ಬಿಡುಗಡೆ ಆಯ್ತು ಮೊದಲ ಜಿಯೋ ಪೋನ್: ಹೇಗಿದೆ.?

ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಫೋನ್ ಲಾಂಚ್ ಆಗಿದೆ. ಅದುವೇ ಬಿಟಾ ಆವೃತ್ತಿಯಾಗಿದ್ದು, ಕೆಲವೇ ಕೆಲವು ಮಂದಿಗೆ ಮಾತ್ರ ಈ ಫೋನ್ ಬಳಕೆ ಮಾಡುವ ಅವಕಾಶವು ದೊರೆಯಲಿದೆ.

|

ಕೊಟ್ಟ ಮಾತಿನಂತೆ ಜಿಯೋ ಫೋನ್ ಮೊದಲ ಆವೃತ್ತಿ ಬಿಡುಗಡೆಯಾಗಿದ್ದು, ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಫೋನ್ ಲಾಂಚ್ ಆಗಿದೆ. ಅದುವೇ ಬಿಟಾ ಆವೃತ್ತಿಯಾಗಿದ್ದು, ಕೆಲವೇ ಕೆಲವು ಮಂದಿಗೆ ಮಾತ್ರ ಈ ಫೋನ್ ಬಳಕೆ ಮಾಡುವ ಅವಕಾಶವು ದೊರೆಯಲಿದೆ.

ಬಿಡುಗಡೆ ಆಯ್ತು ಮೊದಲ ಜಿಯೋ ಪೋನ್: ಹೇಗಿದೆ.?

ಓದಿರಿ: ಅಧಿಕೃತವಾಗಿ ಜಿಯೋ ಫೋನ್ ಬುಕಿಂಗ್ ಶುರು: ಬುಕ್ ಮಾಡಲು ಬೇಕಾದ ದಾಖಲಾತಿಗಳ ಬಗ್ಗೆ ಫುಲ್ ಡಿಟೈಲ್..!

ಜಿಯೋ ಫೋನ್ ಬಿಡುಗಡೆಯಾಗಿದ್ದರೂ ಸಹ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಫೋನಿನ ಕಾರ್ಯವೈಕರಿಯೂ ಹೇಗಿದೆ ಎಂಬುದನ್ನು ತಿಳಿಯಲು ಮತ್ತು ಫೋನಿನ ಗುಣಮಟ್ಟದ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಪಡೆಯುವುದಾಗಿದೆ. ಸಾಮಾನ್ಯ ಜನರು ಆಗಸ್ಟ್ 24 ರಿಂದ ಈ ಫೋನ್ ಅನ್ನು ಬುಕ್ ಮಾಡಬಹುದಾಗಿದೆ.

ಬಿಟಾ ಆವೃತ್ತಿ ಪಡೆಯುವುದೇಗೆ?

ಬಿಟಾ ಆವೃತ್ತಿ ಪಡೆಯುವುದೇಗೆ?

ಈಗಾಗಲೇ ಜಿಯೋ ತನ್ನ ನೂತನ 4G VoLET ಫೀಚರ್ ಫೋನಿನ ಬಿಟಾ ಆವೃತ್ತಿಯನ್ನು ಪರೀಕ್ಷಿಸುವ ಸಲುವಾಗಿ ತನ್ನ ಕಂಪನಿಯ ಆಯ್ದ ನೌಕರರು ಮತ್ತು ಗ್ರಾಹಕರನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆಲ್ಲಾ ಈ ಫೋನ್ ಅನ್ನು ಬಳಕೆಗೆ ನೀಡಲಿದೆ.

ಬಿಡುಗಡೆಯಾದರು ಮಾರುಕಟ್ಟೆಯಲ್ಲಿ ಇಲ್ಲ:

ಬಿಡುಗಡೆಯಾದರು ಮಾರುಕಟ್ಟೆಯಲ್ಲಿ ಇಲ್ಲ:

ಜಿಯೋ ಫೋನ್ ಆಗಸ್ಟ್ 15 ರಂದು ಬಿಡುಗಡೆ ಹೊಂದಿದರು ಸಹ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಮತ್ತು ನೀವು ಅದನ್ನು ಕೊಳ್ಳಲು ಸಾಧ್ಯವಿಲ್ಲ. ಕಾರಣ ಇದು ಬಿಟಾ ಆವೃತ್ತಿಯಾಗಿದ್ದು, ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ. ಇದು ಕೇವಲ ಕಂಪನಿ ಆಯ್ಕೆ ಮಾಡಿದ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ.

