ಐಪಿಎಲ್‌ 2021: ಜಿಯೋ ಟೆಲಿಕಾಂನಿಂದ ಬಳಕೆದಾರರಿಗೆ ವಿಶೇಷ ಆಫರ್‌!

|

ಇದು ವರ್ಷದ ಕ್ರಿಕೆಟ್ ಸಮಯ. ಅತ್ಯಂತ ಜನಪ್ರಿಯ ಟ್ವೆಂಟಿ-20 ಪಂದ್ಯಾವಳಿಯಲ್ಲಿ ತಮ್ಮ ನೆಚ್ಚಿನ ತಂಡಗಳು ಮತ್ತು ಆಟಗಾರರ ಪ್ರದರ್ಶನವನ್ನು ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಅನುಭವಿಸಬಹುದು. ಈ ಬಾರಿ ಪಂದ್ಯಾವಳಿ ಏಪ್ರಿಲ್ 9 ಶುಕ್ರವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ರೋಮಾಂಚಕ ವಿಶೇಷ ಸವಾಲಿನ ಸಮಯದಲ್ಲಿ - ಸಂತೋಷದೊಂದಿಗೆ ಕ್ರಿಕೆಟ್‌ನ ಅದಮ್ಯ ಮನೋಭಾವವನ್ನು ಆಚರಿಸಬೇಕು.

ಜಿಯೋ

ಈ ನಿಟ್ಟಿನಲ್ಲಿ, ಜಿಯೋ - ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಮತ್ತು ಡಿಜಿಟಲೀಕರಣ ಚಾಂಪಿಯನ್ - ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಲು ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಈ ಆಚರಣೆಯ ಭಾಗವಾಗುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ.
ಜಿಯೋ ಬದ್ಧತೆಯ ಭಾಗವಾಗಿ, ಕ್ರೀಡೆ ಸಮಯದಲ್ಲಿ ಜಿಯೋ ಅಭಿಮಾನಿಗಳು ಮತ್ತು ಜಿಯೋ ಬಳಕೆದಾರರಿಗಾಗಿ ಅನೇಕ ಉಪಕ್ರಮಗಳನ್ನು ರೂಪಿಸುತ್ತಿದೆ.

ಜಿಯೋ

A. ಈ ಐಪಿಎಲ್‌ನಲ್ಲಿ ಎಲ್ಲಾ 8 ತಂಡಗಳೊಂದಿಗೆ ಕಾಣಿಸಿಕೊಳ್ಳುವ ಏಕೈಕ ಬ್ರಾಂಡ್ ಆಗಿ ಜಿಯೋ ಮುಂದುವರಿಯುತ್ತದೆ: ಐಪಿಎಲ್ 2021 ರಲ್ಲಿ ಜಿಯೋ ಎಲ್ಲಾ ಎಂಟು ಫ್ರಾಂಚೈಸಿಗಳ ಹೆಮ್ಮೆಯ ಪ್ರಾಯೋಜಕರಾಗಿದ್ದಾರೆ. ಜಿಯೋ ಭಾರತೀಯರಿಗಾಗಿ, ಭಾರತೀಯರೇ ನಿರ್ಮಿಸಿರುವುದು ಮತ್ತು ಆದ್ದರಿಂದ ಜಿಯೋ ಬ್ರಾಂಡ್ ಸ್ಟ್ರಾಟಜಿ ಪ್ರತಿ ನಗರ ಮತ್ತು ರಾಜ್ಯದಾದ್ಯಂತ ಹಬ್ಬಿಕೊಂಡಿದೆ.

ಜಿಯೋ

B. ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆಯಲ್ಲಿ ಜಿಯೋ ಕ್ರಿಕೆಟ್ ಯೋಜನೆಗಳು ಬಳಕೆದಾರರಿಗೆ 100% ಲಾಭವನ್ನು ನೀಡಲಿದೆ: ಐಪಿಎಲ್ ವಿಷಯಕ್ಕೆ ಸಂಬಂಧಿಸಿದಂತೆ, ಜಿಯೋ ಭಾರತದ ಬೇರೆ ಎಲ್ಲಾ ಆಪರೇಟರ್‌ಗಳಿಗಿಂತ ಉತ್ತಮ ಪ್ರಯೋಜನಗಳನ್ನು ನೀಡುತ್ತಲೇ ಇದೆ. ಎಲ್ಲಾ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ಐಪಿಎಲ್ ಎಂಬೆಡೆಡ್ ಅವಕಾಶದೊಂದಿಗೆ ಬರುತ್ತವೆ.

