ಜಿಯೋ ಫೋನ್ 5G ಸ್ಮಾರ್ಟ್‌ಫೋನ್‌ ಫೀಚರ್ಸ್‌ ಲೀಕ್‌!..ಯಾವಾಗ ಲಾಂಚ್‌ ಗೊತ್ತಾ?

|

ಕಳೆದ ವರ್ಷ ಜುಲೈನಲ್ಲಿ ನಡೆದ ರಿಲಯನ್ಸ್ ನ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಸ್ಥೆಯು ಭಾರತದಲ್ಲಿ ಜಿಯೋ ಫೋನ್ 5G (Jio Phone 5G) ಅನ್ನು ಬಿಡುಗಡೆ ಮಾಡುವುದಾಗಿ ಎಂದು ರಿಲಯನ್ಸ್ ಘೋಷಿಸಿತು. ಆದರೆ ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ನಲ್ಲಿ ಫೋನ್ ಲಾಂಚ್ ಆಗಲಿದೆ ಎಂದು ನಿರೀಕ್ಷಿಸುತ್ತಿದ್ದರೂ ಅದು ಆಗಲಿಲ್ಲ. ಇನ್ನು ಜಿಯೋ ಅಕ್ಟೋಬರ್‌ನಲ್ಲಿ 5G ಸೇವೆಯು ಪ್ರಾರಂಭಿಸುವ ನಿರೀಕ್ಷೆಯಿರುವುದರಿಂದ, ಮುಂದಿನ ವಾರಗಳಲ್ಲಿ ಜಿಯೋ ಫೋನ್ 5G ಅನಾವರಣ ಮಾಡಬಹುದು.

ಟೈಮ್‌ಲೈನ್‌

ಹೌದು, ಜಿಯೋ ಸಂಸ್ಥೆಯು ಜಿಯೋ ಫೋನ್ 5G (Jio Phone 5G) ಅನ್ನು ಪರಿಚಯಿಸಲಿದ್ದು, ಆದರೆ ಲಾಂಚ್‌ ಟೈಮ್‌ಲೈನ್‌ ಇನ್ನು ಅಧಿಕೃತವಾಗಿಲ್ಲ. ಆದರೆ ನೂತನ ಜಿಯೋ ಫೋನ್ 5G (Jio Phone 5G) ಫೋನ್ ಫೀಚರ್ಸ್‌ ಇದೀಗ ಲೀಕ್ ಆಗಿವೆ. 91ಮೊಬೈಲ್ಸ್‌ ತನ್ನ ವರದಿಯಲ್ಲಿ ಮುಂಬರುವ ಜಿಯೋ 5G ಫೋನಿನ ಫೀಚರ್ಸ್‌ಗಳ ಬಗ್ಗೆ ಬಹಿರಂಗಪಡಿಸಿದೆ. ಹಾಗೆಯೇ ಜಿಯೋ ತನ್ನ ಮುಂಬರುವ 5G ಸ್ಮಾರ್ಟ್‌ಫೋನ್ ಅನ್ನು 12,000ರೂ. ಕ್ಕಿಂತ ಕಡಿಮೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಫೋನ್

ವರದಿಯ ಪ್ರಕಾರ, ಜಿಯೋ ಫೋನ್ 5G 'ಗಂಗಾ' ಎಂಬ ಕೋಡ್‌ ನೇಮ್‌ ಹೊಂದಿದ್ದು, 'LS1654QB5' ಮಾದರಿ ಸಂಖ್ಯೆಯೊಂದಿಗೆ ಲಾಂಚ್ ಆಗಲಿದೆ. ಜಿಯೋ ಫೋನ್ 5G ಸ್ಮಾರ್ಟ್‌ಫೋನ್‌ 90Hz ಸ್ಕ್ರೀನ್ ರೀಫ್ರೇಶ್ ರೇಟ್‌ ಅನ್ನು ಹೊಂದಿರಲಿದೆ. ಅಲ್ಲದೇ ಈ ಫೋನ್ 6.5 ಇಂಚಿನ ಹೆಚ್‌ಡಿ+ LCD ಸ್ಕ್ರೀನ್ ಅನ್ನು ಹೊಂದಿರುತ್ತದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್‌ ಎಂಟ್ರಿ ಲೆವೆಲ್ 5G SoC ಆಗಿದೆ. ಇದರೊಂದಿಗೆ ಈ ಫೋನ್ 4GB RAM ಮತ್ತು 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದಿರಲಿದೆ.