ಗ್ರಾಹಕರಿಗೆ ನೀಡುವ ಮೊದಲೇ ಪರೀಕ್ಷೆ:

ಗ್ರಾಹಕರಿಗೆ ನೀಡುವ ಮೊದಲೇ ಪರೀಕ್ಷೆ:

ರಿಲಯನ್ಸ್ ಕಂಪನಿಯೂ ಜಿಯೋ ಫೋನ್ ಅನ್ನು ಹೊಸ ಮಾದರಿಯಲ್ಲಿ ತಯಾರು ಮಾಡಿರುವ ಕಾರಣ ಇದನ್ನು ಗ್ರಾಹಕರಿಗೆ ನೀಡುವ ಮೊದಲ ಬಿಟಾ ಆವೃತ್ತಿಯನ್ನು ಬಿಡುಗಡೆ ಮಾಡಿ ಅನ್ನು ಪರೀಕ್ಷಿಸಲು ಮುಂದಾಗಿದೆ. ಇದರಲ್ಲಿ ಯಾವುದಾರು ತೊಂದರೆಗಳು ಕಾಣಿಸಿಕೊಂಡಲ್ಲಿ ಅದನ್ನು ಸರಿ ಪಡಿಸುವ ಕಾರ್ಯವನ್ನು ಮಾಡಲಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಸೆಪ್ಟೆಂಬರ್ ನಿಂದ ಗ್ರಾಹಕರಿಗೆ ಲಭ್ಯ:

ಸೆಪ್ಟೆಂಬರ್ ನಿಂದ ಗ್ರಾಹಕರಿಗೆ ಲಭ್ಯ:

ಜಿಯೋ ಫೋನ್ ಪರೀಕ್ಷೆ ನಡೆಸಿದ ನಂತರದಲ್ಲಿ ಜಿಯೋ ಫೋನುಕೊಳ್ಳಲು ರಿಜಿಸ್ಟರ್ ಆಗಿರುವ ಗ್ರಾಹಕರಿಗೆ ಫೋನ್ ಅನ್ನು ಸೆಪ್ಟೆಂಬರ್ ನಿಂದ ನೀಡಲಿದೆ. ಹಂತ ಹಂತವಾಗಿ ಗ್ರಾಹಕರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಕಾರ್ಯವು ನಡೆಯಲಿದೆ.

ಜಿಯೋ ಫೋನ್ ಸಾಮಾನ್ಯ ಫೋನಿನಂತಲ್ಲ:

ಜಿಯೋ ಫೋನ್ ಸಾಮಾನ್ಯ ಫೋನಿನಂತಲ್ಲ:

ಜಿಯೋ ಬಿಡುಗಡೆ ಮಾಡಿರುವ ಫೋನ್ ಸಾಮಾನ್ಯ ಫೋನಿನಂತಲ್ಲ. ಇದು ಫೀಚರ್ ಫೋನ್ ಮಾದರಿಯಲ್ಲಿದ್ದರೂ ಸಹ ಸ್ಮಾರ್ಟ್‌ಫೋನಿನಂತೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಅಲ್ಲದೇ ಮಲ್ಟಿಮಿಡಿಯಾ ಆಪ್ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಟಿವಿಯೊಂದಿಗೆ ಕೆನೆಕ್ಟ್ ಆಗಲು ಸಹ ಶಕ್ತವಾಗಿದೆ. ಹಾಗಾಗಿ ಈ ಫೋನಿನ ಪರೀಕ್ಷೆಯೂ ಜೋರಾಗಿ ನಡೆಯಲಿದೆ.

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇಯನ್ನುಹೊಂದಿದ್ದು, ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಅವಕಾಶ, ಟಾರ್ಚ್ ಲೈಟ್, FM ರೇಡಿಯೋ, ಸಿಂಗಲ್ ಸಿಮ್, 4G VoLTE ಸಫೋರ್ಟ್, ವಾಯ್ಸ್ ಕಮೆಂಡ್, ಪ್ರಾದೇಶಿಕ ಭಾಷೆಗಳಿಗೆ ಈ ಫೋನ್ ಸಫೋರ್ಟ್ ಮಾಡಲಿದೆ. ಒಟ್ಟಿನಲ್ಲಿ ಫೀಚರ್ ಫೋನಿನ ಮಾದರಿಯ ಸ್ಮಾರ್ಟ್‌ಫೋನ್ ಎನ್ನಬಹುದು.

ಜಿಯೋ ಫೋನ್ ಆಫರ್:

ಜಿಯೋ ಫೋನ್ ಆಫರ್:

ಇದೊಂದು ಎಂಟ್ರಿ ಲೆವೆಲ್ ಫೋನ್ ಆಗಿದ್ದು, ಈ ಫೋನ್ ಅನ್‌ಲಿಮಿಟೆಡ್ ವಾಯ್ಸ್ ಕರೆ, ಡೇಟಾ ಮತ್ತು ಮೇಸೆಜ್ ಮಾಡುವ ಅವಕಾಶವನ್ನು ನೀಡಲಿದೆ. ಇದಲ್ಲದೇ ಜಿಯೋ ಆಪ್ ಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ನಿತ್ಯ 500 MB ಡೇಟಾ ಹೈಸ್ಪಿಡಿನಲ್ಲಿ ದೊರೆಯಲಿದೆ. ಆ ನಂತರದಲ್ಲಿ ಕಡಿಮೆ ವೇಗದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
The first batch of JioPhone units will become available Tuesday, August 15 as beta trials of the 4G feature phone are scheduled to commence today. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X