ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ನೀವು ತಿಳಿಯಲೇಬೇಕಾದ ಸಂಗತಿಗಳು..!!

Written By:

ಉಚಿತ ಕೊಡುಗೆಯನ್ನು ನೀಡಲು ಸಮ್ಮರ್ ಸರ್ಪ್ರೈಸ್ ಆಫರ್ ನೀಡಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಸಮ್ಮರ್ ಸರ್ಪ್ರೈಸ್ ಆಫರ್‌ನಲ್ಲಿ ಗ್ರಾಹಕರಿಗೆ ದೊರೆಯುವ ಲಾಭಗಳೇನು, ಈ ಸೇವೆಯನ್ನು ಪಡೆಯಲು ಗ್ರಾಹಕರು ಪಾವತಿ ಮಾಡಬೇಕಾದ ಹಣವೆಷ್ಟು ಅಲ್ಲದೇ ಈ ಕೊಡುಗೆಯನ್ನು ಯಾವ ಗ್ರಾಹಕರು ಪಡೆಯಬಹುದು ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್: ನೀವು ತಿಳಿಯಲೇಬೇಕಾದ ಸಂಗತಿಗಳು..!!

ಓದಿರಿ: ಗೂಗಲ್ ನಿಂದ ತಿಂಗಳಿಗೆ 10GB ಡೇಟಾ: ಗೂಗಲ್ ಪ್ಲಾನ್ ಏನು..?

ಜಿಯೋ ತನ್ನ ಸೇವೆಗಳಿಗೆ ದರ ವಿಧಿಸುತ್ತಿದ್ದಂತೆ ಬೇರೆ ಕಂಪನಿಗಳು ಹೊಸ ಹೊಸ ಆಫರ್ ನೀಡಿಲು ಮುಂದಾದವು ಈ ಸಂದರ್ಭದಲ್ಲಿ ಜಿಯೋ ತನ್ನ ಬಹುಸಂಖ್ಯಾತ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎನ್ನುವ ಮಾತೊಂದು ಆರಂಭದಲ್ಲಿ ಕೇಳಿಬಂದಿತ್ತು, ಆದರೆ ಸದ್ಯ ಇದು ಸುಳ್ಳಲಾಗಿದ್ದು, 100 ಮಿಲಿಯನ್ ನಲ್ಲಿ ಜಿಯೋ ಗ್ರಾಹಕರಲ್ಲಿ 72 ಮಿಲಿಯನ್‌ಗೂ ಹೆಚ್ಚು ಮಂದಿ ಜಿಯೋ ಪ್ರೈಮ್ ಸದಸ್ಯರಾಗಿದ್ದಾರೆ. ಉಳಿದರುವ ಮಂದಿಯನ್ನು ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯುವಂತೆ ಮಾಡಲು ರಿಲಯನ್ಸ್ ಜಿಯೋ ಮತ್ತೆ ಮೂರು ತಿಂಗಳು ತನ್ನ ಸೇವೆಯನ್ನು ವಿಸ್ತರಿಸಿದೆ.

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆ ಲಾಭಗಳೇನು..?

ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆ ಲಾಭಗಳೇನು..?

ಹೊಸದಾಗಿ ನೀಡಿರುವ ಸಮ್ಮರ್ ಸರ್ಪ್ರೈಸ್ ಆಫರ್ ನಲ್ಲಿ ಜಿಯೋ ಗ್ರಾಹಕರು ಹ್ಯಾಪಿ ನ್ಯೂಯಿರ್ ಪ್ಲಾನ್‌ ಅನ್ನೇ ಮತ್ತೆ ಮೂರು ತಿಂಗಳ ಕಾಲ ಪಡೆಯಲಿದ್ದಾರೆ. ಅಂದರೆ ಪ್ರತಿ ನಿತ್ಯ 1GB ಡೇಟಾ, ಉಚಿತ ಕರೆ ಮಾಡುವ ಅವಕಾಶ ಮತ್ತು ಪ್ರತಿ ನಿತ್ಯ 100 SMS ಕಳುಹಿಸುವ ಅವಕಾಶ ಸೇರಿದಂತೆ ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಸಬಹುದಾಗಿದೆ.

ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆ ಬೆಲೆ ಎಷ್ಟು..?

ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆ ಬೆಲೆ ಎಷ್ಟು..?

