12,000 ರೂ.ಗಳ ರಿಯಾಯಿತಿಯಲ್ಲಿ ಐಫೋನ್‌ 14 ಮಾರಾಟ; ಈ ಕೊಡುಗೆ ಮಿಸ್‌ ಮಾಡ್ಕೋಬೇಡಿ!

|

ಆಪಲ್‌ನ ಐಫೊನ್‌ಗಳ ಕಾರ್ಯಕ್ಷಮತೆಗೆ ಯಾರೇ ಆದರೂ ಫಿದಾ ಆಗುತ್ತಾರೆ. ಅಷ್ಟರಮಟ್ಟಿಗಿನ ಫೀಚರ್ಸ್‌ ಈ ಫೋನ್‌ಗಳಲ್ಲಿ ಇರಲಿದೆ. ಆದರೆ, ಈ ಫೋನ್‌ಗಳ ಬೆಲೆ ದುಬಾರಿಯಾಗಿರುವುದರಿಂದ ಕೆಲವರಿಗೆ ಇದನ್ನು ಖರೀದಿ ಮಾಡಲು ತುಂಬಾ ಕಷ್ಟ. ಆದರೆ, ಆಪಲ್‌ನ ಈ ಹೊಸ ಆಫರ್‌ ಬಗ್ಗೆ ತಿಳಿದರೆ ನೀವು ಖಂಡಿತಾ ಐಫೋನ್‌ ಖರೀದಿ ಮಾಡುತ್ತೀರ. ಯಾಕೆಂದರೆ ಐಫೋನ್ 14 ಫೋನ್‌ ಅನ್ನು 12,000 ಕ್ಕೂ ಹೆಚ್ಚಿನ ರಿಯಾಯಿತಿಯೊಂದಿಗೆ ಕೊಂಡುಕೊಳ್ಳಬಹುದಾಗಿದೆ.

12,000 ರೂ.ಗಳ ರಿಯಾಯಿತಿಯಲ್ಲಿ ಐಫೋನ್‌ 14 ಮಾರಾಟ; ಈ ಕೊಡುಗೆ ಮಿಸ್‌ ಮಾಡ್ಕೋಬೇಡಿ!

ಹೌದು, ಆಪಲ್‌ ಸ್ಟೋರ್‌ನಲ್ಲಿ 12,000 ರೂಪಾಯಿಗಳ ರಿಯಾಯಿತಿಯಲ್ಲಿ ಐಫೋನ್ 14 ಮಾರಾಟ ಆಗುತ್ತಿದೆ. ಈ ಫೋನ್‌ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ HDR ಅನ್ನು ಬೆಂಬಲಿಸುತ್ತದೆ. ಹಾಗಿದ್ರೆ, ಈ ಫೋನ್‌ ಅನ್ನು ಇನ್ನೂ ಹೆಚ್ಚಿನ ರಿಯಾಯಿತಿಯೊಂದಿಗೆ ಖರೀದಿ ಮಾಡುವುದು ಹೇಗೆ?, ಇದರ ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಆಪಲ್‌ ಐಫೋನ್‌ 14 ನ 128GB ವೇರಿಯಂಟ್‌ 79,900 ರೂ.ಗಳ ಸಾಮಾನ್ಯ ದರ ಹೊಂದಿದ್ದು, ಈ ಫೋನ್‌ಗೆ 7,000 ರೂ.ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನಿಮ್ಮ ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಹೆಚ್ಚುವರಿಯಾಗಿ 5,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ಕೇವಲ ಐಫೊನ್‌ ಅಷ್ಟೇ ಅಲ್ಲದೆ ಐಪ್ಯಾಡ್‌, ಮ್ಯಾಕ್‌ಬುಕ್‌, ಮತ್ತು ಆಪಲ್‌ ವಾಚ್‌ ಸೇರಿದಂತೆ ಇತರೆ ಆಪಲ್‌ ಡಿವೈಸ್‌ಗಳ ಮೇಲೂ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ.

ಬ್ಯಾಂಕ್‌ ಆಫರ್‌ ಏನು?
ಅಧಿಕೃತವಾಗಿ 79,900 ರೂ. ಸಮಾನ್ಯ ಬೆಲೆ ಹೊಂದಿರುವ ಈ ಫೋನ್‌ 71,111 ರೂ. ಗಳಿಗೆ ಮಾರಾಟವಾಗುತ್ತಿದೆ. ನೀವು ಈ ಫೋನ್‌ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿ ಮಾಡಿದರೆ ಹೆಚ್ಚುವರಿಯಾಗಿ 4,000ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಫೋನ್‌ನ ಬೆಲೆ 67,111 ರೂ. ಗಳಾಗುತ್ತದೆ. ಇದಲ್ಲದೆ, ಹಳೆಯ ಫೋನ್ ಅನ್ನು ಕ್ಯಾಸಿಫೈನಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ರಿಯಾಯಿತಿಯನ್ನೂ ಸಹ ಪಡೆಯಬಹುದು.

