ಲಾವಾ ಅಗ್ನಿ 5G ಫೋನ್‌ಗೆ ಭಾರೀ ಡಿಸ್ಕೌಂಟ್‌!..ಇಷ್ಟೊಂದು ರಿಯಾಯಿತಿ ಮತ್ತೆ ಸಿಗಲ್ಲ!

|

ಪ್ರಸ್ತುತ ಮೊಬೈಲ್‌ ಮಾರುಕಟ್ಟೆಯು ವಿಸ್ತಾರವಾಗಿ ಬೆಳೆದಿದ್ದು, ನೂತನ ಫೋನ್‌ ಖರೀದಿಸುವ ಗ್ರಾಹಕರಿಗೆ ಒಂದಿಲ್ಲೊಂದು ಕೊಡುಗೆಗಳು ಲಭ್ಯ ಇವೆ. ಅದರಲ್ಲಿಯೂ ಹಬ್ಬದ ದಿನಗಳು ಅಥವಾ ಸ್ಪೆಷಲ್‌ ದಿನಗಳ ಬಂದರೆ, ಹೆಚ್ಚಿನ ರಿಯಾಯಿತಿ ಸಿಗುವ ಸಾಧ್ಯತೆಗಳೇ ಅಧಿಕ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸ್ವದೇಶಿ ಮೊಬೈಲ್‌ ಬ್ರ್ಯಾಂಡ್‌ ಲಾವಾ (LAVA) ತನ್ನ ಕೆಲವು ಫೋನ್‌ಗಳಿಗೆ ಬಂಫರ್‌ ಡಿಸ್ಕೌಂಟ್‌ ಘೋಷಿಸಿದೆ.

ಡಿಸ್ಕೌಂಟ್‌

ಹೌದು, ಲಾವಾ (LAVA) ಮೊಬೈಲ್‌ ಸಂಸ್ಥೆಯು ಗಣರಾಜ್ಯೋತ್ಸವದ (Republic Day) ಅಂಗವಾಗಿ ತನ್ನ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ 26% ವರೆಗೂ ಡಿಸ್ಕೌಂಟ್‌ ಲಭ್ಯ ಮಾಡಿದೆ. ಅಂದಹಾಗೆ ಅಧಿಕೃತ ಲಾವಾ ಸ್ಟೋರ್‌ ಅಥವಾ ಇ ಕಾಮರ್ಸ್ ದೈತ್ಯ ಅಮೆಜಾನ್‌ ತಾಣದಲ್ಲಿ ಲಾವಾ ಫೋನ್‌ ಖರೀದಿಸುವ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಕೊಡುಗೆಯು ಜನವರಿ 26, ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಲಿದೆ.

ಖರೀದಿಸಬಹುದಾಗಿದೆ

ಲಾವಾ ಸಂಸ್ಥೆಯ ಈ ವಿಶೇಷ ಮೇಳದಲ್ಲಿ ಸಂಸ್ಥೆಯು ಆಯ್ದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ ಗಳಿಗೆ ಅತ್ಯುತ್ತಮ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಆ ಪೈಕಿ ಸಂಸ್ಥೆಯ ಇತ್ತೀಚಿನ ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್‌ ಅನ್ನು 13,313ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅಂದಹಾಗೆ ಪೇಮೆಂಟ್‌ ಪೇಜ್‌ನಲ್ಲಿ *LAVA26* ಕೂಪನ್‌ ಬಳಕೆ ಮಾಡುವ ಮೂಲಕ ಈ ಕೊಡುಗೆಯನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಸಂಸ್ಥೆಯು ತಿಳಿಸಿದೆ. ಹಾಗಾದರೆ ಲಾವಾ ಅಗ್ನಿ 5G ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 90Hz ರೀಫೇಶ್‌ ರೇಟ್‌ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ Dimensity 810 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕ್ವಾಡ್‌ ಕ್ಯಾಮೆರಾ ರಚನೆ

ಕ್ವಾಡ್‌ ಕ್ಯಾಮೆರಾ ರಚನೆ

ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಅವುಗಳಲ್ಲಿ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾ 5 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ನಾಲ್ಕನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಅದೇ ರೀತಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 30W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಇದು 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡುತ್ತದೆ.

ಈ ಲಾವಾ ಫೋನ್‌ಗಳಿಗೂ ಆಫರ್‌

ಈ ಲಾವಾ ಫೋನ್‌ಗಳಿಗೂ ಆಫರ್‌

ಲಾವಾ ಅಗ್ನಿ 5G ಫೋನ್‌ ಅಲ್ಲದೇ ಲಾವಾ ಬ್ಲೇಜ್‌ 5G ಫೋನ್, ಲಾವಾ ಬ್ಲೇಜ್‌ ಪ್ರೊ ಫೋನ್, ಲಾವಾ ಬ್ಲೇಜ್‌ ನೆಕ್ಸ್ಟ್ ಫೋನ್, ಲಾವಾ ಬ್ಲೇಜ್‌ ಫೋನ್, ಲಾವಾ ಯುವಾ ಪ್ರೊ ಫೋನ್, ಲಾವಾ X3 ಸ್ಮಾರ್ಟ್‌ಫೊನ್‌ಗಳು ಸಹ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿವೆ.

Best Mobiles in India

English summary
Lava Republic Day offer: sale price will be applicable from 12 noon onwards on January 26. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X