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಪಡೆದುಕೊಳ್ಳಲು ಮೊದಲು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿದೆ, ಇದಾದ ನಂತರ 303 ರೂಗಳನ್ನು ಪಾವತಿ ಮಾಡಬೇಕಾಗಿದೆ. ಇಷ್ಟು ಹಣವನ್ನು ಪಾವತಿ ಮಾಡಿದರೆ ಜೂನ್ 30 ರವರೆಗೂ ಜಿಯೋ ಉಚಿತ ಸೇವೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆಗಳು:

ಜಿಯೋ ಸಮ್ಮರ್ ಸರ್ಪ್ರೈಸ್ ಕೊಡುಗೆಗಳು:

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್‌ನಲ್ಲಿ 303 ಮತ್ತು 499 ರಿಜಾರ್ಜ್ ಮಾಡಿಸುವರಿಗೆ ಮಾತ್ರ ಮೂರು ತಿಂಗಳ ಉಚಿತ ಸೇವೆ ಇದ್ದು ಅದಕ್ಕಿಂತ ಹೆಚ್ಚಿನ ರಿಜಾರ್ಜ್ ಮಾಡಿಸುವವರಿಗೆ ಬೆರೆ ಬೇರೆ ಆಫರ್ ಇದೆ. 999 ರೂ ರಿಜಾರ್ಜ್ ಮಾಡಿಸಿದರೆ, ಮೂರು ತಿಂಗಳ ಉಚಿತ ಸೇವೆಯೊಂದಿಗೆ 100 GB ಡೇಟಾ ದೊರೆಯಲಿದೆ. ಹೀಗೇ 999 ರೂಗಳಿಗಿಂತ ಹೆಚ್ಚಿನ ರಿಜಾರ್ಜ್ ಮಾಡಿಸಿದವರಿಗೆ 100 GB ಹೆಚ್ಚಾಗಿ ದೊರೆಯಲಿದೆ.

ಬೂಸ್ಟರ್ ಪ್ಲಾನ್‌ಗಳು:

ಬೂಸ್ಟರ್ ಪ್ಲಾನ್‌ಗಳು:

ಇದಲ್ಲದೇ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ನಲ್ಲಿ ಬೂಸ್ಟರ್ ಪ್ಲಾನ್‌ನಲ್ಲಿಯೂ ಬದಲಾವಣೆ ಮಾಡಲಾಗಿದೆ. 11 ರೂಗೆ 100 MB ಡೇಟಾ, 51 ರೂಗೆ 1GB ಡೇಟಾ, 91 ರೂ ಗೆ 2GB, 201 ರೂ. ಗಳಿಗೆ 5GB ಹಾಗೂ 301 ರೂಗಳಿಗೆ 10GB ಡೇಟಾ ದೊರೆಯಲಿದೆ.

149 ರೂ, ಪಾವತಿ ಮಾಡಿರುವವರು ಕಥೆ ಏನು..?

149 ರೂ, ಪಾವತಿ ಮಾಡಿರುವವರು ಕಥೆ ಏನು..?

ಈಗಾಗಲೇ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡು 149 ರೂ. ಪಾವತಿ ಮಾಡಿರುವವರು ಸಹ ಈ ಸಮ್ಮರ್ ಸರ್ಪ್ರೈಸ್ ಆಫರ್ ಪಡೆದುಕೊಳ್ಳಬಹುದಾಗಿದ್ದು, ಮತ್ತೆ 303 ರೂ. ಪಾವತಿ ಮಾಡಿದರೆ ಮೂರು ತಿಂಗಳು ಉಚಿತ ಸೇವೆಯೂ ಮುಂದುವರೆಯಲಿದೆ. ಆ ನಂತರ ಮತ್ತೆ 149 ರೂ. ಸೇವೆಯು ಮುಂದುವರೆಯಲಿದೆ.

 ಏಪ್ರಿಲ್ 15 ರ ಒಳಗೆ ರಿಚಾರ್ಜ್ ಮಾಡಿಸಲಿಲ್ಲ ಎಂದರೆ..?

ಏಪ್ರಿಲ್ 15 ರ ಒಳಗೆ ರಿಚಾರ್ಜ್ ಮಾಡಿಸಲಿಲ್ಲ ಎಂದರೆ..?

ಮಾರ್ಚ್ 31ರ ವರೆಗೂ ನೀಡಿದ ಕಾಲಾವಕಾಶವನ್ನು ಮತ್ತೆ 15 ದಿನ ವಿಸ್ತರಿಸಿದೆ ಜಿಯೋ, ಈ ಹಿನ್ನಲೆಯಲ್ಲಿ ಏಪ್ರಿಲ್ 15ರ ಮಧ್ಯರಾತ್ರಿಯ ಒಳಗೆ ರಿಚಾರ್ಜ್ ಮಾಡಿಸಿಲಿಲ್ಲ ಎಂದರೆ ಸಮ್ಮರ್ ಸರ್ಪ್ರೈಸ್ ಆಫರ್ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಕಡೆಯ ದಿನಾಂಕಕ್ಕೂ ಮುನ್ನವೇ ರಿಚಾರ್ಜ್ ಮಾಡಿಸುವುದನ್ನು ಮರೆಯಬೇಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Prime membership till April 15, along with a new ‘Summer Surprise’ plan for its subscribers. With ‘Summer Surprise’ offer. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot