ಗೂಗಲ್‌ ಕ್ರೋಮ್‌ ಮೂಲಕ ಅಗ್ಗದ ದರದಲ್ಲಿ ಪ್ರೊಡಕ್ಟ್‌ ಖರೀದಿಸಲು ಈ ಮಾರ್ಗ ಅನುಸರಿಸಿ!

|

ಅಮೆಜಾನ್‌, ಫ್ಲಿಕ್‌ಕಾರ್ಟ್‌ ಸೇರಿದಂತೆ ಇನ್ನಿತರೆ ಪ್ರಮುಖ ಇ-ಕಾಮರ್ಸ್‌ ತಾಣಗಳು ಹೆಚ್ಚಿನ ರಿಯಾಯಿತಿ ನೀಡುವ ಮೂಲಕ ಪ್ರೊಡಕ್ಟ್‌ಗಳನ್ನು ಮಾರಾಟ ಮಾಡುತ್ತವೆ. ಇದರ ಹೊರತಾಗಿ ಗ್ರಾಹಕರು ಇನ್ನೂ ಹೆಚ್ಚಿನ ಡಿಸ್ಕೌಂಟ್‌ಗೆ ಕಾಯುವುದುಂಟು. ಈಗಾಗಲೇ ಗೂಗಲ್‌ ಕ್ರೋಮ್‌ನಲ್ಲಿ ಶಾಪಿಂಗ್‌ ಎಂಬ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಕ್ಷಣ ಮಾತ್ರದಲ್ಲಿ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಯಾವ ವಸ್ತುವಿಗೆ ಎಷ್ಟು ಬೆಲೆ ಎಂಬುದನ್ನು ಕಂಡುಕೊಳ್ಳಬಹುದು. ಇದರ ಹೊರತಾಗಿ ಈಗ ಹೊಸ ಸೌಲಭ್ಯವೊಂದು ಗ್ರಾಹಕರಿಗೆ ಲಭ್ಯವಿದ್ದು, ಆನ್‌ಲೈನ್‌ ಶಾಪಿಂಗ್‌ ಮಾಡುವವರಿಗೆ ಅತ್ಯಂತ ಅನುಕೂಲ ಆಗಲಿದೆ.

ಆನ್‌ಲೈನ್‌

ಹೌದು, ಆನ್‌ಲೈನ್‌ ಶಾಪಿಂಗ್‌ ಮಾಡುವವರು ಗೂಗಲ್‌ ಕ್ರೋಮ್‌ನ ಶಾಪಿಂಗ್‌ ಫೀಚರ್ಸ್‌ ಜೊತೆಗೆ ಈ ಸೌಲಭ್ಯ ಪಡೆದುಕೊಂಡರೆ ಆಫರ್‌ ಬೆಲೆಗಿಂತ ಹೆಚ್ಚಿನ ಇನ್ನೂ ಕಡಿಮೆ ಬೆಲೆಗೆ ಪ್ರೊಡಕ್ಟ್‌ ಅನ್ನು ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಆಫರ್‌ ಬೆಲೆ ಹೊರತುಪಡಿಸಿ ಕಡಿಮೆ ಬೆಲೆಗೆ ಗೂಗಲ್‌ ಕ್ರೋಮ್‌ನಲ್ಲಿ ಹೇಗೆ ಖರೀದಿ ಮಾಡುವುದು?, ಇದಕ್ಕೆ ಗೂಗಲ್‌ ಕ್ರೋಮ್‌ನಲ್ಲಿ ನೀವು ಮಾಡಬೇಕಿರುವುದು ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಕ್ರೋಮ್‌ ಮೂಲಕ ಗ್ಯಾಜೆಟ್‌ ಅನ್ನು ಕಡಿಮೆ ಬೆಲೆಗೆ ಖರೀದಿಸುವುದು ಹೇಗೆ?

ಕ್ರೋಮ್‌ ಮೂಲಕ ಗ್ಯಾಜೆಟ್‌ ಅನ್ನು ಕಡಿಮೆ ಬೆಲೆಗೆ ಖರೀದಿಸುವುದು ಹೇಗೆ?

