Subscribe to Gizbot

ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಿರುವ ಹೊಸ ಪ್ಲಾನ್‌ಗಳು...! ಒಂದಲ್ಲ, ಎರಡಲ್ಲ, ಮೂರು...!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು 1GB ಡೇಟಾ ಆಫರ್ ನಿಂದ ಹೊರ ಬಂದು ದಿನಕ್ಕೇ 2GB ಯಿಂದ 2.5GB ಡೇಟಾವನ್ನು ನೀಡುವ ಆಫರ್ ಗಳೊಂದಿಗೆ ಕಾಣಿಸಿಕೊಂಡಿದೆ. ಬಳಕೆದಾರರಿಗೂ ಡೇಟಾ ಹಸಿವು ಹೆಚ್ಚಾಗಿದ್ದು, ಇದನ್ನು ಅರಿತ ಏರ್‌ಟೆಲ್-ಜಿಯೋ-ವೊಡಾಫೋನ್‌ಗಳು ಜಿದ್ದಿಗೆ ಬಿದ್ದರುವ ಮಾದರಿಯಲ್ಲಿ ಒಂದರ ಹಿಂದೆ ಒಂದರಂತೆ ಆಫರ್ ಗಳನ್ನು ಘೋಷಣೆ ಮಾಡುತ್ತಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಿರುವ ಹೊಸ ಪ್ಲಾನ್‌ಗಳು.!

ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಡೇಟಾ ಆಫರ್ ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ಏರ್‌ಟೆಲ್-ಜಿಯೋ-ವೊಡಾಫೋನ್‌ಗಳು ಬಳಕೆದಾರರಿಗೆ ವಿವಿಧ ಮಾದರಿಯಲ್ಲಿ ಆಫರ್ ಗಳನ್ನು ನೀಡುತ್ತಿದ್ದು, ನೋಡಲು ಒಂದೇ ಮಾದರಿಯಲ್ಲಿ ಕಾಣಿಸಿಕೊಳ್ಳಲಿವೆ. ಈ ಹಿನ್ನಲೆಯ ಡೇಟಾ ಪ್ಯಾಕ್ ಗಳ ಕುರಿತ ಮಾಹಿತಿಯೂ ಮುಂದಿದೆ.

ಓದಿರಿ: ಅಮೆಜಾನ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 7000 ಕಡಿತ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ರೂ.198 ಪ್ಲಾನ್:

ಜಿಯೋ ರೂ.198 ಪ್ಲಾನ್:

ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಸೇವೆಯನ್ನು ನೀಡುವ ರಿಲಯನ್ಸ್ ಮಾಲೀಕತ್ವದ ಜಿಯೋ, ರೂ.198ಕ್ಕೆ 28 ದಿನಗಳ ಕಾಲ ನಿತ್ಯ 2G ಡೇಟಾವನ್ನು ಬಳಕೆಗೆ ನೀಡುವ ಆಫರ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಯಾವುದೇ ಷರತ್ತು ವಿಧಿಸದೆ ಬಳಕೆದಾರರಿಗೆ ಉಚಿತ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಏರ್‌ಟೆಲ್ ರೂ.249 ಪ್ಲಾನ್:

ಏರ್‌ಟೆಲ್ ರೂ.249 ಪ್ಲಾನ್:

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಚಂದದಾರನ್ನು ಹೊಂದಿರುವ ಏರ್‌ಟೆಲ, ರೂ.249 ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ಬಳಕೆಗೆ ನೀಡಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 100 SMS ಕಳುಹಿಸುವ ಮತ್ತು ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ರೋಮಿಗ್ ಸಹ ಉಚಿತ.

ವೊಡಾಫೋನ್ ರೂ.348 ಪ್ಲಾನ್:

ವೊಡಾಫೋನ್ ರೂ.348 ಪ್ಲಾನ್:

ಇದೇ ಮಾದರಿಯಲ್ಲಿ ವೊಡಾಫೋನ್ ಸಹ ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವ ಸಲುವಾಗಿ ರೂ.348 ಪ್ಲಾನ್ ವೊಂದನ್ನು ನೀಡಿದ್ದು, ಇದರಲ್ಲಿ ನಿತ್ಯ 2.5GB ಡೇಟಾ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ಲಾನ್‌ನಲ್ಲಿ ಉಚಿತವಾಗಿ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ಇದೆ.

ಎಲ್ಲಿ ಬೇಕಾದರು ರೀಚಾರ್ಜ್ ಮಾಡಿಕೊಳ್ಳಬಹುದು:

ಎಲ್ಲಿ ಬೇಕಾದರು ರೀಚಾರ್ಜ್ ಮಾಡಿಕೊಳ್ಳಬಹುದು:

ಈ ಮೂರು ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ರಿಚಾರ್ಜ್ ಮಾಡಿಕೊಳ್ಳುವುದುದನ್ನು ಸುಲಭ ಮಾಡಲು ವೆಬ್ ಸೈಟ್ ಮತ್ತು ಆಪ್‌ಗಳ ಮೂಲವೇ ಈ ಪ್ಲಾನ್‌ಗಳನ್ನು ಪಡೆಯುವ ಅವಕಾಶ ಮಾಡಿಕೊಟ್ಟಿವೆ. ಜಿಯೋ ತನ್ನ ಮೈ ಜಿಯೋ ಆಪ್ ಮತ್ತು ವೆಬ್‌ಸೈಟ್, ಏರ್‌ಟೆಲ್ ತನ್ನ ಮೈ ಏರ್‌ಟೆಲ್ ಆಪ್ ಮತ್ತು ವೆಬ್ ಸೈಟ್ ಹಾಗೆಯೇ ವೊಡಾಫೋನ್ ತನ್ನ ವೆಬ್ ಸೈಟಿನಲ್ಲಿ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How To Link Aadhaar With EPF Account Without Login (KANNADA)

ಓದಿರಿ: ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ..!

English summary
Jio Vs Airtel Vs Vodafone: 2-2.5 GB Data Per Day Recharge Plans. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot