4G ಕನೆಕ್ಟವಿಟಿಯಲ್ಲಿ ವಿಶ್ವದಲ್ಲೇ ಭಾರತಕ್ಕೆ 15ನೇ ಸ್ಥಾನ: ಕಾರಣ ಯಾರು ಅಂದ್ರಾ..?

ಸದ್ಯ ಇಡೀ ವಿಶ್ವದಲ್ಲಿ 75 ದೇಶಗಳಲ್ಲಿ 4G LTE ಸೇವೆಯೂ ಲಭ್ಯವಿದ್ದು, ಇದರಲ್ಲಿ ಭಾರತಕ್ಕೆ 15ನೇ ಸ್ಥಾನವೂ ದೊರೆತಿದೆ ಎನ್ನಲಾಗಿದೆ.

|

ಭಾರತ ಜಾಗತೀಕ 4G ಇಂಟೆರ್ನೆಟ್ ಸೇವೆಯಲ್ಲಿ ತನ್ನ ಛಾಪು ಮೂಡಿಸಿದೆ. ಜಾಗತೀಕ 4G ಕನೆಕ್ಟಿವಿಟಿ ರಾಕಿಂಗ್ ನಲ್ಲಿ ಭಾರತಕ್ಕೆ 15ನೇ ಸ್ಥಾನ ಲಭ್ಯವಾಗಿದೆ, ಸದ್ಯ ಇಡೀ ವಿಶ್ವದಲ್ಲಿ 75 ದೇಶಗಳಲ್ಲಿ 4G LTE ಸೇವೆಯೂ ಲಭ್ಯವಿದ್ದು, ಇದರಲ್ಲಿ ಭಾರತಕ್ಕೆ 15ನೇ ಸ್ಥಾನವೂ ದೊರೆತಿದೆ ಎನ್ನಲಾಗಿದೆ.

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

4G ಕನೆಕ್ಟವಿಟಿಯಲ್ಲಿ ವಿಶ್ವದಲ್ಲೇ ಭಾರತಕ್ಕೆ 15ನೇ ಸ್ಥಾನ: ಕಾರಣ ಯಾರು ಅಂದ್ರಾ..?

ಭಾರತಕ್ಕೆ ಈ ದೊಡ್ಡ ಮಟ್ಟದ ಕೀರಿಟವು ದೊರೆಯಲು ರಿಲಯನ್ಸ್ ಮಾಲೀಕತ್ವದ ಜಿಯೋ ಕೊಡುಗೆಯೂ ದೊಡ್ಡ ಮಟ್ಟದಲ್ಲಿದೆ ಇದೇ ಎಂದರೆ ತಪ್ಪಾಗುವುದಿಲ್ಲ. ಜಿಯೋ ಆರಂಭಕ್ಕೂ ಮುನ್ನವೇ ದೇಶದಲ್ಲಿ 4G ಸೇವೆಯನ್ನು ನೀಡುತ್ತಿದ್ದರೂ ಸಹ ಇಷ್ಟು ಪ್ರಮಾಣದ ಕೊಡುಗೆಯನ್ನು ನೀಡಿರಲಿಲ್ಲ. ಜಿಯೋ ನಂತರದಲ್ಲಿ 4G ಸೇವೆಯಲ್ಲಿ ಭಾರೀ ಬದಲಾವಣೆಯೂ ಸಾಧ್ಯವಾಗಿದೆ.

ಓದಿರಿ: ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಏರ್ಟೆಲ್..!!!

15ನೇ ಸ್ಥಾನ ಭಾರತಕ್ಕೆ

15ನೇ ಸ್ಥಾನ ಭಾರತಕ್ಕೆ

ಜಿಯೋ ಸೇವೆಯಿಂದಲೇ ಭಾರತಕ್ಕೆ ಜಾಗತೀಕ 4G ಕನೆಕ್ಟಿವಿಟಿ ರಾಕಿಂಗ್ ನಲ್ಲಿ 15ನೇ ಸ್ಥಾನ ದೊರೆತಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲಿಯೂ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಗತಿಯನ್ನು ಸಾಧಿಸಲು ಜಿಯೋ ಕೊಡುಗೆಯೂ ಹೆಚ್ಚಾಗಿಯೇ ಇದೆ.

LTE ಡೌನ್‌ಲೋಡ್

LTE ಡೌನ್‌ಲೋಡ್

ಭಾರತದಲ್ಲಿ ಅವರೇಜ್ LTE ಡೌನ್‌ಲೋಡ್ ವೇಗವೂ 5.1 Mbps ಇದ್ದು, ಇದು ಕೇವಲ ಆರು ತಿಂಗಳ ವೇಗದಲ್ಲಿ ಇಷ್ಟು ವೇಗದ ಇಂಟರ್ನೆಟ್ ಸೇವೆಯನ್ನು ದೇಶದಲ್ಲಿ ನೀಡಲಾಗಿದೆ. ಇದು ಭಾರತಕ್ಕೆ 15ನೇ ಸ್ಥಾನವನ್ನು ದೊರಕಿಸಿಕೊಟ್ಟಿದೆ.

ವಿಶ್ವದಲ್ಲೇ ಅತೀ ವೇಗದ 4G ಸೇವೆ

ವಿಶ್ವದಲ್ಲೇ ಅತೀ ವೇಗದ 4G ಸೇವೆ

ಇದೇ ಮಾದರಿಯಲ್ಲಿ ದಕ್ಷಿಣ ಕೋರಿಯಾ ವಿಶ್ವದಲ್ಲೇ ಅತೀ ವೇಗದ 4G ಸೇವೆಯನ್ನು ನೀಡುತ್ತಿದ್ದು, ಎರಡನೇ ಸ್ಥಾನದಲ್ಲಿ ನೆದರ್ಲಂಡ್ಸ್ ದೇಶವಿದೆ. ಅದೇ ಮಾದರಿಯಲ್ಲಿ ನಾರ್ವೆ ಮತ್ತು ಸಿಂಗಾಪುರ ದೇಶಗಳು ನಂತರದ ಸ್ಥಾನಗಳಲ್ಲಿವೆ.

75 ದೇಶಗಳಲ್ಲಿ 4G ಸೇವೆ:

75 ದೇಶಗಳಲ್ಲಿ 4G ಸೇವೆ:

ಒಟ್ಟು 75 ದೇಶಗಳಲ್ಲಿ ಒಟ್ಟು 558,260 ಸ್ಮಾರ್ಟ್‌ಫೋನ್‌ಗಳಲ್ಲಿ 4G ಸೇವೆಯನ್ನು ಟೆಸ್ಟ್ ಮಾಡಲಾಗಿದೆ. ಓಪನ್ ಸಿಗ್ನಲ್ ಎನ್ನುವ ಸಂಸ್ಥೆಯೂ ಈ ರಾಂಕ್ ಅನ್ನು ನೀಡಿದೆ ಎನ್ನಲಾಗಿದೆ.

Best Mobiles in India

Read more about:
English summary
India has made a big leap in terms of global 4G availability ranking with the help of 4G entrant Reliance Jio's 4G services. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X