ಅಬ್ಬಬ್ಬಾ... ಫ್ಲಿಪ್‌ಕಾರ್ಟ್‌ನಲ್ಲಿ ಈ ಆಪಲ್ ಫೋನ್‌ ಬೆಲೆ ಕೇವಲ 21,450ರೂ. ಅಷ್ಟೇ!

|

ಆಪಲ್‌ನ ಯಾವುದೇ ಡಿವೈಸ್‌ ಸಹ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ. ಹಾಗೆಯೇ ಆಪಲ್‌ ಫೋನ್‌ಗಳು ಸಹ ಬಳಕೆದಾರರಿಗೆ ವಿಶೇಷವಾದ ಬಳಕೆಯ ಅನುಭವವನ್ನು ನೀಡುತ್ತವೆ. ಇನ್ನು ಬೆಲೆ ಹೆಚ್ಚಾದರೂ ಪರವಾಗಿಲ್ಲ ಆಪಲ್‌ ಫೋನ್‌ ಖರೀದಿಸಬೇಕು ಎಂದು ಹಲವರು ಮುಂದಾಗುತ್ತಾರೆ. ಆದರೆ, ಈ ಸಮಯದಲ್ಲಿ ನೀವು ಬೆಲೆಯ ಬಗ್ಗೆ ಚಿಂತಿಸದೆ ನಿಮ್ಮ ನೆಚ್ಚಿನ ಆಪಲ್‌ ಫೋನ್‌ ಖರೀದಿ ಮಾಡಬಹುದು. ಯಾಕೆಂದರೆ ಆಪಲ್‌ ಫೋನ್‌ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಈ ಫೋನ್‌ ನಿಮಗೆ ಕೇವಲ 21,450 ರೂ. ಗಳಿಗೆ ಸಿಗಲಿದೆ.

ಆಪಲ್‌ ಫೋನ್‌

ಹೌದು, ಆಪಲ್‌ ಫೋನ್‌ ವಿಭಾಗದಲ್ಲಿ ಗ್ರಾಹಕರ ನೆಚ್ಚಿನ ಹಾಗೂ ಹೆಚ್ಚು ಬೇಡಿಕೆ ಇರುವ ಫೋನ್‌ ಎಂದರೆ ಅದು ಆಪಲ್‌ ಐಫೋನ್‌ 11 (Apple iPhone 11 ) ಈ ಫೋನ್‌ ಸದ್ಯಕ್ಕೆ ನೀವು ಊಹಿಸಲಾಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಅಂದರೆ ಈ ಫೋನ್ ಬರೋಬ್ಬರಿ 19,549 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 21,450ರೂ. ನಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಹಾಗಿದ್ರೆ ಈ ಈ ಬೆಲೆಗೆ ಈ ಫೋನ್‌ ಎಲ್ಲಿ ಲಭ್ಯ? ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿದ್ದೇವೆ ನೋಡಿ.

ಅತ್ಯಂತ ಜನಪ್ರಿಯ ಐಫೋನ್ ಇದು

ಅತ್ಯಂತ ಜನಪ್ರಿಯ ಐಫೋನ್ ಇದು

ಐಫೋನ್ 11ಫೋನ್‌ 11 ಸರಣಿಯಲ್ಲಿ ಮೂಲ ಮಾದರಿಯಾಗಿದೆ. ಇದರ ಮುಂದಿನ ಸರಣಿ ಎಂದರೆ ಐಫೋನ್ 11 ಪ್ರೊ ಹಾಗೂ ಐಫೊನ್ 11 ಪ್ರೊ ಮ್ಯಾಕ್ಸ್‌. ಆಪಲ್‌ ಐಫೋನ್ 11 2020 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿದೆ. ಹಾಗೆಯೇ ಇಲ್ಲಿಯವರೆಗಿನ ಅತ್ಯಂತ ಜನಪ್ರಿಯ ಐಫೋನ್ ಮಾದರಿಗಳಲ್ಲಿ ಒಂದೆನಿಸಿಕೊಂಡಿದೆ. ಆದರೆ, ಈ ಫೋನ್‌ ಅನ್ನು ಐಫೋನ್ 14 ಸರಣಿಯ ಬಿಡುಗಡೆಯ ನಂತರ ಸ್ಥಗಿತಗೊಳಿಸಲಾಗಿದೆ.

