Just In
Don't Miss
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈ್ರಾಬಾದ್ ಎಫ್ಸಿ, Live ಸ್ಕೋರ್
- News
ಮೈಸೂರು ಅರಮನೆಯ ಕ್ಯಾಂಡಲ್ ಹೋಲ್ಡರ್ ಗಳ ಅನ್ ಲೈನ್ ಹರಾಜು
- Automobiles
ಅನಾವರಣವಾಯ್ತು ಪವರ್ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂದು 'ಇನ್‌ಫಿನಿಕ್ಸ್ ಹಾಟ್ 8' ಫೋನಿನ ಫ್ಲ್ಯಾಶ್ ಸೇಲ್!.ಬೆಲೆ ಜಸ್ಟ್ 6999ರೂ.!
ಕಡಿಮೆ ಬೆಲೆಯಲ್ಲಿ ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಲಾಂಚ್ ಆಗಿರುವ ''ಇನ್‌ಫಿನಿಕ್ಸ್ ಹಾಟ್ 8'' ಸ್ಮಾರ್ಟ್‌ಫೋನ್ ಈಗಾಗಲೇ ತನ್ನ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಇತ್ತೀಚಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಫ್ಲ್ಯಾಶ್ ಸೇಲ್ ಕಂಡಿದೆ. ಇದೀಗ ಇನ್‌ಫಿನಿಕ್ಸ್ ಹಾಟ್ 8'' ಫೋನಿನ ಎರಡನೇ ಫ್ಲ್ಯಾಶ್ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12ರಂದು ಶುರುವಾಗಲಿದೆ.

ಹೌದು, ಇನ್‌ಫಿನಿಕ್ಸ್ ಕಂಪನಿಯ 'ಇನ್‌ಫಿನಿಕ್ಸ್ ಹಾಟ್ 8' ಸ್ಮಾರ್ಟ್‌ಫೋನ್ ಇಂದು (ಜನವರಿ 8ರಂದು) ಸೆಕೆಂಡ್ ಫ್ಲ್ಯಾಶ್ ಸೇಲ್ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 7,999ರೂ.ಗಳು ಆಗಿದ್ದು, ಕೊಡುಗೆಯಾಗಿ 6,999ರೂ,ಗೆ ಲಭ್ಯವಾಗಲಿದೆ. 4GB RAM ಮತ್ತು 64GB ಸ್ಟೋರೇಜ್ ಮತ್ತು ಮೂರು ರಿಯರ್ ಕ್ಯಾಮೆರಾ ಬ್ಯಾಟರಿ ಲೈಫ್ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದರೇ ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ
720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು ವಾಟರ್‌ಡ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಡಿಸ್‌ಪ್ಲೇ ಬ್ರೈಟ್ನೆಸ್ 500nits ಸಾಮರ್ಥ್ಯದಲ್ಲಿದೆ. ಹಾಗೆಯೇ ಬಾಹ್ಯ ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅಂತರವು ಶೇ.90.3% ಆಗಿದ್ದು, ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ
ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ 2GHz ಗಿಗಾಹರ್ಜ್ಜ ವೇಗದಲ್ಲಿ ಹಿಲಿಯೊ ಆಕ್ಟಾಕೋರ್ P22 ಪ್ರೊಸೆಸರ್ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್ 9 ಪೈ ಸಪೋರ್ಟ್ ಇದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಮೂರು ಕ್ಯಾಮೆರಾ
ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ ಜೊತೆಗೆ 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು ಲೋ ಸೆನ್ಸಾರ್ ಹೊಂದಿದೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್ ಪಡೆದಿದ್ದು, ಎಂಟು ಸೀನ್ ಮೋಡ್, ಕ್ವಾಡ್ ಎಲ್ಇಡಿ ಫ್ಲಾಶ್ ಆಯ್ಕೆಗಳಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬಿಗ್ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, 14ಗಂಟೆ ವಿಡಿಯೊ ಪ್ಲೇ ಬ್ಯಾಕ್ ಬೆಂಬಲ ನೀಡಲಿದೆ. ಹಾಗೆಯೇ 11.4ಗಂಟೆ ಗೇಮಿಂಗ್ ಬ್ಯಾಕ್‌ಅಪ್, 17.6ಗಂಟೆ ಮ್ಯೂಸಿಕ್ ಬ್ಯಾಕ್‌ಅಪ್ ಮತ್ತು 18.1ಗಂಟೆ 4G ಟಾಕ್‌ಟೈಮ್ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಯುಎಸ್‌ಬಿ, ಬ್ಲೂಟೂತ್ v5.0, ಓಟಿಜಿ, ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಇನ್‌ಫಿನಿಕ್ಸ್ ಹಾಟ್ 8 ಸ್ಮಾರ್ಟ್‌ಫೋನ್ 7,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು (ಜನವರಿ 8ರಂದು) ಮತ್ತೆ ಸೇಲ್ ನಡೆಯಲಿದೆ. ವಿಶೇಷವೆಂದರೇ ಆರಂಭಿಕ ಕೊಡುಗೆಯಾಗಿ ಗ್ರಾಹಕರಿಗೆ 6,999ರೂ.ಗಳಿಗೆ ದೊರೆಯಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190