ಗೂಗಲ್‌ ಕ್ರೋಮ್‌ ಇದೀಗ ನಿಮ್ಮ ಮೆಚ್ಚಿನ ಉತ್ಪನ್ನದ ಬೆಲೆಗಳನ್ನು ಟ್ರ್ಯಾಕ್ ಮಾಡಲು ಅನುಮತಿ ನೀಡಿದೆ. ಈ ಮೂಲಕ ಆ ಪ್ರೊಡಕ್ಟ್‌ನ ಬೆಲೆ ಯಾವಾಗ ಕಡಿಮೆಯಾಗುತ್ತದೆಯೋ ಆ ವೇಳೆ ನೀವು ಖರೀದಿ ಮಾಡಬಹುದು. ಇದಕ್ಕೆ ನೀವು ಮಾಡಬೇಕಿರುವುದು ಏನೆಂದರೆ ವಿವಿಧ ವೆಬ್‌ಸೈಟ್‌ಗಳಲ್ಲಿನ ಬೆಲೆಗಳನ್ನು ಹೋಲಿಸಿ, ಅವುಗಳಲ್ಲಿನ ಕೊಡುಗೆಗಳನ್ನು ಪರಿಶೀಲಿಸಿ ನಂತರ ನಿಮ್ಮ ಆಯ್ಕೆಯ ಉತ್ಪನ್ನವನ್ನು ಕಡಿಮೆ ಬೆಲೆಗೆ ಯಾವ ಪ್ಲಾಟ್‌ಫಾರ್ಮ್ ಮಾರಾಟ ಮಾಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪ್ರೊಡಕ್ಟ್‌

ನೀವು ಖರೀದಿಸಲು ಬಯಸುವ ಪ್ರೊಡಕ್ಟ್‌ ಕೆಲವೊಮ್ಮೆ ಆಯ್ದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದು ನಿಮ್ಮ ಗಮನಕ್ಕಿರಲಿ. ಈ ರೀತಿ ಸಂದರ್ಭ ಎದುರಾದಾಗ ಪದೇ ಪದೇ ಈ ಪ್ರೊಡಕ್ಟ್‌ನ ಟ್ಯಾಬ್‌ ಓಪನ್‌ ಮಾಡಿಕೊಂಡು ಬೆಲೆ ಎಷ್ಟಿದೆ ಎಂಬುದನ್ನು ನೋಡುವುದು ತ್ರಾಸದ ಕೆಲಸ. ಇದಕ್ಕಾಗಿ ನೀವು ಗೂಗಲ್‌ ಕ್ರೋಮ್‌ನ ಈ ಹೊಸ ಸೌಲಭ್ಯ ಆಶ್ರಯಿಸಬಹುದಾಗಿದೆ.

ಆವೃತ್ತಿ

ಇನ್ನು ಇತ್ತೀಚಿನ ಆವೃತ್ತಿ 108.0.5359.94 ನಲ್ಲಿ ಈ ಫೀಚರ್ಸ್‌ ನೀಡಲಾಗಿದ್ದು, ಕ್ರೋಮ್‌ನಲ್ಲಿ ನಿಮ್ಮ ನೆಚ್ಚಿನ ಪ್ರೊಡಕ್ಟ್‌ ಬೆಲೆಯನ್ನು ಟ್ರ್ಯಾಕ್ ಮಾಡಲು ಸಹಕಾರ ನೀಡಲಿದೆ. ಈ ಟ್ರ್ಯಾಕ್‌ ವ್ಯವಸ್ಥೆಯಿಂದಾಗಿ ಪ್ರೊಡಕ್ಟ್‌ನ ಬೆಲೆ ಯಾವಾಗ ಕಡಿಮೆಯಾಗುತ್ತದೆಯೋ ಆವಾಗ ನಿಮಗೆ ಮಾಹಿತಿ ಇಮೇಲ್‌ ಮೂಲಕ ಬರುತ್ತದೆ. ಇದರಿಂದ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇದರಿಂದ ನಿಮ್ಮ ಹಣ ಉಳಿತಾಯ ಆಗುವ ಜೊತೆಗೆ ಆಗಾಗ್ಗೆ ಕ್ರೋಮ್‌ ಓಪನ್‌ ಮಾಡಿ ನೋಡುವ ಸಮಯವೂ ತಗ್ಗುತ್ತದೆ.

ಬೆಲೆ ಟ್ರ್ಯಾಕರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಬೆಲೆ ಟ್ರ್ಯಾಕರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಈ ಸೌಲಭ್ಯವನ್ನು ಪಡೆದುಕೊಳ್ಳಲು ಪಿಸಿಯಲ್ಲಿನ ಗೂಗಲ್‌ ಕ್ರೋಮ್‌ನಲ್ಲಿ ನೀವು ಕೆಲವು ಬದಲಾವಣೆ ಮಾಡಬೇಕಿದೆ. ಅದೇನೆಂದರೆ ಮೊದಲು ಇತ್ತೀಚಿನ ಆವೃತ್ತಿಯಲ್ಲಿ ನಿಮ್ಮ ಕ್ರೋಮ್‌ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಹೊಸ ಆವೃತ್ತಿಗೆ ಕ್ರೋಮ್‌ ಅನ್ನು ಅಪ್‌ಡೇಟ್‌ ಮಾಡಿ. ಇದಾದ ಬಳಿಕ ಬ್ರೌಸರ್ ರಿಸ್ಟಾರ್ಟ್‌ ಆಗುತ್ತದೆ.

