ಸ್ಮಾರ್ಟ್‌ಫೋನ್‌ ಖರೀದಿಸುವಾಗ ಭಾರತೀಯರು ಈ ಕೆಲಸ ಮಾಡದೇ ಇರರು; ವರದಿ

|

ಭಾರತೀಯರು ಏನೇ ಖರೀದಿ ಮಾಡಿದರೂ ಭಿನ್ನವಾಗಿರಲಿದೆ. ಹಾಗೆಯೇ ಖರೀದಿ ಮಾಡಿದ ವಸ್ತುಗಳ ಸಹ ವಿಶೇಷವಾಗಿರುತ್ತವೆ. ಅದರಲ್ಲೂ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಭಾರತೀಯರು ಮಾತ್ರ ಈ ಅಭ್ಯಾಸವನ್ನು ಬಿಟ್ಟುಕೊಟ್ಟಿಲ್ಲ. ಈ ಒಂದು ಅಭ್ಯಾಸ ಈ ವರ್ಷವೂ ಸಹ ಇರಲಿದ್ದು, ಇನ್ನೂ ಸಹ ಮುಂದುವರೆಯಲಿದೆಯಂತೆ. ಹೀಗಾಗಿ ಪ್ರಮುಖ ಬ್ರ್ಯಾಂಡ್‌ಗಳು ಭಾರತೀಯರ ಮನಸ್ಥಿತಿ ಅರ್ಥ ಮಾಡಿಕೊಂಡೇ ತಮ್ಮ ಪ್ರೊಡಕ್ಟ್‌ಗಳನ್ನು ಮಾರಲು ಮುಂದಾಗಿದ್ದಾರೆ.

ಸ್ಮಾರ್ಟ್‌

ಹೌದು, ಸ್ಮಾರ್ಟ್‌ ಗ್ಯಾಜೆಟ್‌ ಬಳಕೆ ಭಾರತದಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡವರು ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ, ಸ್ಟೋರೇಜ್‌ ಸಾಮರ್ಥ್ಯ ಹಾಗೂ ಕ್ಯಾಮೆರಾ, ಬೆಲೆಯ ಬಗ್ಗೆ ಪ್ರಮುಖವಾಗಿ ಗಮನಹರಿಸುತ್ತಾರೆ. ಇದು ಭಾರತೀಯರಲ್ಲಿ ಸಾಮಾನ್ಯವಾದ ಸಂಗತಿ. ಆದರೆ ವರದಿಯೊಂದರ ಪ್ರಕಾರ ಭಾರತೀಯರು ಯಾವುದೇ ಫೋನ್‌ ಖರೀದಿ ಮಾಡಬೇಕು ಎಂದುಕೊಂಡರೂ ಸಹ ಈ ಕೆಲಸವನ್ನು ತಪ್ಪದೇ ಮಾಡುತ್ತಾರೆ. ಹಾಗಿದ್ರೆ ಬಹಿರಂಗವಾದ ವರದಿಯಲ್ಲಿ ಏನಿದೆ?, ಭಾರತೀಯರು ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ಮಾಡುವ ಕೆಲಸವೇನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಮಾರ್ಟ್‌ಗ್ಯಾಜೆಟ್‌

ಸಾಮಾನ್ಯವಾಗಿ ಸ್ಮಾರ್ಟ್‌ಗ್ಯಾಜೆಟ್‌ಗಳು ಹೆಚ್ಚಿನ ರಿಯಾಯಿತಿಯೊಂದಿಗೆ ರಿಟೇಲರ್‌ ಸ್ಟೋರ್‌ಗಿಂತ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿಯೇ ಮಾರಾಟವಾಗುತ್ತವೆ. ಅದಾಗ್ಯೂ ಬಹುಪಾಲು ಮಂದಿ ರಿಟೇಲರ್‌ ಸ್ಟೋರ್‌ಗೆ ಭೇಟಿ ನೀಡುವುದು ಹೆಚ್ಚಾಗಿದೆ. ಇದಕ್ಕೆ ಕಾರಣ ಕಂಡುಕೊಂಡಿರುವ ಸಂಶೋದಕರು ಈ ಸಂಬಂಧ ವರದಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ಇದರ ಪ್ರಕಾರ ಭಾರತೀಯರು ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ ಕೆಲಸ ಮಾಡುತ್ತಾರೆ.

ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಭಾರತೀಯರು ಮಾಡುವುದೇನು?

ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಭಾರತೀಯರು ಮಾಡುವುದೇನು?

ಭಾರತೀಯರು ಸ್ಮಾರ್ಟ್‌ಫೋನ್ ಖರೀದಿಸುವ ಮೊದಲು ಸ್ಮಾರ್ಟ್‌ಫೋನ್‌ಗಳನ್ನು ಸ್ಪರ್ಶಿಸಲು ಮತ್ತು ಅದರ ಅನುಭವ ಪಡೆಯಲು ಸಾಕಷ್ಟು ಕಾತುರರಾಗಿರುತ್ತಾರೆ ಎಂದು ತಿಳಿದುಬಂದಿದೆ. ಹೀಗಾಗಿ ಆನ್‌ಲೈನ್ ಶಾಪಿಂಗ್‌ ಹೊರತಾಗಿಯೂ, ಭಾರತೀಯ ಗ್ರಾಹಕರು ಸ್ಮಾರ್ಟ್‌ಫೋನ್ ಖರೀದಿಗಳಿಗಾಗಿ ರಿಟೇಲರ್‌ ಸ್ಟೋರ್‌ಗಳಿಗೆ ಹೋಗಲು ಮುಂದಾಗುತ್ತಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್ (CMR) ಈ ಸಂಬಂಧ ವರದಿ ನೀಡಿದೆ.

ಸಿಎಮ್‌ಆರ್‌ನ

ಸಿಎಮ್‌ಆರ್‌ನ ಉದ್ಯಮ ಗುಪ್ತಚರ ಗುಂಪಿನ ಮುಖ್ಯಸ್ಥ ಪ್ರಭು ರಾಮ್ ಮಾಹಿತಿ ನೀಡಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳು ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರಮುಖ ಟಚ್ ಪಾಯಿಂಟ್‌ಗಳಾಗಿ ಮುಂದುವರಿಯುತ್ತದೆ. ಈ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ಸಂಶೋಧನೆ ಮಾಡಲು, ಆಫ್‌ಲೈನ್‌ನಲ್ಲಿ ಖರೀದಿಸಲು ಮುಂದಾಗುತ್ತಾರೆ ಎಂದು ತಿಳಿಸಿದ್ದಾರೆ.

2023

2023 ರ ನಂತರವೂ ಭಾರತದಲ್ಲಿ ಮೊಬೈಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಫ್‌ಲೈನ್ ಮಾರ್ಕೆಟ್‌ ಮುಂದುವರಿಯುತ್ತದೆ. ಸೆಲ್ ಔಟ್ ಸ್ಕೀಮ್‌ಗಳು, ಸಮಯೋಚಿತ ಪಾವತಿ ಮತ್ತು ವ್ಯವಹಾರದಲ್ಲಿನ ಪಾರದರ್ಶಕತೆಯನ್ನು ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ಸಂಯೋಜಿಸಲು ರಿಟೇಲರ್‌ ಪಾರ್ಟನರ್ಸ್‌ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಆಫ್‌ಲೈನ್

ಇದರಲ್ಲಿ ಗಮನಿಸುವ ವಿಷಯ ಎಂದರೆ ಆಫ್‌ಲೈನ್ ಮಾರುಕಟ್ಟೆಯ ಮೇಲೆ ಹೆಚ್ಚು ಸ್ಥಿರವಾಗಿರುವುದು ಲಾವಾ, ಯಾಕೆಂದರೆ ಇದೊಂದು ಭಾರತೀಯ ಪ್ರಮುಖ ಕಂಪೆನಿಗಳಲ್ಲಿ ಒಂದಾಗಿದ್ದು, ಭಾರತೀಯರ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಈ ಮೂಲಕ ಲಾವಾ ತನ್ನ ಪಾರದರ್ಶಕ ಪ್ರಕ್ರಿಯೆಗಳು, ಸಮಯೋಚಿತ ಪಾವತಿ ಮತ್ತು ಬೆಲೆ ಬಗೆಗಿನ ನಂಬಿಕೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಇದು ಮುಂದುವರೆದುಕೊಂಡು ಬರಲಿದೆ.

ಮೊಬೈಲ್

ಇದರೊಂದಿಗೆ ಮೊಬೈಲ್ ಫೋನ್ ರಫ್ತಿನಲ್ಲಿ ಭಾರತದ ಸಹ ಅಗ್ರ ಸ್ಥಾನ ಪಡೆದುಕೊಳ್ಳಲು ದಾಪುಗಾಲು ಇಡುತ್ತಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಮತ್ತು 2023 ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಮೀರಿ ಉತ್ಪಾದನಾ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಲಕ್ಷ

ಈ ವರ್ಷದಿಂದ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅದರಲ್ಲೂ ಆಪಲ್ ಮತ್ತು ಸ್ಯಾಮ್‌ಸಂಗ್ ಭಾರತದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದು, ಭಾರತದಿಂದ 45,000 ಕೋಟಿ ರೂ. ಮೌಲ್ಯದ ರಫ್ತು ಜರುಗಿದೆ.

Best Mobiles in India

English summary
Indians want to touch and feel smartphones before buying .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X