ಕ್ಯಾಮೆರಾವು

ಇದಲ್ಲದೆ, ಈ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದೆ. ಮುಖ್ಯ ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಹೊಂದಿರಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದೆ. ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಇರಲಿದೆ. ಹಾಗೆಯೇ ಈ ಫೋನ್ 18W ವೇಗದ ಚಾರ್ಜಿಂಗ್ ಸಪೋರ್ಟ್‌ ನೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಎಂದು ಹೇಳಲಾಗುತ್ತದೆ.

ಕಾರ್ಯನಿರ್ವಹಿಸಲಿದೆ

ಇನ್ನು ಈ ಫೋನ್ 4GB RAM ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿರಲಿದ್ದು, ಹಾಗೆಯೇ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್‌ (Android) 12 ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕನೆಕ್ಟಿಟಿವಿಗಾಗಿ ವೈ-ಫೈ 802.11 a/b/g/n, ಬ್ಲೂಟೂತ್‌ 5.1 ಆಯ್ಕೆಗಳು ಇರಲಿವೆ.

ಜಿಯೋಫೋನ್‌ ನೆಕ್ಸ್ಟ್ ಫೋನಿನ ಫೀಚರ್ಸ್‌:

ಜಿಯೋಫೋನ್‌ ನೆಕ್ಸ್ಟ್ ಫೋನಿನ ಫೀಚರ್ಸ್‌:

ಜಿಯೋಫೋನ್‌ ನೆಕ್ಸ್ಟ್ ಫೋನ್ 5.45 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಅದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪರದೆಯಿಂದ ರಕ್ಷಿಸಲಾಗಿದೆ. ಹಾಗೆಯೇ ಇದು 2GB RAM ಮತ್ತು 32GB ಅಂತರ್ನಿರ್ಮಿತ ಮೆಮೊರಿಯೊಂದಿಗೆ ಬರುತ್ತದೆ ಮತ್ತು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ QM215 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್‌ನ ಮೆಮೊರಿಯನ್ನು 512 GB ವರೆಗೆ ಹೆಚ್ಚಿಸಬಹುದು. ಈ ಫೋನ್ 'ಪ್ರಗತಿ ಓಎಸ್' ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಯೋ ಮತ್ತು ಗೂಗಲ್ ಅಪ್ಲಿಕೇಶನ್‌ಗಳು ಸಹ ಇದರಲ್ಲಿ ಪೂರ್ವ ಲೋಡ್ ಆಗಿವೆ.

ಪಿಕ್ಸೆಲ್

ಹಾಗೆಯೇ ಜಿಯೋಫೋನ್‌ ನೆಕ್ಸ್ಟ್ ಫೋನ್ ಡ್ಯುಯಲ್ ಸಿಮ್ ಅನ್ನು ನೀಡುತ್ತದೆ. ಜೊತೆಗೆ ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದ್ದು, ಮುಂಭಾಗದ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಒಳಗೊಂಡಿದೆ. ಈ ಫೋನ್ 3500 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಮತ್ತು OTG ಬೆಂಬಲವನ್ನು ಒಳಗೊಂಡಿದೆ.

Best Mobiles in India

English summary
The Jio Phone 5G is tipped to feature a 6.5-inch HD+ LCD screen with a 90Hz screen refresh rate.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X