ಲಾವಾ ಬ್ಲೇಜ್ NXT ಲಾಂಚ್‌ಗೆ ಸಿದ್ಧತೆ; ಭಾರತದಲ್ಲಿ ನಿರೀಕ್ಷಿತ ಬೆಲೆ ಎಷ್ಟು!?

|

ಲಾವಾ ಭಾರತೀಯ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಕಂಪೆನಿಯಾಗಿದ್ದು, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್ ಹಾಗೂ ಇನ್ನಿತರೆ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ನಡುವೆ ಕೆಲವು ವಾರಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಇದರ ಬೆನ್ನಲ್ಲೇ ಈಗ ಕಡಿಮೆ ಸಮಯದ ಅಂತರದಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನಾವರಣಕ್ಕೆ ಸಿದ್ಧವಾಗಿದೆ.

ಲಾವಾ ಕಂಪೆನಿ

ಹೌದು, ಲಾವಾ ಕಂಪೆನಿಯು ಮತ್ತೊಂದು ಬ್ಲೇಜ್ ಸರಣಿಯ ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ NXT (Lava Blaze NXT) ಅನ್ನು ಅನಾವರಣ ಮಾಡಲು ವೇದಿಕೆ ಸಜ್ಜುಗೊಂಡಿದೆ. ಪ್ರಮುಖ ವಿಷಯ ಎಂದರೆ ಈ ಫೋನ್‌ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗೆಯೇ ಅಮೆಜಾನ್‌ ಮೂಲಕ ಲಾವಾ ಬ್ಲೇಜ್ NXT ತನ್ನ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಅಂತೆಯೇ ನವೆಂಬರ್ 25 ರಂದು ಅಂದರೆ ನಾಳೆ ಲಾಂಚ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಿದ್ರೆ ಈ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹಾಗೂ ಸಂಭವನೀಯ ಬೆಲೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಲಾವಾ ಬ್ಲೇಜ್ NXT ಸ್ಮಾರ್ಟ್‌ಫೋನ್ 6.5 ಇಂಚಿನ IPS ಎಲ್‌ಸಿಡಿ ಡಿಸ್‌ಪ್ಲೇ ಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಇದು HD+ ರೆಸಲ್ಯೂಶನ್ ಹಾಗೂ 20:9 ಆಕಾರ ಅನುಪಾತವನ್ನು ಪಡೆದಿರಲಿದೆ.

ಪ್ರೊಸೆಸರ್ ವಿವರ

ಪ್ರೊಸೆಸರ್ ವಿವರ

ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G 37 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದನ್ನು 12nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ ಹಾಗೆಯೇ ಸಂಯೋಜಿತ IMG ಪವರ್‌VR GE8320 GPU ಬಲ ಪಡೆದಿರಲಿದೆ. ಪ್ರಮುಖ ವಿಷಯ ಎಂದರೆ ಟೆಕ್ನೋ ಸ್ಪಾರ್ಕ್‌9, ಇನ್ಫಿನಿಕ್ಸ್ ಹಾಟ್ 12 ಸೇರಿದಂತೆ ಪ್ರಮುಖ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಈ ಪ್ರೊಸೆಸರ್‌ ಅನ್ನು ಹೊಂದಿವೆ. ಇದರೊಂದಿಗೆ ಈ ಫೋನ್‌ 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯನ್ನು ಪಡೆದಿರಲಿದೆ ಎಂದು ನಂಬಲಾಗಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಲಾವಾ ಬ್ಲೇಜ್ NXT ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರಲಿದೆ ಎನ್ನಲಾಗಿದೆ. ಅದರಲ್ಲಿ ಪ್ರಾಥಮಿಕ ಸೆನ್ಸರ್‌ 13MP ಆಗಿರಲಿದ್ದು, ಇನ್ನುಳಿದ ಎರಡು ಸೆನ್ಸರ್‌ ಎಷ್ಟು ಮೆಗಾಪಿಕ್ಸೆಲ್‌ ಹೊಂದಿರಲಿವೆ ಎಂಬುದು ತಿಳಿದುಬಂದಿಲ್ಲ. ಹಾಗೆಯೇ 13ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಇದು ಪಡೆದಿರಲಿದೆ ಎಂದು ಊಹಿಸಲಾಗಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಲಾವಾ ಬ್ಲೇಜ್ NXT ಸ್ಮಾರ್ಟ್‌ಫೋನ್ 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದೆ. ಹಾಗೆಯೇ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಲಾವಾ ಬ್ಲೇಜ್‌ನಂತೆಯೇ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನೇ ಇದು ಹೊಂದಿರಬಹುದು ಎಂದು ಹೇಳಲಾಗುತ್ತದೆ. ಇನ್ನುಳಿದಂತೆ ಈ ಫೋನ್ 3.5 ಎಂಎಂ ಆಡಿಯೊ ಜಾಕ್ ಆಯ್ಕೆ ಪಡೆದಿರಲಿದೆ.

ಮೀಡಿಯಾ ಟೆಕ್

ಅದರಂತೆ ಮೀಡಿಯಾ ಟೆಕ್ ಹಿಲಿಯೋ G37 ಚಾಲಿತ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ 8,000 ರೂ. ಗಳಿಂದ 10,000ರೂ. ಗಳ ಬೆಲೆಯಲ್ಲಿ ಮಾರಾಟವವಾಗುತ್ತಿವೆ. ಅದರಂತೆ ಈ ಹೊಸ ಮುಂಬರುವ ಲಾವಾ ಬ್ಲೇಜ್‌ NXT ಸಹ ಇದೇ ಪ್ರೊಸೆಸರ್‌ ಹೊಂದಿರಲಿದ್ದು, ಯಾವ ರೀತಿಯ ಬೆಲೆಯನ್ನು ನಿಗದಿ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಹಾಗೆಯೆ ಮೀಡಿಯಾ ಟೆಕ್‌ಹಿಲಿಯೋ A22 ಪ್ರೊಸೆಸರ್‌ ಆಯ್ಕೆ ಹೊಂದಿದ್ದ ಲಾವಾ ಬ್ಲೇಜ್ ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ 8,699 ರೂ.ಗಳನ್ನು ನಿಗದಿ ಮಾಡಲಾಗಿತ್ತು.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ ನ ಬೆಲೆ ನಿಖರವಾಗಿ ತಿಳಿದಿಲ್ಲವಾದರೂ ಅಂದಾಜು 10,000 ರೂ. ಗಳ ಅಸುಪಾಸಿನಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಈ ಫೋನ್‌ ಬಗ್ಗೆ ಈಗಾಗಲೇ ಅಮೆಜಾನ್‌ನಲ್ಲಿ ಟ್ರೇಲರ್‌ ಲಾಂಚ್‌ ಮಾಡಿರುವ ಲಾವಾ, ಅಮೆಜಾನ್‌ ಮೂಲಕವೇ ಆಫರ್‌ ಬೆಲೆಯಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದು ಎಂಬ ಹಿಂಟ್ ನೀಡಿದೆ.

Best Mobiles in India

Read more about:
English summary
Lava Blaze NXT Launching on November 25 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X