ಜಿಯೋ ಫೋನ್‌ 5G ಬೆಲೆ ಎಷ್ಟಿರಲಿದೆ?..ಫೀಚರ್ಸ್‌ ಏನು?

|

5G ನೆಟವರ್ಕ್‌ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಭಾಕಿ ಇವೆ. ಮೊದಲ ಹಂತದಲ್ಲಿ, ದೇಶದ ವಿವಿಧ ಭಾಗಗಳಿಂದ 22 ನಗರಗಳು 5G ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆಯುತ್ತವೆ. ಈ ನಡುವೆ ಮಾರುಕಟ್ಟೆಯಲ್ಲಿ ನೂತನ 5G ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತ ಸಾಗಿವೆ. ಇತ್ತ ಏರ್‌ಟೆಲ್‌, ವಿ ಹಾಗೂ ಜಿಯೋ ಟೆಲಿಕಾಂಗಳು 5G ಸೇವೆ ಶುರು ಮಾಡಲು ಸಜ್ಜಾಗುತ್ತಿವೆ. ಆ ಪೈಕಿ ಜಿಯೋ ನೂತನ 5G ಸ್ಮಾರ್ಟ್‌ಫೋನ್‌ ಪರಿಚಯಿಸುವತ್ತಲೂ ಕಾರ್ಯನಿರ್ವಹಿಸುತ್ತಿದೆ.

ಆರಂಭಿಸಲಿದೆ

ಹೌದು, ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿರುವ ಜಿಯೋ, ಅಕ್ಟೋಬರ್‌ನಲ್ಲಿ 5G ಆರಂಭಿಸಲಿದೆ. ಹಾಗೆಯೇ ಬಜೆಟ್‌ ದರದಲ್ಲಿ 5G ಸ್ಮಾರ್ಟ್‌ಫೋನ್‌ ಪರಿಚಯಿಸುವ ಸೂಚನೆಯನ್ನು ನೀಡಿದೆ. ಕಳೆದ ವರ್ಷ ಜಿಯೋ ಟೆಲಿಕಾಂ ಬಿಡುಗಡೆ ಮಾಡಿದ ಜಿಯೋಫೋನ್‌ ನೆಕ್ಸ್ಟ್ (JioPhone Next 4G) ತನ್ನ ವರ್ಗದಲ್ಲೇ ಗ್ರಾಹಕರನ್ನು ಆಕರ್ಷಿಸಿದೆ. ಅದೇ ರೀತಿ ಜಿಯೋ ಲಾಂಚ್ ಮಾಡಲಿರುವ ಹೊಸ 5G ಸ್ಮಾರ್ಟ್‌ಫೋನ್‌ ಸಹ ಗ್ರಾಹಕರಲ್ಲಿ ಕೆಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸ್ಮಾರ್ಟ್‌ಫೋನ್‌

ಜಿಯೋ ಸಂಸ್ಥೆಯು ತನ್ನ ನೂತನ 5G ಸ್ಮಾರ್ಟ್‌ಫೋನ್‌ ಅನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಿದೆ ಎನ್ನಲಾಗಿದೆ. ಜಿಯೋ ತನ್ನ ಮುಂಬರುವ 5G ಸ್ಮಾರ್ಟ್‌ಫೋನ್ ಅನ್ನು 12,000ರೂ. ಕ್ಕಿಂತ ಕಡಿಮೆ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೊಸ ಕೌಂಟರ್‌ಪಾಯಿಂಟ್ ಸಂಶೋಧನಾ ವರದಿ ಬಹಿರಂಗಪಡಿಸಿದೆ. ಆದರೆ ಕಂಪನಿಯು ನೂತನ ಫೋನಿನ ಬೆಲೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ.

ನಿರೀಕ್ಷಿತ ಜಿಯೋ ಫೋನ್ 5G ಫೀಚರ್ಸ್‌:

ನಿರೀಕ್ಷಿತ ಜಿಯೋ ಫೋನ್ 5G ಫೀಚರ್ಸ್‌:

ಜಿಯೋ 5G ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಮತ್ತು ಆಂಟಿಫಿಂಗರ್‌ಪ್ರಿಂಟ್ ಹೊಂದಿರುವ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಜಿಯೋ ಕಂಪೆನಿ ತನ್ನ ಜಿಯೋ 5G ಫೋನ್‌ಗಾಗಿ ಕ್ವಾಲ್ಕಾಮ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 400 ಸರಣಿಯ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ವಿಸ್ತರಿಸುವುದಕ್ಕೆ

ಇನ್ನು ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ಯ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಫೋನ್ 5G ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರುವ ಸಾದ್ಯತೆಯಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ.

ಜಿಯೋಫೋನ್‌ ನೆಕ್ಸ್ಟ್ ಫೋನಿನ ಫೀಚರ್ಸ್‌:

ಜಿಯೋಫೋನ್‌ ನೆಕ್ಸ್ಟ್ ಫೋನಿನ ಫೀಚರ್ಸ್‌:

ಜಿಯೋಫೋನ್‌ ನೆಕ್ಸ್ಟ್ ಫೋನ್ 5.45 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಅದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪರದೆಯಿಂದ ರಕ್ಷಿಸಲಾಗಿದೆ. ಹಾಗೆಯೇ ಇದು 2GB RAM ಮತ್ತು 32GB ಅಂತರ್ನಿರ್ಮಿತ ಮೆಮೊರಿಯೊಂದಿಗೆ ಬರುತ್ತದೆ ಮತ್ತು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ QM215 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್‌ನ ಮೆಮೊರಿಯನ್ನು 512 GB ವರೆಗೆ ಹೆಚ್ಚಿಸಬಹುದು. ಈ ಫೋನ್ 'ಪ್ರಗತಿ ಓಎಸ್' ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಯೋ ಮತ್ತು ಗೂಗಲ್ ಅಪ್ಲಿಕೇಶನ್‌ಗಳು ಸಹ ಇದರಲ್ಲಿ ಪೂರ್ವ ಲೋಡ್ ಆಗಿವೆ.

ಹಿಂಬದಿಯ

ಹಾಗೆಯೇ ಜಿಯೋಫೋನ್‌ ನೆಕ್ಸ್ಟ್ ಫೋನ್ ಡ್ಯುಯಲ್ ಸಿಮ್ ಅನ್ನು ನೀಡುತ್ತದೆ. ಜೊತೆಗೆ ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದ್ದು, ಮುಂಭಾಗದ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಒಳಗೊಂಡಿದೆ. ಈ ಫೋನ್ 3500 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಮತ್ತು OTG ಬೆಂಬಲವನ್ನು ಒಳಗೊಂಡಿದೆ.

ಜಿಯೋದ 5G ಸೇವೆಯು ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಹೀಗೆ ಚೆಕ್ ಮಾಡಿ:

ಜಿಯೋದ 5G ಸೇವೆಯು ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಹೀಗೆ ಚೆಕ್ ಮಾಡಿ:

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಆಪ್‌ ತೆರೆಯಿರಿ
ಹಂತ 2: 'Wi-Fi and Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಈಗ 'SIM and Network' ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಈಗ ನೀವು ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು 'Preferred network type' ಆಯ್ಕೆಯ ಅಡಿಯಲ್ಲಿ ಕಾಣಬಹುದಾಗಿದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.

Best Mobiles in India

English summary
Jio Phone 5G Price in India Could be Under Rs 12,000: Report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X