12,000 ರೂ.ಗಳ ರಿಯಾಯಿತಿಯಲ್ಲಿ ಐಫೋನ್‌ 14 ಮಾರಾಟ; ಈ ಕೊಡುಗೆ ಮಿಸ್‌ ಮಾಡ್ಕೋಬೇಡಿ!

ಕ್ಯಾಸಿಫೈನಲ್ಲಿ ಹಳೆಯ ಐಫೋನ್ 12 ಗೆ ಸಾಮಾನ್ಯವಾಗಿ 35,000 ರೂ. ಗಳ ಬೆಲೆ ಇದ್ದು, ಅದೇ ರೀತಿ ಐಫೋನ್‌ 11 ನ್ನು 24,000 ರೂಪಾಯಿಗಳಿಗೆ ಮಾರಾಟ ಮಾಡಬಹುದು. ಆದರೂ ಈ ಫೋನ್‌ಗಳ ಬ್ಯಾಟರಿಯ ಗುಣಮಟ್ಟ ಚೆನ್ನಾಗಿದ್ದರೆ ಹಾಗೂ ಫೋನ್‌ ಸ್ಕ್ರ್ಯಾಚ್ ಮುಕ್ತವಾಗಿದ್ದರೆ ನಿಗದಿ ಪಡಿಸಲಾದ ಹಣಕ್ಕಿಂತ ಹೆಚ್ಚಿನ ದರಕ್ಕೆ ಫೋನ್‌ ಅನ್ನು ಮಾರಾಟಮಾಡಬಹುದು. ಇದರಿಂದಾಗಿ ನೀವು ಹೊಸ ಐಫೋನ್‌ 14 ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದಂತೆ ಆಗುತ್ತದೆ.

ಈ ಫೋನ್‌ನ ಪ್ರಮುಖ ಫೀಚರ್ಸ್‌
ಈ ಐಫೋನ್‌ 14 ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಪ್ಯಾನೆಲ್ ಆಯ್ಕೆ ಹೊಂದಿದ್ದು, 1200 nits ಬ್ರೈಟ್‌ನೆಸ್‌ ನೀಡಲಿದೆ. ಹಾಗೆಯೇ 60Hz ನ ಪ್ರಮಾಣಿತ ರಿಫ್ರೆಶ್ ರೇಟ್‌ ಆಯ್ಕೆ ಬಳಕೆ ಸಮಯದಲ್ಲಿ ಉತ್ತಮ ಅನುಭವ ನೀಡಲಿದೆ.

ಇದರೊಂದಿಗೆ A15 ಬಯೋನಿಕ್ ಚಿಪ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್‌, 16 ಕೋರ್ NPU ಮತ್ತು 5 ಕೋರ್ ಗ್ರಾಫಿಕ್ಸ್ ಪ್ರೊಸೆಸರ್ ಅನ್ನು ಪಡೆದುಕೊಂಡಿದೆ.ಇದರೊಂದಿಗೆ 4GB RAM ಆಯ್ಕೆಯೊಂದಿಗೆ 128GB, 256GB, ಮತ್ತು 512GB ಯ ಮೂರು ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ.

12,000 ರೂ.ಗಳ ರಿಯಾಯಿತಿಯಲ್ಲಿ ಐಫೋನ್‌ 14 ಮಾರಾಟ; ಈ ಕೊಡುಗೆ ಮಿಸ್‌ ಮಾಡ್ಕೋಬೇಡಿ!

ಕ್ಯಾಮೆರಾ ವಿಚಾರದಲ್ಲಿ ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, 12MP ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 12MP ಅಲ್ಟ್ರಾ ವೈಡ್ ಆಂಗಲ್‌ನ ದ್ವಿತೀಯ ಕ್ಯಾಮೆರಾದಿಂದ ಪ್ಯಾಕ್ ಆಗಲಿದೆ. ಇದರೊಂದಿಗೆ ವಿಡಿಯೋ ರೆಕಾರ್ಡಿಂಗ್‌ ಸಂದರ್ಭದಲ್ಲಿ ಡಾಲ್ಬಿ ವಿಷನ್‌ಗೆ ಬೆಂಬಲವನ್ನು ನೀಡಲಿದೆ.

Best Mobiles in India

English summary
iPhone 14 is being sold at a discount of Rs 12,000, and some bank card holders can avail even more discounts. Details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X