ಜಿಯೋ ಪೇಜಸ್ ಈಗ ಆಂಡ್ರಾಯ್ಡ್ ಟಿವಿಯಲ್ಲಿ ಲಭ್ಯ; 8 ಭಾಷೆಗಳ ಸಫೋರ್ಟ್!

|

ಜಿಯೋ ಪೇಜಸ್‌ ಮೇಡ್‌ ಇನ್‌ ಇಂಡಿಯಾ ವೆಬ್‌ಬ್ರೌಸರ್‌ ಆಗಿದೆ. ಇತರೆ ವೆಬ್‌ಬ್ರೌಸರ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ ಜಿಯೋ ಪೇಜಸ್‌ ಇದೀಗ ಆಂಡ್ರಾಯ್ಡ್‌ ಟಿವಿಯಲ್ಲೂ ಲಭ್ಯವಾಗಲಿದೆ. ಆಂಡ್ರಾಯ್ಡ್ ಟಿವಿ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಜಿಯೋ ಪೇಜಸ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಜಿಯೋ ಬ್ರೌಸರ್ ಕೇವಲ ಜಿಯೋ ಸೆಟ್-ಟಾಪ್ ಬಾಕ್ಸ್ ಮೂಲಕ ಟಿವಿಯಲ್ಲಿ ಮಾತ್ರ ಲಭ್ಯವಿದೆ ಎಂದು ಕಂಪನಿ ಘೋಷಿಸಿತು. ಆದರೆ ಈಗ ಇದನ್ನು ಆಂಡ್ರಾಯ್ಡ್ ಟಿವಿಯಲ್ಲಿನ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

ರಿಲಾಯನ್ಸ್‌

ಹೌದು, ರಿಲಾಯನ್ಸ್‌ ಜಿಯೋ ಒಡೆತನದ ಸ್ವದೇಶಿ ಬ್ರೌಸರ್‌ ಜಿಯೋ ಪೇಜಸ್‌ ಇನ್ಮುಂದೆ ಆಂಡ್ರಾಯ್ಡ್‌ ಟಿವಿಗಳಲ್ಲಿಯೂ ಲಭ್ಯವಾಗಲಿದೆ. ಇನ್ನು ಈ ಬ್ರೌಸರ್ ಟಿವಿ ಪರದೆಗಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಭಾರತ ಬ್ರೌಸರ್‌ನಲ್ಲಿ ತಯಾರಿಸಲ್ಪಟ್ಟಿದೆ ಎಂದು ಜಿಯೋ ಸಂಸ್ಥೆ ಹೇಳಿದೆ. ವೇಗವಾದ ಎಂಜಿನ್ ಸ್ಥಳಾಂತರ, ಉತ್ತಮ-ವರ್ಗದ ವೆಬ್‌ಪೇಜ್‌ ರೆಂಡರಿಂಗ್, ವೇಗವಾಗಿ ಪೇಜ್‌ ಲೋಡ್, ಮೀಡಿಯಾ ಸ್ಟ್ರೀಮಿಂಗ್ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ವರ್ಧಿತ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ ಎನ್ನಲಾಗಿದೆ. ಇನ್ನುಳಿದಂತೆ ಆಂಡ್ರಾಯ್ಡ್‌ ಟಿವಿ ಜಿಯೋ ಪೇಜಸ್‌ನಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ ಪೇಜಸ್

ಜಿಯೋ ಪೇಜಸ್‌ ಹಿಂದಿ, ಮರಾಠಿ, ತಮಿಳು, ಗುಜರಾತಿ, ತೆಲುಗು, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆ ಸೇರಿದಂತೆ ಒಟ್ಟು ಎಂಟು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಬಳಕೆದಾರರು ತಮ್ಮ ಆದ್ಯತೆಯ ಭಾಷೆಗೆ ಅನುಗುಣವಾಗಿ ಸುದ್ದಿ ಫೀಡ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ವೆಬ್ ಪೇಜ್‌ ಅನ್ನು incognito ಮೋಡ್‌ನಲ್ಲಿ ಸಹ ಪ್ರವೇಶಿಸಬಹುದು. ಇದು ಬ್ರೌಸಿಂಗ್ ಹಿಸ್ಟರಿಯನ್ನು ವ್ಯವಸ್ಥೆಯಲ್ಲಿ ಸ್ಟೋರೇಜ್‌ ಆಗುವುದನ್ನು ತಡೆಯುವ ಮೂಲಕ ಪ್ರೈವೆಟ್‌ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಜಿಯೋಪೇಜ್

ಇನ್ನು ಜಿಯೋಪೇಜ್ ಮ್ಯೂಸಿಕ್‌, ಮಕ್ಕಳು, ಲೈಪ್‌ಸ್ಟೈಲ್‌, ಸುದ್ದಿ ಮತ್ತು ಇತರವುಗಳನ್ನು ಒಳಗೊಂಡಂತೆ 20 ಕ್ಕೂ ಹೆಚ್ಚು ವಿಭಾಗಗಳಲ್ಲಿ 10,000 ಕ್ಕೂ ಹೆಚ್ಚು ವೀಡಿಯೊಗಳನ್ನು ಹೊಂದಿರುವ ಮೀಸಲಾದ ವೀಡಿಯೊ ವಿಭಾಗವನ್ನು ಹೊಂದಿದೆ. ಜೊತೆಗೆ ಜಿಯೋ ಕಂಪನಿಯು ಕಳೆದ ವರ್ಷ ಈ ಜಿಯೋ ಪೇಜ್‌ಗಳನ್ನು ಹೊಸ ಫೀಚರ್ಸ್‌ಗಳೊಂದಿಗೆ ಪ್ರಾರಂಭಿಸಿತ್ತು. ಈ ಹೊಸ ಬ್ರೌಸರ್ ಡೇಟಾ ಗೌಪ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಾಹಿತಿಯ ಬಳಕೆದಾರರಿಗೆ ನಿಯಂತ್ರಣವನ್ನು ನೀಡುತ್ತದೆ.

ಜಿಯೋ ಪೇಜಸ್

ಇದಲ್ಲದೆ ಜಿಯೋ ಪೇಜಸ್‌ ನಿಮಗೆಲ್ಲಾ ತಿಳಿದಿರುವಂತೆ ಇದು ಶಕ್ತಿಯುತ ಕ್ರೋಮಿಯಂ ಬ್ಲಿಂಕ್ ಎಂಜಿನ್‌ನಲ್ಲಿ ನಿರ್ಮಿಸಲ್ಪಟ್ಟಿದೆ. ಇದು ವೇಗವಾದ ಎಂಜಿನ್ ಸ್ಥಳಾಂತರ, ಉತ್ತಮ-ವರ್ಗದ ವೆಬ್‌ಪುಟ ರೆಂಡರಿಂಗ್, ವೇಗದ ಪುಟ ಲೋಡ್‌ಗಳು, ದಕ್ಷ ಮಾಧ್ಯಮ ಸ್ಟ್ರೀಮಿಂಗ್, ಎಮೋಜಿ ಡೊಮೇನ್ ಬೆಂಬಲ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ವರ್ಧಿತ ಬ್ರೌಸಿಂಗ್ ಅನುಭವವನ್ನು ನೀಡುತ್ತದೆ. ಬಳಕೆದಾರರು ತಮ್ಮ ಮುಖಪುಟದ ನೋಟವನ್ನು ಬದಲಾಯಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ. ಅಲ್ಲದೆ ಡಾರ್ಕ್ ಮೋಡ್‌ಗೆ ಬದಲಾಯಿಸುವ ಆಯ್ಕೆಯನ್ನು ಸಹ ನೀಡಿದೆ.

Most Read Articles
Best Mobiles in India

English summary
JioPages Now Available For Android TV Users; To Support 8 Languages.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X