ಸ್ಥಗಿತಗೊಂಡರೂ ಹೆಚ್ಚಿನ ಬೇಡಿಕೆ

ಸ್ಥಗಿತಗೊಂಡರೂ ಹೆಚ್ಚಿನ ಬೇಡಿಕೆ

ಐಫೋನ್‌ 11 ಉತ್ತಮ ಕ್ಯಾಮೆರಾ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ಹಿನ್ನೆಲೆ ಬೆಸ್ಟ್‌ ಎನಿಸಿಕೊಂಡಿದೆ. ಈ ಫೋನ್‌ ತಯಾರಿಕೆ ಪ್ರಕ್ರಿಯೆ ಸ್ಥಗಿತಗೊಂಡಿದ್ದರೂ ಸಹ ಮಾರುಕಟ್ಟೆಯಲ್ಲಿ ಈ ಕ್ಷಣಕ್ಕೂ ಹೆಚ್ಚಿನ ಬೇಡಿಕೆ ಹೊಂದಿದೆ. ಹೀಗಾಗಿ ಆಪಲ್‌ ಗ್ರಾಹಕರ ಆಸಕ್ತಿಗೆ ತಕ್ಕಂತೆ ಪೂರೈಕೆ ಮಾಡುತ್ತಾ ಬರುತ್ತಿದೆ. ಆರಂಭದಲ್ಲಿ ಈ ಫೋನ್‌ ಅನ್ನು 64,900 ರೂ. ಗಳ ಆರಂಭಿಕ ಬೆಲೆಗೆ 2019 ರಲ್ಲಿ ಲಾಂಚ್‌ ಮಾಡಲಾಗಿತ್ತು. ವಿಶೇಷ ಅಂದರೆ 64,900 ರೂ. ಗಳ ಬೆಲೆಯ ಫೋನ್‌ ಅನ್ನು ಇಂದು ನೀವು 21,450 ರೂ. ಗಳಿಗೆ ಖರೀದಿ ಮಾಡಬಹುದು ಎಂದರೆ ತಮಾಷೆಯ ಮಾತಲ್ಲ.

ಫ್ಲಿಪ್‌ಕಾರ್ಟ್‌ನಲ್ಲಿ 21,450ರೂ. ಗಳು

ಫ್ಲಿಪ್‌ಕಾರ್ಟ್‌ನಲ್ಲಿ 21,450ರೂ. ಗಳು

ಹೌದು, ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ. ಐಫೋನ್ 11 ಫ್ಲಿಪ್‌ಕಾರ್ಟ್‌ನಲ್ಲಿ ಸಾಮಾನ್ಯ ದರ 40,999ರೂ. ಆಗಿದ್ದು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಅಂದರೆ ನೀವು ಈ ಖರೀದಿಯ ಮೇಲೆ 2,049ರೂ. ಗಳ ರಿಯಾಯಿತಿ ಪಡೆಯಬಹುದು. ಇದರೊಂದಿಗೆ ಕೆಲವು ಬ್ಯಾಂಕ್‌ಗಳ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಜೊತೆಗೆ ವಿನಿಮಯ ಆಫರ್‌ ಮೂಲಕ ಒಟ್ಟಾರೆ ಈ ಫೋನ್‌ಗೆ 17,500ರೂ. ಗಳ ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಈ ಮೂಲಕ ನೀವು ಐಫೋನ್ 11 ಅನ್ನು 21,450ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಈ ಫೋನ್‌ನ ಪ್ರಮುಖ ಫೀಚರ್ಸ್‌

ಈ ಫೋನ್‌ನ ಪ್ರಮುಖ ಫೀಚರ್ಸ್‌

ಈ ಹಿಂದೆ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಹೆಚ್ಚಿಗೆ ಮಾರಾಟವಾಗಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಇನ್ನು ಈ ಫೋನ್ 6.1 ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್‌ಪ್ಲೇ ಹೊಂದಿದ್ದು, A13 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯರ್ವಹಿಸಲಿದೆ. ಜೊತೆಗೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 12MP ಪ್ರಮುಖ ಸೆನ್ಸರ್‌ ಇದರಲ್ಲಿದೆ ಹಾಗೂ ಮುಂಭಾಗದಲ್ಲಿ 12MP ಸೆಲ್ಫಿ ಶೂಟರ್ ಆಯ್ಕೆ ಪಡೆದುಕೊಂಡಿದೆ. ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಐಫೋನ್‌ಗಳಲ್ಲಿ ಇದೂ ಒಂದಾಗಿದೆ.

Best Mobiles in India

English summary
iPhone 11 available at Rs 21,450 on Flipkart after Rs 19,549 discount.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X