deal, one that even Snapdeal didn't intend..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot