ವಾಟ್ಸಾಪ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

By Shwetha
|

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಹೆಸರು ಮಾಡುತ್ತಿರುವ ವಾಟ್ಸಾಪ್ ಎಂಬ ಮಹಾದಿಗ್ಗಜ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಸದ್ಯಕ್ಕೆ ಫೇಸ್‌ಬುಕ್ ಒಡೆತನದಲ್ಲಿದ್ದರೂ ತನ್ನದೇ ಛಾಪನ್ನು ಇದು ಬಳಕೆದಾರರ ವಲಯದಲ್ಲಿ ಮೂಡಿಸಿಕೊಂಡಿದೆ. ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದುತ್ತಿರುವ ಈ ಅಪ್ಲಿಕೇಶನ್ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪ್ರಶಂಸೆಗೆ ಅರ್ಹವಾಗಿರುವಂಥದ್ದು.

ಓದಿರಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ವಾಟ್ಸಾಪ್ ಬಳಕೆಯನ್ನು ಇನ್ನಷ್ಟು ಅತ್ಯುತ್ತಮ ಅಂತೆಯೇ ಪ್ರಯೋಜನಕಾರಿಯಾಗಿಸುವ ನಿಟ್ಟಿನಲ್ಲಿ ನಾವು ಕೆಲವೊಂದು ಸಲಹೆಗಳ ಮೂಲಕ ನಿಮ್ಮನ್ನು ತಲುಪುತ್ತಿದ್ದು ಇದು ಹೆಚ್ಚು ಉಪಯುಕ್ತ ಎಂದೆನಿಸಲಿದೆ.

ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

 ಅಳಿಸಿದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ಅಳಿಸಿದ ಸಂದೇಶಗಳನ್ನು ಮರುಪಡೆದುಕೊಳ್ಳುವುದು

ನಿಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ವಾಟ್ಸಾಪ್‌ನಲ್ಲಿರುವ ಸಂದೇಶಗಳು ಅಳಿಸಿ ಹೋಗಿವೆಯೇ? ಚಿಂತಿಸದಿರಿ ಇದನ್ನು ಮರುಪಡೆದುಕೊಳ್ಳಲು ವಾಟ್ಸಾಪ್ > ಡೇಟಾಬೇಸ್ ಮತ್ತು ಈ ಎರಡು ಫೈಲ್ ಹೆಸರುಗಳಾದ msgstore-yyyy..dd..db.crypt ಹಾಗೂ msgtore.db.crypt ಅನ್ನು ಹುಡುಕಿಕೊಳ್ಳಿ. ಪ್ರಥಮ ಫೈಲ್‌ನಲ್ಲಿ ನೀವು ಕಳುಹಿಸಿರುವ ಸಂದೇಶಗಳು ಅಂತೆಯೇ ಎರಡನೇ ಫೈಲ್‌ನಲ್ಲಿ ಪ್ರಸ್ತುತ ದಿನದ ಸಂದೇಶಗಳು ಇರುತ್ತವೆ. ಟೆಕ್ಸ್ಟ್ ಎಡಿಟರ್ ಬಳಸಿ ಸಂದೇಶಗಳನ್ನು ನಿಮಗೆ ಓದಬಹುದಾಗಿದೆ.

ಎರಡು ಚಿತ್ರಗಳನ್ನು ಒಂದಾಗಿ ಕಳುಹಿಸಿ

ಎರಡು ಚಿತ್ರಗಳನ್ನು ಒಂದಾಗಿ ಕಳುಹಿಸಿ

ಫ್ಲಂಬ್ ಆಪ್ ಎಂಬ ಅಪ್ಲಿಕೇಶನ್ ಬಳಸಿ ಐಫೋನ್ ಅಂತೆಯೇ ಆಂಡ್ರಾಯ್ಡ್‌ನಲ್ಲಿ ಎರಡೆರಡು ಚಿತ್ರಗಳನ್ನು ಒಂದೇ ಚಿತ್ರವನ್ನಾಗಿ ಕಳುಹಿಸಬಹುದು.

ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಸ್ನೇಹಿತರ ಪ್ರೊಫೈಲ್ ಚಿತ್ರ ಬದಲಾಯಿಸುವುದು

ಮೊದಲಿಗೆ ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನಾಗಿಸಬೇಕೆಂದಿರುವ ಚಿತ್ರವನ್ನು ಆರಿಸಿಕೊಳ್ಳಿ ನಂತರ 561x561 ಪಿಕ್ಸೆಲ್ ಗಾತ್ರಕ್ಕೆ ಚಿತ್ರವನ್ನು ಹೊಂದಿಸಿಕೊಳ್ಳಿ. ನಿಮ್ಮ ಸ್ನೇಹಿತರ ಮೊಬೈಲ್ ಸಂಖ್ಯೆಯೊಂದಿಗೆ ಫೋಟೋ ರೀನೇಮ್ ಮಾಡಿ. ಇನ್ನು ಎಸ್‌ಡಿ ಕಾರ್ಡ್‌ನಲ್ಲಿ > ವಾಟ್ಸಾಪ್ > ಪ್ರೊಫೈಲ್ ಪಿಕ್ಚರ್ ಇಲ್ಲಿ ಸೇವ್ ಮಾಡಿ. ಫೋನ್ ಫ್ಲೈಟ್ ಮೋಡ್‌ನಲ್ಲಿರಿಸಿ ವೈಫೈ ಸಂಪರ್ಕ ಕಡಿದುಕೊಳ್ಳಿ.

ಫೇಕ್ ಸಂವಾದಗಳನ್ನು ರಚಿಸಲು

ಫೇಕ್ ಸಂವಾದಗಳನ್ನು ರಚಿಸಲು

ವಾಟ್‌ಸೆಡ್ ಎಂಬ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸುಲಭವಾಗಿ ಫೇಕ್ ಸಂವಾದಗಳನ್ನು ರಚಿಸಿಕೊಳ್ಳಿ

ಪ್ರೊಫೈಲ್ ಚಿತ್ರ ಮರೆಮಾಡಲು

ಪ್ರೊಫೈಲ್ ಚಿತ್ರ ಮರೆಮಾಡಲು

ನಿಮ್ಮ ನೆಟ್‌ವರ್ಕ್‌ನಲ್ಲಿ ನಿಮ್ಮನ್ನು ಸುಲಭವಾಗಿ ಗುರುತಿಸಲು ಪ್ರೊಫೈಲ್ ಚಿತ್ರ ಸಹಕಾರಿಯಾಗಿದೆ. ವಾಟ್ಸಾಪ್ ಪ್ಲಸ್ ಡೌನ್‌ಲೋಡ್ ಮಾಡಿ ಮತ್ತು ಇಲ್ಲಿ ಪ್ರೊಫೈಲ್ ಚಿತ್ರವನ್ನು ಮರೆಮಾಡಿಕೊಳ್ಳಿ.

ಸ್ನೇಹಿತರ ಪ್ರೊಫೈಲ್ ಚಿತ್ರ ಹುಡುಕಲು

ಸ್ನೇಹಿತರ ಪ್ರೊಫೈಲ್ ಚಿತ್ರ ಹುಡುಕಲು

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಹುಡುಕಲು ಎಸ್‌ಡಿ ಕಾರ್ಡ್ > ವಾಟ್ಸಾಪ್ ಮತ್ತು ಪ್ರೊಫೈಲ್ ಪಿಕ್ಚರ್ ಇಲ್ಲಿ ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಸ್ವಯಂಚಾಲಿತ ಮಲ್ಟಿಮೀಡಿಯಾ ಕಂಟೆಂಟ್ ಡೌನ್‌ಲೋಡ್ ನಿಲ್ಲಿಸಲು

ಸ್ವಯಂಚಾಲಿತ ಮಲ್ಟಿಮೀಡಿಯಾ ಕಂಟೆಂಟ್ ಡೌನ್‌ಲೋಡ್ ನಿಲ್ಲಿಸಲು

ವಾಟ್ಸಾಪ್‌ನ ಹಳೆಯ ಆವೃತ್ತಿಯಲ್ಲಿ ಆಡಿಯೊಗಳು ಮತ್ತು ಚಿತ್ರಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿತ್ತು. ಆದರೆ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯಲ್ಲಿ ಮಲ್ಟಿಮೀಡಿಯಾ ಕಂಟೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ವಾಟ್ಸಾಪ್ ನಿಲ್ಲಿಸಿದೆ. ಇದನ್ನು ಮಾಡಲು ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ > ಮೀಡಿಯಾ ಆಟೊ - ಡೌನ್‌ಲೋಡ್ ಮತ್ತು ಅನ್‌ಚೆಕ್ ಮಾಡಿ.

ಪಿಡಿಕೆ, ಎಪಿಕೆ ಮತ್ತು ಜಿಪ್ ಫೈಲ್‌ಗಳನ್ನು ಕಳುಹಿಸಲು ಮತ್ತು ಅಪ್‌ಲೋಡ್ ಮಾಡಲು

ಪಿಡಿಕೆ, ಎಪಿಕೆ ಮತ್ತು ಜಿಪ್ ಫೈಲ್‌ಗಳನ್ನು ಕಳುಹಿಸಲು ಮತ್ತು ಅಪ್‌ಲೋಡ್ ಮಾಡಲು

ಮೊದಲಿಗೆ ಡ್ರಾಪ್‌ಬಾಕ್ಸ್ ಅಪ್ಲಿಕೇಶನ್ ಮತ್ತು ಕ್ಲೌಡ್‌ಸೆಂಡ್ ಅಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದನ್ನು ಬಳಸಿ ಈ ಸ್ವರೂಪದಲ್ಲಿರುವ ಫೈಲ್‌ಗಳನ್ನು ನಿಮಗೆ ಕಳುಹಿಸಬಹುದಾಗಿದೆ.

 ವಾಟ್ಸಾಪ್ ಥೀಮ್‌ಗಳನ್ನು ಬದಲಾಯಿಸಲು

ವಾಟ್ಸಾಪ್ ಥೀಮ್‌ಗಳನ್ನು ಬದಲಾಯಿಸಲು

ವಾಟ್ಸಾಪ್ ಪ್ಲಸ್ ಹೋಲೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಿ ವಾಟ್ಸಾಪ್‌ನ ನೋಟವನ್ನು ಬದಲಾಯಿಸಿಕೊಳ್ಳಿ.

ವಾಟ್ಸಾಪ್‌ನ ಅವಧಿ ಮುಗಿದ ನಂತರವೂ ಉಚಿತವಾಗಿ ಬಳಸಲು

ವಾಟ್ಸಾಪ್‌ನ ಅವಧಿ ಮುಗಿದ ನಂತರವೂ ಉಚಿತವಾಗಿ ಬಳಸಲು

ವಾಟ್ಸಾಪ್ 1 ವರ್ಷದ ಉಚಿತ ಚಂದಾದಾರಿಕೆಯೊಂದಿಗೆ ಬಂದಿದೆ. ನಿಮ್ಮ ಅವಧಿ ಮುಗಿದ ನಂತರ ವಾಟ್ಸಾಪ್ ಅನ್ನು ಪಾವತಿಸಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಇದನ್ನು ನಂತರವೂ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
WhatsApp is a cross platform messaging app and is very popular among every age of people. So, today we will be sharing some of the best WhatsApp tricks for your Android and iPhone smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X