ಐಫೋನ್ ಅನ್ನೇ ಹೋಲುವ ಐಬಾಲ್ ಕೋಬಾಲ್ಟ್ ಊಂಪ್ 4.7 ಡಿ ಲಾಂಚ್

Written By:

ಭಾರತೀಯ ತಂತ್ರಜ್ಞಾನ ತಯಾರಕರಾದ ಐಬಾಲ್ ಐಫೋನ್ ಹೋಲುವ ಡಿವೈಸ್ ಕೋಬಾಲ್ಟ್ ಊಂಪ್ 4.7 ಡಿ ಸ್ಮಾರ್ಟ್‌ಫೋನ್ ಕಂಪೆನಿಯ ಮುಖ್ಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಇದರ ಬೆಲೆ ಮತ್ತು ಲಭ್ಯತೆಯ ಕುರಿತು ಮಾಹಿತಿ ಇನ್ನೂ ದೊರಕಿಲ್ಲ.

ಐಫೋನ್ ಅನ್ನೇ ಹೋಲುವ ಐಬಾಲ್ ಕೋಬಾಲ್ಟ್ ಊಂಪ್ 4.7 ಡಿ ಲಾಂಚ್

ಇನ್ನು ಸ್ಮಾರ್ಟ್‌ಫೋನ್ ವಿನ್ಯಾಸಕ್ಕೆ ಬಂದಾಗ ಆಪಲ್ ಐಫೋನ್ 6 ನಂತೆಯೇ ಇದು ಹೋಲುತ್ತಿದೆ. ಈಗಾಗಲೇ ಹೆಚ್ಚಿನ ಚೀನಾ ಫೋನ್ ತಯಾರಕರು ಐಫೋನ್ ಹೋಲುವ ಡಿವೈಸ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದಾರೆ.

ಓದಿರಿ: ಫೋನ್‌ನಲ್ಲಿ ಈ ಲಾಕ್‌ಗಳಿಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!

ಐಬಾಲ್ ಕೋಬಾಲ್ಟ್ ಊಂಪ್ 4.7ಡಿ, 4.7 ಇಂಚಿನ ಎಚ್‌ಡಿ ಐಪಿಎಸ್ 720 ಪಿ ಎಲ್‌ಸಿಡಿ ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ 1.3GHZ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ನಮಗೆ ಕಾಣಬಹುದಾಗಿದ್ದು 1ಜಿಬಿ RAM ಅನ್ನು ಡಿವೈಸ್ ಹೊಂದಿದೆ.

ಐಫೋನ್ ಅನ್ನೇ ಹೋಲುವ ಐಬಾಲ್ ಕೋಬಾಲ್ಟ್ ಊಂಪ್ 4.7 ಡಿ ಲಾಂಚ್

ಇನ್ನು ಫೋನ್‌ನ ಸಂಗ್ರಹಣಾ ಸಾಮರ್ಥ್ಯವನ್ನು ನೋಡುವುದಾದರೆ, ಇದು 8 ಜಿಬಿ ಇನ್‌ಬಿಲ್ಟ್ ಸಂಗ್ರಹಣೆಯನ್ನು ಪಡೆದುಕೊಂಡಿದೆ ಮತ್ತು ಎಸ್‌ಡಿ ಕಾರ್ಡ್ ಬಳಸಿ ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ.

ಓದಿರಿ: ದುಬಾರಿ ಆಪಲ್ ವಾಚ್‌ಗಿಂತ ಆಂಡ್ರಾಯ್ಡ್ ಬೆಸ್ಟ್ ಹೇಗೆ?

ಐಫೋನ್ ಅನ್ನೇ ಹೋಲುವ ಐಬಾಲ್ ಕೋಬಾಲ್ಟ್ ಊಂಪ್ 4.7 ಡಿ ಲಾಂಚ್

ಕೋಬಾಲ್ಟ್ ಊಂಪ್ 4.7ಡಿ, 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಫೋನ್‌ನ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ನಮಗೆ ಕಾಣಬಹುದಾಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಇದನ್ನು ಲಾಲಿಪಪ್ 5.0 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

English summary
Indian tech manufacturer, iBall's iPhone look alike device Cobalt Oomph 4.7D smartphone has now been listed on the company's main website, but there's still no word on price and availability just yet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot