ಶಿಯೋಮಿ ಗ್ರಾಹಕರಿಗೆ ಶಾಕ್‌; ನೀವು ಈ ಸ್ಮಾರ್ಟ್‌ಫೋನ್‌ ಬಳಸ್ತೀರಾ?

|

ಭಾರತದಲ್ಲಿ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ 5G ನೆಟ್‌ವರ್ಕ್‌ ಪ್ರಾರಂಭವಾಗಿದ್ದು, ಅದರಲ್ಲಿ ಜಿಯೋ ಟೆಲಿಕಾಂ ಹೆಚ್ಚಿನ ನಗರಗಳಲ್ಲಿ ವ್ಯಾಪಿಸಿದೆ. ಜಿಯೋ ಟ್ರೂ 5G ನೆಟ್‌ವರ್ಕ್‌ ಸುಮಾರು 133 ನಗರಗಳಲ್ಲಿ ಲೈವ್‌ ಆಗಿದೆ. ಸ್ಯಾಮ್‌ಸಂಗ್, ಶಿಯೋಮಿ, ರೆಡ್ಮಿ, ಪೊಕೊ, ವಿವೋ, ಆಪಲ್‌ ಸಂಸ್ಥೆಯ ಕೆಲವು ಫೋನ್‌ಗಳು 5G ಸಪೋರ್ಟ್‌ ಪಡೆದಿವೆ. ಆದರೆ, ಶಿಯೋಮಿಯ ಈ ಸ್ಮಾರ್ಟ್‌ಫೋನ್‌ಗಳು 5G ಸಪೋರ್ಟ್‌ ಮಾಡುವುದಿಲ್ಲ.

ಜಿಯೋ ಟ್ರೂ 5G

ಹೌದು, ಜಿಯೋ ಸಂಸ್ಥೆಯು ತನ್ನ ಜಿಯೋ ಟ್ರೂ 5G ನೆಟ್‌ವರ್ಕ್‌ ಅನ್ನು ವಿಸ್ತರಿಸುತ್ತಾ ಮುನ್ನಡೆದಿದೆ. ಅನೇಕ 5G ಸ್ಮಾರ್ಟ್‌ಫೋನ್‌ಗಳು ಜಿಯೋ ಟ್ರೂ 5G ಸಪೋರ್ಟ್‌ ಪಡೆದಿವೆ. ಅದೇ ರೀತಿ ಭಾರತದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ ಹಲವು 5G ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ಪರಿಚಯಿಸಿದೆ. ಆದರೆ ಶಿಯೋಮಿಯ ಎರಡು ಜನಪ್ರಿಯ 5G ಸ್ಮಾರ್ಟ್‌ಫೋನ್‌ಗಳು ಜಿಯೋ ಟ್ರೂ 5G SA ಗೆ ಬೆಂಬಲ ಪಡೆದಿಲ್ಲ.!

ಈ ಎರಡು ಫೋನ್‌ಗಳು ಜಿಯೋ ಟ್ರೂ 5G SA ಸಪೋರ್ಟ್ ಮಾಡುವುದಿಲ್ಲ

ಈ ಎರಡು ಫೋನ್‌ಗಳು ಜಿಯೋ ಟ್ರೂ 5G SA ಸಪೋರ್ಟ್ ಮಾಡುವುದಿಲ್ಲ

ಜಿಯೋ ಟ್ರೂ 5G SA ನೆಟ್‌ವರ್ಕ್‌ಗೆ ಶಿಯೋಮಿ ಸಂಸ್ಥೆಯ ಈ ಕೆಳಗಿನ ಎರಡು ಪ್ರೀಮಿಯಂ ಫೋನ್‌ಗಳು ಸಪೋರ್ಟ್ ನೀಡುವುದಿಲ್ಲ.
* ಶಿಯೋಮಿ ಮಿ 10 (Xiaomi Mi 10)
* ಶಿಯೋಮಿ ಮಿ 10i (Xiaomi Mi 10i)

ಜಿಯೋ ಟ್ರೂ 5G SA ನೆಟ್‌ವರ್ಕ್‌ಗೆ ಸಪೋರ್ಟ್‌ ಪಡೆದ ಶಿಯೋಮಿ 5G ಫೋನ್‌ಗಳು

ಜಿಯೋ ಟ್ರೂ 5G SA ನೆಟ್‌ವರ್ಕ್‌ಗೆ ಸಪೋರ್ಟ್‌ ಪಡೆದ ಶಿಯೋಮಿ 5G ಫೋನ್‌ಗಳು

ಜಿಯೋ ಟ್ರೂ 5G SA ನೆಟ್‌ವರ್ಕ್‌ ಅನ್ನು ಬೆಂಬಲಿಸುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳು: ಮಿ 11 ಅಲ್ಟ್ರಾ 5G, ಶಿಯೋಮಿ 12 ಪ್ರೊ 5G, ಶಿಯೋಮಿ 11T ಪ್ರೊ 5G, ರೆಡ್ಮಿ ನೋಟ್ 11 ಪ್ರೊ 5G, ಶಿಯೋಮಿ 11 ಲೈಟ್‌ NE 5G, ರೆಡ್ಮಿ ನೋಟ್ 11T 5G, ರೆಡ್ಮಿ ನೋಟ್ 15, ರೆಡ್ಮಿ ನೋಟ್ 15, ಮಿ 11X 5G, ಮಿ 11X ಪ್ರೊ 5G, ರೆಡ್ಮಿ K50i 5G, ಶಿಯೋಮಿ 11i 5G ಮತ್ತು ಶಿಯೋಮಿ 11i ಹೈಪರ್‌ಚಾರ್ಜ್ 5G.

ಜಿಯೋ 5G ಡೇಟಾ ಪ್ಲ್ಯಾನ್‌ಗಳ ಮಾಹಿತಿ

ಜಿಯೋ 5G ಡೇಟಾ ಪ್ಲ್ಯಾನ್‌ಗಳ ಮಾಹಿತಿ

ಜಿಯೋ 5G ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239 ರೂ. ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್‌ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯ ಇಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5G ಅಪ್‌ಗ್ರೇಡ್‌ ಪ್ರಿಪೇಯ್ಡ್ ಯೋಜನೆ ಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61ರೂ. ಪ್ಲ್ಯಾನ್ ಆಗಿದ್ದು, ಇದು 6GB ಡೇಟಾ ಪ್ರಯೋಜನ ಪಡೆದಿದೆ.

ನಿರ್ವಹಿಸುತ್ತದೆ

ಗ್ರಾಹಕರು ತಮ್ಮ ಚಾಲ್ತಿ ಇರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ 61ರೂ. ಪ್ಲ್ಯಾನ್‌ ಸಕ್ರಿಯವಾಗಿರುತ್ತದೆ. ಜಿಯೋ 119ರೂ, ಜಿಯೋ 149ರೂ, ಜಿಯೋ 179ರೂ, ಜಿಯೋ 199ರೂ ಅಥವಾ ಜಿಯೋ 209ರೂ. ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್‌ ರೀಚಾರ್ಜ್ ಮಾಡಿರುವ ಗ್ರಾಹಕರಿಗೆ ಈ 5G ಅಪ್‌ಗ್ರೇಡ್‌ ಡೇಟಾ ಪ್ಲಾನ್ ಕಾರ್ಯ ನಿರ್ವಹಿಸುತ್ತದೆ. ಆದರೆ, ಗ್ರಾಹಕರು ಜಿಯೋ 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸದಿದ್ದರೆ, ಈ ಪ್ಲ್ಯಾನ್ ಉಪಯುಕ್ತವಾಗದು.

Best Mobiles in India

English summary
These Xiaomi 5G smartphones which do not support Jio standalone 5G network. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X