ಟ್ರಯಲ್ ರೂಮ್‌ನಲ್ಲಿ ಕೆಲವೇ ಸೆಕೆಂಡ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಹೇಗೆ?

By Shwetha
|

ನೀವು ನಗರದಲ್ಲಿರುವ ಸುಪ್ರಸಿದ್ಧ ಬಟ್ಟೆ ಅಂಗಡಿಗೆ ಹೋಗಿ ಅಲ್ಲಿ ದಿರಿಸು ಖರೀದಿ ಮಾಡುತ್ತೀರಾ? ಕೊಂಡಕೊಂಡ ದಿರಿಸಿನ ಫಿಟ್ಟಿಂಗ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಅಲ್ಲಿನ ಟ್ರಯಲ್ ರೂಮ್‌ ಅನ್ನು ನೀವು ಬಳಸುತ್ತೀರಿ ಆದರೆ ಅಲ್ಲಿರುವ ಟ್ರಯಲ್ ರೂಮ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವು ಗಮನಿಸಿಕೊಂಡಿದ್ದೀರಾ? ಪ್ರಖ್ಯಾತ ಮಳಿಗೆಗಳ ಟ್ರಯಲ್ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸಿಕೊಂಡು ದಿರಿಸು ಬದಲಾಯಿಸುವ ಫೂಟೇಜ್ ಅನ್ನು ರೆಕಾರ್ಡ್ ಮಾಡುವ ಅಪಾಯ ಸ್ಥಿತಿ ಈಗ ಎದುರಾಗಿದೆ.

ಓದಿರಿ: ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

ಎಲ್ಲಾ ಕಡೆಗಳಲ್ಲಿ ಈ ರೀತಿ ಮಾಡದೇ ಇದ್ದರೂ ನಿಮ್ಮ ಎಚ್ಚರದಲ್ಲಿ ನೀವು ಇರಬೇಕು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆಯೋ ಎಂಬುದು ಯಾರಿಗೆ ಗೊತ್ತು ಎಂಬ ಮಾತಿನಂತೆಯೇ ನೀವು ಬಳಸುತ್ತಿರುವ ಟ್ರಯಲ್ ರೂಮ್ ಎಲ್ಲಾ ವಿಧದಲ್ಲಿಯೂ ಸುರಕ್ಷಿತವಾಗಿದೆ ಎಂಬುದನ್ನು ಕಂಡುಕೊಳ್ಳುವುದು ನಿಮಗೆ ಬಿಟ್ಟಿರುವ ಸಂಗತಿಯಾಗಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಇದನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಐಫೋನ್‌ಗಳನ್ನೇ ಮೀರಿಸುವ ಬಜೆಟ್ ದರದ ಕ್ಲೋನ್ ಐಫೋನ್‌ಗಳು

ಸ್ಮಾರ್ಟ್‌ಫೋನ್ ಬಳಸಿಕೊಂಡು ಹಿಡನ್ ಕ್ಯಾಮೆರಾ ಪತ್ತೆಹಚ್ಚಿ

ಸ್ಮಾರ್ಟ್‌ಫೋನ್ ಬಳಸಿಕೊಂಡು ಹಿಡನ್ ಕ್ಯಾಮೆರಾ ಪತ್ತೆಹಚ್ಚಿ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚೆಚ್ಚು ಸ್ಮಾರ್ಟ್ ಆಗುತ್ತಿವೆ. ನಿಮ್ಮ ಫೋನ್‌ಗಳನ್ನೇ ಬಳಸಿಕೊಂಡು ಹಿಡನ್ ಕ್ಯಾಮೆರಾಗಳ ಪತ್ತೆಯನ್ನು ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ

ಕರೆ ಮಾಡುವುದರ ಮೂಲಕ ಕ್ಯಾಮೆರಾ ಪತ್ತೆಹಚ್ಚಿ

ಕರೆ ಮಾಡುವುದರ ಮೂಲಕ ಕ್ಯಾಮೆರಾ ಪತ್ತೆಹಚ್ಚಿ

ಟ್ರಯಲ್ ರೂಮ್‌ನಿಂದ ನಿಮ್ಮ ಫೋನ್‌ನಿಂದ ನಿಮ್ಮ ಸ್ನೇಹಿತರಿಗೆ ಕರೆ ಮಾಡಿ, ಎಲ್ಲಿಯಾದರೂ ಹೀಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅಲ್ಲಿ ಹಿಡನ್ ಕ್ಯಾಮೆರಾ ಇರುವ ಸಂಭವ ಇರುತ್ತದೆ. ಸಿಗ್ನಲ್ ಟ್ರಾನ್ಸ್‌ಫರ್ ಆಗುವಾಗ ಫೈಬರ್ ಆಪ್ಟಿಕ್ ಕೇಬಲ್ ಪ್ರತಿಬಂಧವನ್ನು ಒಡ್ಡುತ್ತದೆ ಎಂಬುದು ವಿಜ್ಞಾನದ ಮಾತಾಗಿದೆ. ನೀವು ಕರೆಮಾಡಲು ಯಾವುದೇ ತೊಂದರೆ ಉಂಟಾಗುತ್ತಿಲ್ಲ ಎಂದಾದಲ್ಲಿ ಅಲ್ಲಿ ಹಿಡನ್ ಕ್ಯಾಮೆರಾ ಇಲ್ಲ ಎಂದಾಗಿದೆ.

ಹಿಡನ್ ಕ್ಯಾಮೆರಾ ಡಿಟೆಕ್ಟರ್ ಅಪ್ಲಿಕೇಶನ್

ಹಿಡನ್ ಕ್ಯಾಮೆರಾ ಡಿಟೆಕ್ಟರ್ ಅಪ್ಲಿಕೇಶನ್

ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಇದರಿಂದ ಹಿಡನ್ ಕ್ಯಾಮೆರಾ ಇರುವುದು ಪತ್ತೆಯಾಗುತ್ತದೆ. ಕ್ಯಾಮೆರಾ ಡಿಟೆಕ್ಟರ್ ಡಿವೈಸ್ ಸುತ್ತ ಇರುವ ಅಯಸ್ಕಾಂತೀಯ ಚಟುವಟಿಕೆಗಳನ್ನು ವಿಶ್ಲೇಷಣೆ ಮಾಡುತ್ತದೆ.ಕ್ಯಾಮೆರಾ ಚಟುವಟಿಕೆಗೆ ಸಮನಾಗಿ ಅಯಸ್ಕಾಂತೀಯ ಚಟುವಟಿಕೆ ಇದೆ ಎಂದಾದಲ್ಲಿ ಅಪ್ಲಿಕೇಶನ್ ಎಚ್ಚೆತ್ತುಕೊಳ್ಳುತ್ತದೆ ಮತ್ತು ಅಲರಾಂ ಅನ್ನು ಸದ್ದು ಮಾಡುತ್ತದೆ.

ಡಿಟೆಕ್ಟ್ ಹಿಡನ್ ಕ್ಯಾಮೆರಾ ಅಪ್ಲಿಕೇಶನ್

ಡಿಟೆಕ್ಟ್ ಹಿಡನ್ ಕ್ಯಾಮೆರಾ ಅಪ್ಲಿಕೇಶನ್

ಡಿಟೆಕ್ಟ್ ಹಿಡನ್ ಕ್ಯಾಮೆರಾ ಪ್ರೊ ಅಪ್ಲಿಕೇಶನ್ ಬಳಕೆದಾರರಿಗೆ ಸಹಾಯ ಮಾಡಲಿದ್ದು ಅಜ್ಞಾತ ಸ್ಥಳಗಳಲ್ಲಿ ಇರುವ ಹಿಡನ್ ಕ್ಯಾಮೆರಾಗಳ ಪತ್ತೆಗೆ ಅನುಕೂಲವನ್ನು ಅನುಕೂಲಕರವಾಗಲಿದೆ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಆಪ್ ತೆರೆಯಿರಿ ಹಾಗೂ ಫ್ಲ್ಯಾಶ್‌ನ ಸೆಟ್ಟಿಂಗ್ಸ್‌ಗೆ ಹೋಗಿ, ಫ್ರಿಕ್ವೆನ್ಸಿ ಸ್ಕ್ಯಾನ್ ಮಾಡಿ ಮತ್ತು ಲೈಟಿಂಗ್ ಇಫೆಕ್ಟ್ಸ್ ಈ ಬೆಳಕನ್ನು ಪತ್ತೆಹಚ್ಚುತ್ತದೆ.

ಸೆಟ್ಟಿಂಗ್ ಅನ್ನು ನೀವು ಪೂರ್ಣಗೊಳಿಸಿದ ನಂತರ, ಬಳಕೆದಾರರು ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ, ಕ್ಯಾಮೆರಾ ಸ್ಕ್ರೀನ್ ಗಮನಿಸಿ ನಂತರ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಕಂಡುಕೊಳ್ಳಿ.

ಗ್ಲೈಂಟ್ ಫೈಂಡರ್ ಕ್ಯಾಮೆರಾ ಡಿಟೆಕ್ಟರ್

ಗ್ಲೈಂಟ್ ಫೈಂಡರ್ ಕ್ಯಾಮೆರಾ ಡಿಟೆಕ್ಟರ್

ಗೂಗಲ್ ಪ್ಲೇನಲ್ಲಿರುವ ಗ್ಲೈಂಟ್ ಫೈಂಡರ್ ಅಪ್ಲಿಕೇಶನ್ ಕ್ಯಾಮೆರಾ ಫ್ಲ್ಯಾಶ್‌ನ ರೆಟ್ರೊ - ರಿಫ್ಲೆಕ್ಶನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಬಳಕೆದಾರರಿಗೆ ಕ್ಯಾಮೆರಾದ ಕ್ಷೇತ್ರ ವೀಕ್ಷಣೆಯಲ್ಲಿರುವ ಹೊಳೆಯುವ ವಸ್ತುವನ್ನು ಗುರುತಿಸಲು ನೆರವು ನೀಡುತ್ತದೆ.

Best Mobiles in India

English summary
we at GIZBOT have come up with ways to detect all the hidden cameras in a trial room or wherever you may go.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X