ಗೇಮಿಂಗ್

C. ಈ ಐಪಿಎಲ್ ಸೀಸನ್‌ನಲ್ಲಿ ಹೊಸ ಅವತಾರ ಮತ್ತು ಅಟ್ರಾಕ್ಟಿವ್ ರಿವಾರ್ಡ್‌ಗಳಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್: ಕ್ರಿಕೆಟಿಂಗ್ ಉತ್ಸಾಹವನ್ನು ಮತ್ತಷ್ಟು ಆಚರಿಸಲು, ಜಿಯೋನ ಲೈವ್ ಗೇಮಿಂಗ್ ಉಪಕ್ರಮ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಸ್ಪರ್ಧಿಸುವಾಗ ಮನರಂಜನೆಯ ಹೊಸ ಭಾಗವನ್ನು ತನ್ನ ಅಭಿಮಾನಿಗಳಿಗೆ ಪ್ರಸ್ತುತಪಡಿಸುತ್ತದೆ. ಸಂವಾದಾತ್ಮಕ ಆಟವು ಎಲ್ಲಾ ಬಳಕೆದಾರರಿಗೆ (ಜಿಯೋ ಅಥವಾ ಜಿಯೋ ಅಲ್ಲದ) ಉಚಿತವಾಗಿ ಲಭ್ಯವಿದೆ ಮತ್ತು ದೊಡ್ಡದನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ಕ್ರಿಕೆಟ್ ಉತ್ಸಾಹಿಗಳು ಆಟದ ವಿಶೇಷ ಚಾಟ್ ಬಾರ್‌ನಲ್ಲಿ ಎಮೋಜಿ ಸ್ಟಿಕ್ಕರ್‌ಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕ್ರಿಕೆಟ್ ಆಧಾರಿತ ರಸಪ್ರಶ್ನೆಗಳೊಂದಿಗೆ ಕೆರಳಿಸಬಹುದು. ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಮೈಜಿಯೊ ಆ್ಯಪ್ ಮೂಲಕ ಪ್ರವೇಶಿಸಬಹುದು.

ಉಚಿತವಾಗಿ

D. ಜಿಯೋಫೋನ್ ಬಳಕೆದಾರರಿಗಾಗಿ JIO ಕ್ರಿಕೆಟ್ ಅಪ್ಲಿಕೇಶನ್ ಪ್ರಾರಂಭಿಸಲಾಗಿದೆ: ಜಿಯೋಫೋನ್ ಬಳಕೆದಾರರು ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನೊಂದಿಗೆ ಆಚರಣೆಗೆ ಸೇರಬಹುದು. ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಅಪ್ಲಿಕೇಶನ್ ಉಚಿತವಾಗಿ ಲಭ್ಯವಿದೆ. ಬಳಕೆದಾರರು ಸ್ಕೋರ್ ನವೀಕರಣಗಳನ್ನು ವೀಕ್ಷಿಸಬಹುದು, ರಸಪ್ರಶ್ನೆಗಳಲ್ಲಿ ಭಾಗವಹಿಸಬಹುದು ಮತ್ತು ಬಹುಮಾನಗಳನ್ನು ಗೆಲ್ಲಬಹುದು.
ಇತರೆ ಆಪರೇಟರ್ಸ್ ಗಳು ತಮ್ಮ ಫೀಚರ್ ಫೋನ್‌ಗಳನ್ನು ಕೇವಲ ಸ್ಕೋರ್‌ಗಳನ್ನು ಒದಗಿಸುವುದಕ್ಕಾಗಿ ದಿನಕ್ಕೆ 5 ರೂ. ವಿಧಿಸುತ್ತಾರೆ.

ಗೆಲ್ಲಬಹುದು

E. ಪ್ರತಿ ದಿನ ಜಿಯೋ ಬಳಕೆದಾರರಿಗೆ ಸ್ಪರ್ಧೆಗಳು ಮತ್ತು ಐಪಿಎಲ್ ಮರ್ಚಂಡೈಜ್ ಗೆಲ್ಲುವ ಅವಕಾಶ: ಜಿಯೋ ಬಳಕೆದಾರರು ಅತ್ಯಾಕರ್ಷಕ ವಿಷಯಗಳಲ್ಲಿ ಗವಹಿಸಬಹುದು ಮತ್ತು ಪ್ರತಿದಿನ ಮರ್ಚಂಡೈಜ್‌ ಗಳನ್ನು ಗೆಲ್ಲಬಹುದು. ಪ್ರತ್ಯೇಕವಾಗಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಮತ್ತು ಚೆಂಡುಗಳು, ತಂಡದ ಜರ್ಸಿ ಸೇರಿದಂತೆ ಹಲವು ವಸ್ತುಗಳು ಜಿಯೋ ಬಳಕೆದಾರರಿಗೆ ಲಭ್ಯವಾಗಲಿದೆ.

ಅನುವು

F. ಜಿಯೋ ಬಳಕೆದಾರರಿಗಾಗಿ ಎಲ್ಲಾ ತಂಡಗಳೊಂದಿಗೆ ಭೇಟಿ ಮತ್ತು ಶುಭಾಶಯ ಕೋರುವ ಅವಾಕಶ : ಜಿಯೋ ಬಳಕೆದಾರರಿಗೆ ಎಲ್ಲಾ 8 ತಂಡಗಳ ಆಟಗಾರರನ್ನು ಭೇಟಿ ಮಾಡಲು ಮತ್ತು ಕಾಫಿ ಸೆಷನ್‌ನಲ್ಲಿ ಶುಭಾಶಯ ಕೋರಲು ಅವಕಾಶ ಸಿಗಲಿದೆ. ಅಂತಹ ವಿಶೇಷ ಪ್ರಯೋಜನವು ಬಳಕೆದಾರರಿಗೆ ಬಲು ಸನಿಹಕೆ ಬರಲು ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗರೊಂದಿಗೆ ಹತ್ತಿರವಾಗಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Jio Celebrating This Cricket Season With Multiple Initiatives For Fans And Jio Users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X