ಕಾಮರ್ಸ್‌

ನಂತರದಲ್ಲಿ ನೀವು ಯಾವ ಇ-ಕಾಮರ್ಸ್‌ ತಾಣದಲ್ಲಿ ಪ್ರೊಡಕ್ಟ್‌ಅನ್ನು ಖರೀದಿ ಮಾಡಬೇಕು ಎಂದುಕೊಂಡಿರುವಿರೊ ಆ ಪ್ರೊಡಕ್ಟ್‌ ಅನ್ನು ಸರ್ಚ್‌ ಮಾಡಿ. ಅಲ್ಲಿ ಅಡ್ರೆಸ್‌ ಲಿಸ್ಟ್‌ ಪಕ್ಕದಲ್ಲಿರುವ 'ಟ್ರ್ಯಾಕ್ ಪ್ರೈಸ್‌' ಐಕಾನ್ ಮೇಲೆ ಕ್ಲಿಕ್ ಮಾಡಿ. ಕೆಳಗಿನ ಬಾಕ್ಸ್‌ನಲ್ಲಿ 'ಡನ್‌' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಕ್ರೋಮ್ ಪ್ರೊಡಕ್ಟ್‌

ಇದಾದ ನಂತರ ಕ್ರೋಮ್ ಪ್ರೊಡಕ್ಟ್‌ ಅನ್ನು ನಿರಂತರವಾಗಿ ಟ್ರ್ಯಾಕ್ ಮಾಡಲು ಪ್ರಾರಂಭಿಸುತ್ತದೆ ಹಾಗೆಯೇ ಅದರ ಬೆಲೆಯಲ್ಲಿ ಇಳಿಕೆ ಕಂಡು ಬಂದಾಗ ನಿಮಗೆ ಮಾಹಿತಿ ನೀಡುತ್ತದೆ. ಇದೆಲ್ಲಕ್ಕೂ ಮೊದಲು ನಿಮ್ಮ ಬ್ರೌಸರ್‌ನಲ್ಲಿ ನಿಮ್ಮ ಇಮೇಲ್‌ ಮೂಲಕ ಲಾಗಿನ್ ಆಗಿರಬೇಕು. ಈ ಮಾಹಿತಿ ಬೇಡ ಎಂದಾದರೆ ಅನ್‌ಟ್ರ್ಯಾಕ್‌ ಆಯ್ಕೆ ಸಹ ನೀಡಲಾಗಿದ್ದು, ಇದನ್ನು ಬಳಕೆ ಮಾಡಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಈ ಸೌಲಭ್ಯ ಪಡೆದುಕೊಳ್ಳುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಈ ಸೌಲಭ್ಯ ಪಡೆದುಕೊಳ್ಳುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಡಕ್ಟ್‌ ಬೆಲೆಗಳನ್ನು ನೀವು ಹೇಗೆ ಟ್ರ್ಯಾಕ್ ಎನ್ನುವುದಕ್ಕೆ ಈ ಮಾರ್ಗ ಅನುಸರಿಸಿ. ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ರೋಮ್‌ ಆಪ್ ಓಪನ್‌ ಮಾಡಿ. ನಂತರ ಡಿಸ್‌ಪ್ಲೇ ನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್‌ ಮಾಡಿ.

ಸೆಟ್ಟಿಂಗ್‌

ಇದಾದ ಬಳಿಕ ಸೆಟ್ಟಿಂಗ್‌ ಆಯ್ಕೆಗೆ ಹೋಗಿ ಅಲ್ಲಿ ಗೂಗಲ್‌ ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರಲ್ಲಿ ಟ್ರ್ಯಾಕ್‌ ಪ್ರೈಸ್‌ ಆನ್‌ ಟ್ಯಾಬ್ಸ್ ಅನ್ನು ಆನ್‌ ಮಾಡಿ. ಇದಾದ ನಂತರ ಯಾವ ಇ-ಕಾಮರ್ಸ್‌ ತಾಣದಲ್ಲಿ ಯಾವ ಪ್ರೊಡಕ್ಟ್‌ ಅನ್ನು ಖರೀದಿ ಮಾಡಬೇಕು ಎಂದುಕೊಂಡಿರುವಿರೋ ಅದರ ಮೇಲೆ ಟ್ಯಾಪ್‌ ಮಾಡಿ ನಂತರ ಡಿಸ್‌ಪ್ಲೇ ಬಲ ಮೂಲೆಯಲ್ಲಿ ಕಾಣಿಸಿಕೊಳ್ಳುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್‌ ಮಾಡಿ. ಈ ಮೂಲಕ ನಿಮ್ಮ ಇಷ್ಟದ ಪ್ರೊಡಕ್ಟ್‌ನ ಬೆಲೆ ಕಡಿಮೆಯಾದಾಗ ನಿಮಗೆ ಇಮೇಲ್‌ ಸಂದೇಶ ಬರುತ್ತದೆ.

Best Mobiles in India

English summary
How to get lowest price on your favorite product using Google Chrome ?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X