ಭಾರತದಲ್ಲಿ 'ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್' ಸೇಲ್‌ ಆರಂಭ; ಭರ್ಜರಿ ಡಿಸ್ಕೌಂಟ್‌!

|

ಇನ್ಫಿನಿಕ್ಸ್‌ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ ಪರಿಚಯಿಸಿರುವ ನೂತನ 'ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್' (Infinix INBook X1 Slim) ಕೆಲವು ಫೀಚರ್ಸ್‌ಗಳಿಂದ ಹಾಗೂ ಬೆಲೆಯಿಂದ ಸದ್ದು ಮಾಡುತ್ತಿದೆ. ಈ ಲ್ಯಾಪ್‌ಟಾಪ್ ಒಟ್ಟು ಐದು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಜೊತೆಗೆ ಕೋರ್‌ i3, ಕೋರ್‌ i5 ಮತ್ತು ಕೋರ್ i7 SOC ಆಯ್ಕೆಗಳನ್ನು ಇದು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂದು ಮಾರಾಟ ಪ್ರಾರಂಭಿಸಿದೆ.

ರಿಯಾಯಿತಿ

ಹೌದು. ಇನ್ಫಿನಿಕ್ಸ್‌ ಕಂಪೆನಿಯ 'ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್' (Infinix INBook X1 Slim) ಲ್ಯಾಪ್‌ಟಾಪ್‌ ಇಂದು (ಜೂ. 21) ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಮಾರಾಟ ಪ್ರಾರಂಭಿಸಿದೆ. ಹಾಗೆಯೇ ಲಾಂಚ್‌ ಕೊಡುಗೆಯಾಗಿ ಕೆಲವೊಂದು ರಿಯಾಯಿತಿ ಲಭ್ಯ ಮಾಡಿದೆ. ಮುಖ್ಯವಾಗಿ ಡೆಬಿಟ್/ ಕ್ರೆಡಿಟ್ ಕಾರ್ಡ್ ಆಫರ್‌ನೊಂದಿಗೆ ಖರೀದಿದಾರರು 3,000 ರೂ. ವರೆಗೆ ರಿಯಾಯಿತಿ ಪಡೆಯಬಹುದು.

ರಿಯಾಯಿತಿ

ಹಾಗೆಯೇ ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಅನಿಯಮಿತ ಕ್ಯಾಶ್ ಬ್ಯಾಕ್ ಲಭ್ಯ. ಆಕ್ಸಿಸ್ ಡೆಬಿಟ್ ಕಾರ್ಡ್‌ಗಳು / ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಕೋರ್ i3 ರೂಪಾಂತರದ ಮೇಲೆ 2,000 ರೂ. ತ್ವರಿತ ರಿಯಾಯಿತಿ ಸಿಗಲಿದೆ. ಇನ್ನು ಆಕ್ಸಸ್‌ ಡೆಬಿಟ್ ಕಾರ್ಡ್‌ಗಳು / ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಕೋರ್‌ i5 ಮತ್ತು i7 ರೂಪಾಂತರಗಳ ಮೇಲೆ 3,000 ರೂ. ತ್ವರಿತ ರಿಯಾಯಿತಿ ದೊರೆಯುತ್ತದೆ.

ಬರೋಡಾ

ಇದಲ್ಲದೇ ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 1,500 ರೂ. ರಿಯಾಯಿತಿ. ಕೋಟಕ್ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳೊಂದಿಗೆ 1,000 ರೂ. ರಿಯಾಯಿತಿ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 1,500 ರೂ. ರಿಯಾಯಿತಿ ಹಾಗೂ HSBC ಕ್ರೆಡಿಟ್ ಕಾರ್ಡ್ EMI ವಹಿವಾಟುಗಳೊಂದಿಗೆ 1,500 ರೂ. ರಿಯಾಯಿತಿ ಸಹ ಲಭ್ಯ ಆಗಲಿದೆ. ಹಾಗಾದರೇ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಫೀಚರ್ಸ್‌

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಫೀಚರ್ಸ್‌

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೋರ್‌ i3, ಕೋರ್‌ i5 ಮತ್ತು ಕೋರ್‌ i7 10 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ಗಳ ಆಯ್ಕೆಯಲ್ಲಿ ಬರಲಿದೆ. ಇದು ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಇದರಿಂದ ನಿಮಗೆ ಯಾವ ಪ್ರೊಸೆಸರ್‌ನ ಆಯ್ಕೆಯ ಲ್ಯಾಪ್‌ಟಾಪ್‌ ಬೇಕೋ ಅದನ್ನು ಆಯ್ಕೆ ಮಾಡಬಹುದು. ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ 14 ಇಂಚಿನ ಪೂರ್ಣ ಹೆಚ್‌ಡಿ IPS ಪರದೆಯೊಂದಿಗೆ 300 nits ಬ್ರೈಟ್‌ನೆಸ್, 100% sRGB ಕವರೇಜ್ ಮತ್ತು 16:9 ಆಕಾರ ಅನುಪಾತದೊಂದಿಗೆ ಬರುತ್ತದೆ. ಲ್ಯಾಪ್‌ಟಾಪ್ ವಿಂಡೋಸ್ 11 ಓಎಸ್‌ನಲ್ಲಿ ಬೆಂಬಲ ಪಡೆದಿದೆ. ಜೊತೆಗೆ ಈ ಲ್ಯಾಪಿ ಕೇವಲ 1.24 ಕೆಜಿ ತೂಕ ಹೊಂದಿದ್ದು, ಕೇವಲ 14.8 ಮಿಮೀ ದಪ್ಪವಾಗಿರುತ್ತದೆ.

ಮಾಡುವಾಗ

ಇನ್ನು ಈ ಡಿವೈಸ್‌ 16 GB RAM ಮತ್ತು 512 GB SSD ಸ್ಟೋರೇಜ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ HD ವೆಬ್‌ಕ್ಯಾಮ್ ಮತ್ತು ಡ್ಯುಯಲ್ ಸ್ಟಾರ್ ಲೈಟ್‌ ಅನ್ನು ಕೂಡ ಒಳಗೊಂಡಿದೆ. ಈ ಡ್ಯುಯಲ್ ಸ್ಟಾರ್ ಲೈಟ್ ಕ್ಯಾಮೆರಾ ಫೀಚರ್ಸ್‌ ವೀಡಿಯೊ ಕರೆಗಳನ್ನು ಮಾಡುವಾಗ ಅಥವಾ ಲೋ ಲೈಟ್‌ ಸಂದರ್ಭಗಳಲ್ಲಿ ಗೋಚರತೆಯನ್ನು ಹೆಚ್ಚಿಸಲಿದೆ. ಇದರಿಂದ ನೀವು ಲೋ ಲೈಟ್‌ ಇದ್ದಾಗಲೂ ವೀಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಭಾಗವಹಿಸಬಹುದು. ಇದಲ್ಲದೆ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ 50Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್, ಯುಎಸ್‌ಬಿ-ಸಿ, ಯುಎಸ್‌ಬಿ 3.0, ಹೆಚ್‌ಡಿಎಮ್‌ಐ ಪೋರ್ಟ್‌ಗಳು ಮತ್ತು ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಹಲವು ಆಯ್ಕೆಗಳಲ್ಲಿ ಬರುವುದರಿಂದ ಇದರ ಬೆಲೆ ಹೀಗಿವೆ. ಕೋರ್ i3 (8GB + 256GB): 29,990 ರೂ, ಕೋರ್ i3 (8GB + 512GB): 32,990ರೂ, ಕೋರ್ i5 (8GB + 512GB): 39,990ರೂ, ಕೋರ್ i5 (16GB + 512GB): 44,990 ರೂ, ಕೋರ್ i7 (16GB + 512GB): 49,990 ರೂ, ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಸ್ಟಾರ್‌ಫಾಲ್ ಗ್ರೇ, ಕಾಸ್ಮಿಕ್ ಬ್ಲೂ, ನೋಬಲ್ ರೆಡ್ ಮತ್ತು ಅರೋರಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಲ್ಯಾಪ್‌ಟಾಪ್‌ ಇದೇ ಜೂನ್ 21 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ.

ಇನ್ಫಿನಿಕ್ಸ್‌ ನೋಟ್ 12 ಸರಣಿ

ಇನ್ಫಿನಿಕ್ಸ್‌ ನೋಟ್ 12 ಸರಣಿ

ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ತನ್ನ ಹೊಸ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಇನ್ಫಿನಿಕ್ಸ್‌ ನೋಟ್‌ 12 ಮತ್ತು ಇನ್ಫಿನಿಕ್ಸ್‌ ನೋಟ್‌ 12 ಟರ್ಬೋ ಮಾಡೆಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಹೊಂದಿದ್ದು, ಇನ್ಫಿನಿಕ್ಸ್‌ ನೋಟ್‌ 12 ಟರ್ಬೋ ಮೀಡಿಯಾ ಟೆಕ್‌ ಹಿಲಿಯೋ G96 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ಫಿನಿಕ್ಸ್‌ ನೋಟ್‌ 12 ಆರಂಭಿಕ ಬೆಲೆ 11,499 ರೂ. ಆಗಿದೆ. ಅದೇ ರೀತಿ ಇನ್ಫಿನಿಕ್ಸ್‌ ನೋಟ್‌ 12 ಟರ್ಬೋ ಆರಂಭಿಕ ಬೆಲೆಯು 14,999 ರೂ. ಆಗಿದೆ.

Best Mobiles in India

English summary
Infinix InBook X1 Slim with Intel Core i7 variant is priced at Rs 49,990, the Core i5 variant starts at Rs 39,990, and the most affordable of the trio, the Core i3 version is starts at Rs 29,990.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X